ETV Bharat / bharat

ಉತ್ತರ ಭಾರತದಲ್ಲಿ ಕುಸಿಯುತ್ತಿದೆ ಅಂತರ್ಜಲ ಮಟ್ಟ - Groundwater - GROUNDWATER

ಕಡಿಮೆ ಮಳೆ ಮತ್ತು ಬೆಚ್ಚಗಿನ ಚಳಿಗಾಲ ಭವಿಷ್ಯದಲ್ಲಿ ನೀರಾವರಿ ಬೇಡಿಕೆ ಹೆಚ್ಚಿಸಿ, ಅಂತರ್ಜಲ ಮಟ್ಟ ಕಡಿಮೆ ಮಾಡುತ್ತದೆ.

450 cubic kilometres of groundwater was lost in northern India
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 8, 2024, 2:20 PM IST

ಹೈದರಾಬಾದ್​: ಹವಾಮಾನ ಬದಲಾವಣೆಯಿಂದಾಗಿ 2002ರಿಂದ 2021ರವರೆಗೆ 450 ಕ್ಯೂಬಿಕ್​ ಕಿ.ಮೀ ಅಂತರ್ಜಲ ನಷ್ಟವಾಗಿದೆ. ಅಲ್ಲದೇ ಇದು ಸವಕಳಿಗೂ ಕಾರಣವಾಗಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಗಮನಿಸಿ, ಸ್ಯಾಟಲೈಟ್​ ದತ್ತಾಂಶ ಮತ್ತು ಮಾದರಿಗಳ ಮೂಲಕ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ವೇಳೆ 1951ರಿಂದ 2021ರವರೆಗೆ ಮಳೆಗಾಲ (ಜೂನ್​- ಸೆಪ್ಟೆಂಬರ್​)ನಲ್ಲಿ ಉತ್ತರ ಭಾರತದಲ್ಲಿ ಮಳೆ ಶೇ 8.5ರಷ್ಟು ಕ್ಷೀಣಿಸಿರುವುದು ಕಂಡುಬಂದಿದೆ. ಅಲ್ಲದೇ, ಈ ಪ್ರದೇಶಗಳಲ್ಲಿ ಚಳಿಗಾಲದ ಅವಧಿ ಕೂಡ 0.3 ಡಿಗ್ರಿ ಸೆಲ್ಸಿಯಸ್​ ಬೆಚ್ಚಗಿರುವುದು ದಾಖಲಾಗಿದೆ ಎಂದಿದ್ದಾರೆ.

ಹೈದರಾಬಾದ್​ನ ನ್ಯಾಷನಲ್​ ಜಿಯೋಫಿಸಿಕಲ್​ ರಿಸರ್ಚ್​ ಇನ್ಸುಟಿಟ್ಯೂಟ್​ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಮಳೆಗಾಲದಲ್ಲಿನ ಕಡಿಮೆ ಮಳೆ ಮತ್ತು ಚಳಿಗಾಲದ ಬೆಚ್ಚಗಿನ ವಾತವಾರಣವೂ ನೀರಾವರಿ ನೀರಿಗೆ ಬೇಡಿಕೆ ಹೆಚ್ಚಿಸುತ್ತದೆ. ಹಾಗೆಯೇ ಇದು ಅಂತರ್ಜಲ ತುಂಬಿಸುವ ಕಾರ್ಯವನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಉತ್ತರ ಭಾರತದಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ಸಂಶೋಧಕರ ತಂಡ ಒತ್ತಿ ಹೇಳಿದೆ.

ಒಣ ಮಳೆಗಾಲದಿಂದ ಮಳೆಗಾಲದ ಅವಧಿಯಲ್ಲಿ ಮಳೆ ಕೊರತೆಯಿಂದ ಬೆಳೆಗಳ ಸುಸ್ಥಿರತೆ ಕಾಪಾಡಲು ಅಂತರ್ಜಲದ ಮೇಲೆ ಅವಲಂಬಿಸುವಂತೆ ಆಗುತ್ತದೆ. ಜೊತೆಗೆ, ಬೆಚ್ಚಗಿನ ಚಳಿಗಾಲವೂ ಮಣ್ಣನ್ನು ಒಣಗಿಸುವ ಮೂಲಕ ನೀರಾವರಿ ಬೇಡಿಕೆ ಹೆಚ್ಚಿಸುತ್ತದೆ. ಈ ನಡುವೆ 2022 ಸಾಮಾನ್ಯವಾಗಿ ಅತಿ ಬೆಚ್ಚಗಿನ ಚಳಿಗಾಲವಾಗಿದೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ. 1901ರಿಂದ ದಾಖಲಾದ ಅತಿ ಹೆಚ್ಚು ಬೆಚ್ಚಿನ ಐದನೇ ಚಳಿಗಾಲ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಬದಲಾದಂತೆ ಭೂಮಿ ಬೆಚ್ಚಗೆ ಆಗಿ ಅದು ಅಂತರ್ಜಲದ ಸವಕಳಿಗೆ ಉಂಟಾಗುತ್ತದೆ. ಅಲ್ಲದೇ, ಒಂದೇ ಅವಧಿಯಲ್ಲಿ ಬೀಳುವ ಅತಿ ಹೆಚ್ಚಿನ ಮಳೆಯು ಅಂತರ್ಜಲ ಹೆಚ್ಚಿಸಲು ಸಹಾಯ ಮಾಡುವುದಿಲ್ಲ ಎಂದು ಐಐಟಿ ಗಾಂಧಿನಗರದ ಪ್ರೊಫೆಸರ್ ವಿಮಲ್​ ಮಿಶ್ರಾ ತಿಳಿಸಿದ್ದಾರೆ.

ಹಲವು ದಿನಗಳ ಕಾಲ ಬೀಳುವ ಕಡಿಮೆ ತೀವ್ರತೆಯ ಮಳೆಯಿಂದಾಗಿ ಮಾತ್ರ ಅಂತರ್ಜಲ ವೃದ್ಧಿಯಾಗುತ್ತದೆ. ಅಂತರ್ಜಲ ಮಟ್ಟದ ಬದಲಾವಣೆ ಮಳೆಬೀಳುವಿಕೆ ಮೇಲೆ ನಿರ್ಧಾರವಾಗಿದೆ. ಹಾಗೇ, ರಾಬಿ ಮತ್ತು ಖಾರೀಫ್​ ಬೆಳೆಗಳಿಗೆ ಬಬೇಕಾಗುವ ನೀರಾವರಿ ಪಂಪ್​ ಮಾಡುವ ಆಧಾರದ ಮೇಲೆ ನಿರ್ಧರಿತವಾಗಿದೆ.

ಮಳೆಗಾಲದ ಕಡಿಮೆ ಮಳೆ ಮತ್ತು ಬೆಚ್ಚಗಿನ ಚಳಿಗಾಲವೂ ಭವಿಷ್ಯದಲ್ಲಿ ನೀರಾವರಿ ಬೇಡಿಕೆ ಹೆಚ್ಚಿಸಿ, ಅಂತರ್ಜಲ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ವೇಗವಾಗಿ ಸವಕಳಿಯಾಗುತ್ತಿರುವ ಅಂತರ್ಜಲ ತಡೆಯುವತ್ತ ಕಾರ್ಯ ನಿರ್ವಹಿಸಬೇಕಿದೆ ಎಂದಿದ್ದಾರೆ. ಉತ್ತರ ಭಾರತದಲ್ಲಿ 1-3 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಹೆಚ್ಚಳ ಕಂಡಿದ್ದು, ಇದು ಅಂತರ್ಜಲ ಮಟ್ಟ 7- 10ರಷ್ಟು ಕುಸಿತಕ್ಕೆ ಕಾರಣವಾಗಿದೆ.

ಭಾರತದಲ್ಲಿ ಅಂತರ್ಜಲ ಎಂಬುದು ಪ್ರಮುಖವಾಗಿದೆ. ಬಿಸಿಯಾಗುತ್ತಿರುವ ಹವಾಮಾನದಲ್ಲಿ ಇದು ಹೆಚ್ಚು ನಿರ್ಣಾಯಕ ಸಂಪನ್ಮೂಲವಾಗಿದೆ. ಭಾರತದಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ಹಲವು ಈ ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಭವಿಷ್ಯದಲ್ಲಿನ ನೀರಿನ ಸಂಪನ್ಮೂಲಕ ಕುರಿತು ಗಮನ ಹರಿಸದೆ ಇರುವುದು ಭವಿಷ್ಯದಲ್ಲಿ ದೊಡ್ಡ ಬಿಕ್ಕಟ್ಟಿನ ಸವಾಲಿಗೆ ಕಾರಣವಾಗಲಿದೆ ಎಂದಿದ್ದಾರೆ ಸಂಶೋಧಕರು.(ಪಿಟಿಐ)

ಇದನ್ನೂ ಓದಿ: ವಿಪರೀತ ಅಂತರ್ಜಲ ಬಳಕೆಯಿಂದ ವಾಲಿದ ಭೂಮಿ; ಹವಾಮಾನ ಬದಲಾವಣೆಯ ಆತಂಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.