ETV Bharat / bharat

ಕೇರಳದ ಬಗ್ಗೆ ಯಾವುದೇ ತಾರತಮ್ಯವಿಲ್ಲ, 2024ರಲ್ಲಿ ಬಿಜೆಪಿ ಎರಡಂಕಿ ದಾಟುತ್ತದೆ: ಮೋದಿ - Prime Minister Narendra Modi

ಬಿಜೆಪಿಗೆ ಕಡಿಮೆ ಮತಗಳು ಹಾಗು ಸೀಟು ಸಿಗುತ್ತಿವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಕೇರಳಕ್ಕೆ ತಾರತಮ್ಯ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

PM Narendra Modi
ಪ್ರಧಾನಿ ನರೇಂದ್ರ ಮೋದಿ
author img

By ETV Bharat Karnataka Team

Published : Feb 27, 2024, 6:56 PM IST

ತಿರುವನಂತಪುರಂ(ಕೇರಳ): ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ತಾರತಮ್ಯ ತೋರಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ''ಬಿಜೆಪಿಗೆ ಕಡಿಮೆ ಮತಗಳು ಮತ್ತು ಸೀಟು ಸಿಗುತ್ತಿದೆ ಎಂಬ ಕಾರಣಕ್ಕೆ ಕೇರಳಕ್ಕೆ ತಾರತಮ್ಯ ಮಾಡಿಲ್ಲ. ಕಳೆದ 10 ವರ್ಷಗಳಿಂದ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ನೀಡುವಷ್ಟೇ ನೆರವನ್ನು ಕೇಂದ್ರ ಕೇರಳಕ್ಕೂ ನೀಡಿದೆ. ಗಲ್ಫ್​ ದೇಶಗಳಲ್ಲಿ ಈ ಹಿಂದೆ ಭಾರತೀಯರ ಪರಿಸ್ಥಿತಿ ಹೇಗಿತ್ತು? ಇಂದಿನ ಪರಿಸ್ಥಿತಿ ಹೇಗಿದೆ? ಎಂಬುದನ್ನು ಅಲ್ಲಿ ಕೆಲಸ ಮಾಡುವವರನ್ನೇ ಕೇಳಿ'' ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದ ಕೇರಳ ಪಾದಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮೋದಿ ಮಾತನಾಡಿದರು.

"ರಾಜ್ಯ ಸರ್ಕಾರದ ಅಸಹಕಾರದ ನಡುವೆಯೂ ಕೇಂದ್ರ ಸರ್ಕಾರ ಕೇರಳಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಕೇಂದ್ರೀಯ ಸೇವೆಗಳ ಎಲ್ಲಾ ಪರೀಕ್ಷೆಗಳನ್ನು ಮಲೆಯಾಳಂನಲ್ಲಿ ಬರೆಯಲು ಬಿಜೆಪಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಾವು ಕೇರಳದ ಪರವಾಗಿ ನಿಂತರೆ, ಕಾಂಗ್ರೆಸ್ ಒಂದು ಕುಟುಂಬದ ಪರ ನಿಂತಿದೆ. ಸಿಪಿಎಂ ಕೂಡ ಕಾಂಗ್ರೆಸ್ ಹಾದಿಯಲ್ಲಿದೆ. ಅವರೂ ಇಂದು ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ" ಎಂದು ಮೋದಿ ಹೇಳಿದರು.

"ಕೇರಳವನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ಕೇಂದ್ರ ಸರ್ಕಾರ ಕೇರಳವನ್ನು ಆರ್ಥಿಕವಾಗಿ ಉಸಿರುಗಟ್ಟಿಸುತ್ತಿದೆ ಎಂಬ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರದ ಆರೋಪಗಳ ನಡುವೆಯೇ ಕೇರಳದ ಬಗ್ಗೆ ಯಾವುದೇ ನಿರ್ಲಕ್ಷ್ಯ ಮಾಡುತ್ತಿಲ್ಲ" ಎಂದು ಮೋದಿ ಹೇಳಿಕೆ ನೀಡಿರುವುದು ಗಮನಾರ್ಹ.

"2019ರಲ್ಲಿ ಕೇರಳಿಗರು ಬಿಜೆಪಿ ಮೇಲೆ ಭರವಸೆ ಇಟ್ಟಿದ್ದರು. 2024ರಲ್ಲಿ ಅದು ನಂಬಿಕೆಯಾಯಿತು. 2019ರಲ್ಲಿ ಇಲ್ಲಿನ ಜನರು ನಮಗೆ ಎರಡಂಕಿಯ ಮತ ನೀಡಿದರೆ, ಈ ಬಾರಿ ಎರಡಂಕಿಯ ಸ್ಥಾನ ನೀಡಲಿದ್ದಾರೆ. ಈ ದೇಶದ ಪ್ರಗತಿಗೆ ಕೇರಳಕ್ಕೆ ಬೆಂಬಲ ನೀಡುವುದು ನಿಶ್ಚಿತ" ಎಂದರು.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕೇರಳಕ್ಕೆ ಲಾಭ: "ಕೇರಳ ಜನತೆಯ ಕನಸುಗಳನ್ನು ಈಡೇರಿಸಲು ಮೋದಿ ಬದ್ಧರಾಗಿದ್ದಾರೆ. ಅದು ಮೋದಿಯವರ ಗ್ಯಾರಂಟಿ. ಆಯುಷ್ಮಾನ್ ಮಿಷನ್ ಯೋಜನೆಯಡಿ 1.5 ಕೋಟಿ ಜನರು 5.5 ಕೋಟಿ ರೂ.ಗಳ ಪ್ರಯೋಜನ ಪಡೆದಿದ್ದಾರೆ. ಜಲಜೀವನ್ ಮಿಷನ್ ಕೇರಳದ 36 ಲಕ್ಷ ಮನೆಗಳಿಗೆ ಕುಡಿಯುವ ನೀರು ತಂದಿದೆ. ಕಿಸಾನ್ ಸಮ್ಮಾನ್ ನಿಧಿ ಮೂಲಕ 40 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಮುದ್ರಾ ಸಾಲದ ಮೂಲಕ 50 ಲಕ್ಷ ಯುವಕರಿಗೆ ಸಾಲ ಸೌಲಭ್ಯ ನೀಡಲಾಗಿದೆ. ವಂದೇ ಭಾರತ್‌ನಿಂದ ಹೆದ್ದಾರಿ ಯೋಜನೆಯವರೆಗೆ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕೇರಳಕ್ಕೆ ಹೆಚ್ಚು ಲಾಭ ಸಿಕ್ಕಿದೆ. ಕೇರಳ ಪ್ರವಾಸಿಗರ ನಾಡು ಎಂದು ವಿಶ್ವಕ್ಕೆ ಪರಿಚಿತವಾಗಿದೆ. ಆದರೆ, ಸಿಪಿಎಂ ಕೇರಳವನ್ನು ಭ್ರಷ್ಟಾಚಾರದ ನಾಡನ್ನಾಗಿ ಪರಿವರ್ತಿಸಿದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಈ ರಾಜ್ಯ ಜನರನ್ನು ಒಡೆಯುತ್ತಿವೆ" ಎಂದು ದೂರಿದರು.

"ಕೇರಳಿಯರು ಶತಮಾನಗಳಿಂದ ವ್ಯಾಪಾರ-ವಾಣಿಜ್ಯ ಕ್ಷೇತ್ರದಲ್ಲಿ ನಿರತರಾಗಿದ್ದರೂ ಇಂದು ಕೇರಳದಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದಿರುವ ಅವರು, ತಮ್ಮ ಮುಂಬರುವ ಸರ್ಕಾರ ಕೇರಳವನ್ನು ಅಭಿವೃದ್ಧಿಯ ಮುಂಚೂಣಿಗೆ ತರಲಿದೆಠ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ವಿ.ಮುರಳೀಧರನ್, ಮಾಜಿ ಕೇಂದ್ರ ಸಚಿವ ಓ.ರಾಜಗೋಪಾಲ್, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್, ಪಿ.ಕೆ.ಕೃಷ್ಣದಾಸ್, ಕೆ.ರಾಮನ್ ಪಿಳ್ಳೈ, ನಟ ಸುರೇಶ್‌ ಗೋಪಿ, ತುಷಾರ್ ವೆಲ್ಲಪಲ್ಲಿ ಮತ್ತು ಸಿ.ಕೆ.ಜಾನು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಇದನ್ನೂ ಓದಿ: ಇಂದು ಸ್ವಕ್ಷೇತ್ರ ವಾರಾಣಸಿಗೆ ಮೋದಿ ಭೇಟಿ: ನಾಳೆ 14ಸಾವಿರ ಕೋಟಿಯ ಮೆಗಾ ಯೋಜನೆಗಳಿಗೆ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.