ETV Bharat / bharat

ಮೋದಿ 3.0 ಸರ್ಕಾರ್​: ಪ್ರಮಾಣವಚನ ಸಮಾರಂಭದ ಬಳಿಕ ಸಂಭ್ರಮಾಚರಣೆ ಮಾಡಿದ ಹೊಸ ಸಚಿವರು, ಎನ್‌ಡಿಎ ಮಿತ್ರಪಕ್ಷಗಳ ನಾಯಕರು - BJP leaders jubilant after sworn in

author img

By ETV Bharat Karnataka Team

Published : Jun 10, 2024, 10:00 AM IST

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದ ಬಳಿಕ ಮೈತ್ರಿಕೂಟದ ನಾಯಕರು, ನೂತನ ಸಚಿವರು ಹಾಗೂ ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡಿದರು.

ಮೋದಿ 3.0 ಸರ್ಕಾರ್​:  ಪ್ರಮಾಣವಚನ ಸಮಾರಂಭದ ಬಳಿಕ ಸಂಭ್ರಮಾಚರಣೆ ಮಾಡಿದ ಹೊಸ ಸಚಿವರು, ಎನ್‌ಡಿಎ ಮಿತ್ರಪಕ್ಷಗಳ ನಾಯಕರು
New Ministers, NDA allies, BJP leaders jubilant after third PM Modi govt sworn-in (ಕೃಪೆ ANI)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹೊಸ ಸಚಿವರು, ಬಿಜೆಪಿ ನಾಯಕರು ಮತ್ತು ಎನ್‌ಡಿಎ ಮಿತ್ರಪಕ್ಷಗಳಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮೋದಿ ಪ್ರಯತ್ನಕ್ಕೆ ಅವರು ಶುಭ ಹಾರೈಸಿದರು. ಭಾರತ ಅಭಿವೃದ್ಧಿ ಮತ್ತು ವೈಭವದ ಹಾದಿಯಲ್ಲಿದೆ ಎಂದು ಅವರೆಲ್ಲ ಹರ್ಷ ವ್ಯಕ್ತಪಡಿಸಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮಾತನಾಡಿ, ಪ್ರಧಾನಿ ಮೋದಿ ಅವರು ಮೂರನೇ ಅವಧಿಗೆ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ದೇಶಕ್ಕೆ ಹೊಸ ಇತಿಹಾಸ ಬರೆಯುವುದನ್ನು ಸೂಚಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಮಧ್ಯಪ್ರದೇಶದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯ ಅವರು ಎಲ್ಲರೂ ಹೆಮ್ಮೆಯಿಂದ ವಿಜೃಂಭಿಸುತ್ತಿದ್ದಾರೆ. "ಭಾರತವು ಮತ್ತೊಮ್ಮೆ ವಿಶ್ವ ಗುರುವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಇದೊಂದು ಐತಿಹಾಸಿಕ ಕ್ಷಣ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅವರನ್ನು ಅಭಿನಂದಿಸುತ್ತೇನೆ. ದೇಶದ ಎಲ್ಲಾ ಜನರು ಬಯಸಿದಂತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ನಾನು ನೂತನ ಸಚಿವರು, ಪಕ್ಷದ ಕಾರ್ಯಕರ್ತರು, ಎನ್‌ಡಿಎ ಮಿತ್ರಪಕ್ಷಗಳು ಮತ್ತು ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ‘‘ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಇನ್ನು ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಛತ್ತೀಸ್‌ಗಢ ಸರ್ಕಾರವು ನೂತನ ಪ್ರಧಾನಿ ಮೋದಿ ಸರ್ಕಾರಕ್ಕೆ ಶುಭ ಹಾರೈಸುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರ ಭಾವನೆ ಹೇಗಿತ್ತು ಎಂಬ ಪ್ರಶ್ನೆಗೆ ಜಗದ್ಗುರು ರಮಾನಂದಾಚಾರ್ಯ ಸ್ವಾಮಿ ರಾಮಭದ್ರಾಚಾರ್ಯರು ಉತ್ತರಿಸಿ. "ಮೋದಿ ಜೀ ಎಂದೆಂದಿಗೂ ನನ್ನ ಸ್ನೇಹಿತ" ಎಂದು ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಸಂಪುಟ ಸಚಿವರಾಗಿ ನೇಮಕಗೊಂಡಿದ್ದಕ್ಕೆ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ಈಡೇರಿಸಲು ಶ್ರಮಿಸುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.

ಇನ್ನು ಹೊಸ ಸರ್ಕಾರದಲ್ಲಿ ಸ್ವತಂತ್ರ ಖಾತೆ ರಾಜ್ಯಸಚಿವರಾಗಿ ಅಧಿಕಾರ ಸ್ವೀಕರಿಸಿದ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಮಾತನಾಡಿ. ವೈಯಕ್ತಿಕವಾಗಿ ಇದು ಅತ್ಯಂತ ಐತಿಹಾಸಿಕ ಕ್ಷಣವಾಗಿದೆ. ನನಗೆ ಹೊಸ ಜವಾಬ್ದಾರಿ ನೀಡಲಾಗಿದೆ, ನಾನು ಅದನ್ನು ಪೂರೈಸುತ್ತೇನೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪ್ರತಿಕ್ರಿಯಿಸಿ, "ನಮಗೆ ತುಂಬಾ ಸಂತೋಷವಾಗಿದೆ. ಪ್ರಧಾನಿ ಮೋದಿ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ಭಾರತದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಈಗ ಇಡೀ ಜಗತ್ತು ನಮ್ಮನ್ನು ಗಮನಿಸುತ್ತಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದರು.

2014ರಲ್ಲಿ ಮೋದಿಜಿ ಮೊದಲ ಬಾರಿಗೆ ಪ್ರಧಾನಿಯಾದಾಗ ಅವರು 15 ವರ್ಷಗಳ ಕಾಲ ಪ್ರಧಾನಿಯಾಗಬೇಕೆಂದು ನಾವು ಬಯಸಿದ್ದೆವು. ಅದು ಈಗ ನಿಜವಾಗಿದೆ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ. ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ವಿಕಸಿತ ಭಾರತದ ಮಿಷನ್‌ನಲ್ಲಿ ನಾವೆಲ್ಲರೂ ಮೋದಿಯವರೊಂದಿಗೆ ಇದ್ದೇವೆ ಎಂದು ಹೇಳಿದರು.

ಇದನ್ನು ಓದಿ: ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ: 24 ರಾಜ್ಯಗಳ 71 ಸಂಸದರಿಗೆ ಅವಕಾಶ, 11 ಮಿತ್ರಪಕ್ಷಗಳಿಗೂ ಪಾಲು - PM MODI OATH CEREMONY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.