ETV Bharat / bharat

ಅರ್ಹತೆ-ಕೌಶಲ್ಯವಿಲ್ಲದಿದ್ದರೆ, ಚಿಕಿತ್ಸೆ ನೀಡದಿದ್ದರೆ ಮಾತ್ರ ವೈದ್ಯರು ನಿರ್ಲಕ್ಷ್ಯಕ್ಕೆ ಹೊಣೆ: ಸುಪ್ರೀಂ ಕೋರ್ಟ್

ವೈದ್ಯರೊಬ್ಬರು ಅಗತ್ಯ ಅರ್ಹತೆ ಹೊಂದಿಲ್ಲದಿದ್ದರೆ ಮತ್ತು ಸೂಕ್ತವಾಗಿ ಪರಿಣತಿಯನ್ನು ಬಳಸಿ ಚಿಕಿತ್ಸೆ ನೀಡದಿದ್ದರೆ ಮಾತ್ರ ಅವರನ್ನು ನಿರ್ಲಕ್ಷಕ್ಕೆ ಹೊಣೆಗಾರರನ್ನಾಗಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By PTI

Published : Oct 25, 2024, 8:19 PM IST

ನವದೆಹಲಿ: ವೈದ್ಯಕೀಯ ಚಿಕಿತ್ಸೆ ನೀಡುವ ಅಗತ್ಯ ಅರ್ಹತೆ ಮತ್ತು ಕೌಶಲ್ಯವಿಲ್ಲದಿದ್ದರೆ ಅಥವಾ ಚಿಕಿತ್ಸೆಯ ಸಮಯದಲ್ಲಿ ತನ್ನ ಪರಿಣತಿಯನ್ನು ಸಮಂಜಸವಾದ ಚಲಾಯಿಸಲು ವಿಫಲವಾದಾಗ ಮಾತ್ರ ವೈದ್ಯರೊಬ್ಬರನ್ನು ನಿರ್ಲಕ್ಷ್ಯಕ್ಕೆ ಹೊಣೆಗಾರರನ್ನಾಗಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಪಂಕಜ್ ಮಿಥಾಲ್ ಅವರ ನ್ಯಾಯಪೀಠವು, ವೈದ್ಯಕೀಯ ವೃತ್ತಿಪರರಿಂದ ನಿರೀಕ್ಷಿಸಲಾದ ಸಮಂಜಸವಾದ ಆರೈಕೆಯನ್ನು ವೈದ್ಯನು ರೋಗಿಗೆ ನೀಡಿದ ಅಥವಾ ಪೂರೈಸಿದ ಸಂದರ್ಭದಲ್ಲಿ, ವೈದ್ಯರು ಹಾಗೆ ಮಾಡಿಲ್ಲ ಎಂದು ಸಾಬೀತಾಗದ ಹೊರತು ಅದು ಕ್ರಮ ಕೈಗೊಳ್ಳಬಹುದಾದ ನಿರ್ಲಕ್ಷ್ಯದ ಪ್ರಕರಣವಾಗುವುದಿಲ್ಲ ಎಂದು ಹೇಳಿತು.

"ವೈದ್ಯಕೀಯ ವೃತ್ತಿಪರರು ಅಗತ್ಯ ಅರ್ಹತೆ ಅಥವಾ ಕೌಶಲ್ಯವನ್ನು ಹೊಂದಿಲ್ಲದಿದ್ದಾಗ ಅಥವಾ ಚಿಕಿತ್ಸೆ ನೀಡುವಲ್ಲಿ ಅವರು ಹೊಂದಿರುವ ಸಮಂಜಸವಾದ ಕೌಶಲ್ಯವನ್ನು ಚಲಾಯಿಸಲು ವಿಫಲರಾದಾಗ ಮಾತ್ರ ಅವರನ್ನು ನಿರ್ಲಕ್ಷ್ಯಕ್ಕೆ ಹೊಣೆಗಾರರನ್ನಾಗಿ ಮಾಡಬಹುದು" ಎಂದು ನ್ಯಾಯಪೀಠ ಹೇಳಿತು.

ವೈದ್ಯರೊಬ್ಬರು ನಿರ್ಲಕ್ಷ್ಯ ತೋರಿದ್ದಾರೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್​ಸಿಡಿಆರ್​ಸಿ) ನೀಡಿದ್ದ ಆದೇಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.

ದೂರುದಾರರ ಪ್ರಕಾರ, ಅವರ ಅಪ್ರಾಪ್ತ ಮಗನಿಗೆ ಎಡಗಣ್ಣಿನಲ್ಲಿ ಜನ್ಮಜಾತ ಅಸ್ವಸ್ಥತೆ ಇರುವುದು ಪತ್ತೆಯಾಗಿತ್ತು. ಇದಕ್ಕೆ ಸಣ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. 1996ರಲ್ಲಿ ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಪಿಜಿಐಎಂಇಆರ್) ಡಾ.ನೀರಜ್ ಸುದ್ ಎಂಬುವರು ಈ ಶಸ್ತ್ರಚಿಕಿತ್ಸೆ ಮಾಡಿದ್ದರು. ಬಾಲಕನ ಕಣ್ಣುಗಳಲ್ಲಿ ಬೇರೆ ಯಾವುದೇ ದೋಷವಿಲ್ಲದ ಕಾರಣ ತಮ್ಮ ಮಗನಲ್ಲಿ ಪತ್ತೆಯಾದ ದೈಹಿಕ ವಿರೂಪತೆಯನ್ನು ಸಣ್ಣ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಬಲಗಣ್ಣಿಗೆ ಹೋಲಿಸಿದರೆ ಎಡ ಕಣ್ಣುರೆಪ್ಪೆಯನ್ನು ಸ್ವಲ್ಪ ಎತ್ತುವುದು ಮತ್ತು ಸರಿಪಡಿಸುವುದು ಅಗತ್ಯವಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.

ಆದರೆ, ವೈದ್ಯರು ಈ ಶಸ್ತ್ರಚಿಕಿತ್ಸೆ ಮಾಡಲು ವಿಫಲರಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಬಾಲಕನ ಆರೋಗ್ಯ ಹದಗೆಟ್ಟಿತು ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ದೂರುದಾರರು ಡಾ. ಸುದ್ ಮತ್ತು ಪಿಜಿಐಎಂಇಆರ್ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಹೊರಿಸಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ ಈ ದೂರನ್ನು 2005 ರಲ್ಲಿ ಆಯೋಗವು ವಜಾಗೊಳಿಸಿತ್ತು.

ಈ ನಿರ್ಧಾರದಿಂದ ಅಸಮಾಧಾನಗೊಂಡ ದೂರುದಾರರು ಎನ್​ಸಿಡಿಆರ್​ಸಿ ಗೆ ಮೇಲ್ಮನವಿ ಸಲ್ಲಿಸಿದ್ದರು. ಎನ್​ಸಿಡಿಆರ್​ಸಿ ರಾಜ್ಯ ಆಯೋಗದ ತೀರ್ಪನ್ನು ತಳ್ಳಿಹಾಕಿ, ಚಿಕಿತ್ಸೆಯಲ್ಲಿನ ನಿರ್ಲಕ್ಷ್ಯಕ್ಕಾಗಿ ವೈದ್ಯರು ಮತ್ತು ಆಸ್ಪತ್ರೆಯು ಜಂಟಿಯಾಗಿ 3 ಲಕ್ಷ ಮತ್ತು 50 ಸಾವಿರ ರೂ.ಗಳ ಪರಿಹಾರ ಪಾವತಿಸುವಂತೆ ಆದೇಶಿಸಿತ್ತು. ಎನ್​ಸಿಡಿಆರ್​ಸಿಯ ಈ ಆದೇಶವನ್ನು ಪ್ರಶ್ನಿಸಿ ಡಾ.ಸುದ್ ಮತ್ತು ಪಿಜಿಐಎಂಇಆರ್ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ನೀರಿನ ಬಕೆಟ್​ಗೆ​ ಬಿದ್ದು ಆರೋಗ್ಯ ಸ್ಥಿತಿ ಗಂಭೀರ: 11 ತಿಂಗಳ ಮಗು ಜೀವ ಉಳಿಸಿದ ವೈದ್ಯ, ಆಂಬ್ಯುಲೆನ್ಸ್​ ಚಾಲಕನಿಗೆ ಸನ್ಮಾನ - Baby Life Saved

ETV Bharat Logo

Copyright © 2024 Ushodaya Enterprises Pvt. Ltd., All Rights Reserved.