ರೋಹ್ತಾಸ್ (ಬಿಹಾರ): ನೀಟ್ ಪೇಪರ್ ಸೋರಿಕೆ ಪ್ರಕರಣಕ್ಕೆ ಬಿಹಾರದ ಹಲವು ಜಿಲ್ಲೆಗಳು ನಂಟು ಹೊಂದಿವೆ. ಮುಜಾಫರ್‌ಪುರದ ನಂತರ, ಇದೀಗ ರೋಹ್ತಾಸ್ ನಂಟಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ ಪೊಲೀಸರು 13 ಆರೋಪಿಗಳ ಪೈಕಿ 38 ವರ್ಷದ ಬಿತ್ತು ಕುಮಾರ್ನನ್ನು ಬಂಧಿಸಿದ್ದಾರೆ. ತನಿಖಾ ತಂಡದಿಂದ ಬಂಧಿಸಲ್ಪಟ್ಟಿರುವ ಬಿತ್ತು ಕುಮಾರ್, ಪ್ರಕರಣದ ಮಾಸ್ಟರ್ ಮೈಂಡ್ ಸಿಕಂದರ್ ಯದವೇಂದು ಅವರ ವೈಯಕ್ತಿಕ ಚಾಲಕ ಎಂದು ಹೇಳಲಾಗಿದೆ.
ನೀಟ್ ಪೇಪರ್ ಸೋರಿಕೆಗೆ ರೋಹ್ತಾಸ್ ಜಿಲ್ಲೆಗಿದೆ ಸಂಪರ್ಕ: ವಾಸ್ತವವಾಗಿ, ಜಿಲ್ಲೆಯ ಗರ್ನೋಖಾ ನಿವಾಸಿ ಚಂದ್ರಮ್ ಸಿಂಗ್ ಅವರ ಪುತ್ರ, ಆರೋಪಿ 38 ವರ್ಷದ ಬಿತ್ತು ಸಿಂಗ್ ಕುಮಾರ್ ಅವರನ್ನು ತನಿಖಾ ತಂಡವು ಈ ಪ್ರಕರಣದಲ್ಲಿ ಬಂಧಿಸಿದೆ. ಇದಾದ ನಂತರ ಗರ್ನೋಖಾದ ಗ್ರಾಮದಲ್ಲಿ ಜನರು ಆತಂಕಕ್ಕೊಳಗಾಗಿದ್ದಾರೆ.
ಬಿತ್ತು ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನುತ್ತಾರೆ ಕುಟುಂಬಸ್ಥರು. ಇವರು ಕಳೆದ ಹಲವು ವರ್ಷಗಳಿಂದ ಪಾಟ್ನಾದಲ್ಲಿ ಖಾಸಗಿ ವಾಹಾನದ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ನೀಟ್ ಪೇಪರ್ ಪ್ರಕರಣದಲ್ಲಿ ಕಾರು ಚಲಾಯಿಸುತ್ತಿದ್ದವರ ಕೈವಾಡವೇನು ಎಂಬ ಪ್ರಶ್ನೆ ಗ್ರಾಮದ ಜನರಿಗೆ ಕಾಡುತ್ತಿದೆ.
ಬಿತ್ತು ಕುಮಾರ್ ಕುಟುಂಬಸ್ಥರ ಮಾತು: ಬಿತ್ತು ಸಿಂಗ್ ಕುಮಾರ್ ವಿದ್ಯಾವಂತನಲ್ಲ. ಮೊದಲು ಗ್ರಾಮದಲ್ಲಿಯೇ ಟ್ರ್ಯಾಕ್ಟರ್ ಓಡಿಸುತ್ತಿದ್ದ. ನಂತರ ಪಾಟ್ನಾದಲ್ಲಿ ಯಾರದೋ ಕಾರಿನ ಚಾಲಕನಾದ. ಅವರ ಮಕ್ಕಳು ಮತ್ತು ಕುಟುಂಬದ ಸದಸ್ಯರು ಗ್ರಾಮದಲ್ಲಿಯೇ ವಾಸಿಸುತ್ತಿದ್ದಾರೆ. ನೀಟ್ ಪತ್ರಿಕೆಯಂತಹ ವಿಷಯಗಳ ಬಗ್ಗೆ ಆತನಿಗೆ ಜ್ಞಾನವಿಲ್ಲ. ನಾಲ್ಕನೇ ತರಗತಿವರೆಗೆ ಓದಿದ್ದಾನೆ ಎಂದು ಹೇಳುತ್ತಾರೆ ಕುಟುಂಬಸ್ಥರು.
ಬಿತ್ತು ಕುಮಾರ್ ಸಹೋದರನ ಹೇಳಿಕೆ: "ಬಿತ್ತು ಈ ಹಿಂದೆ ಹಳ್ಳಿಯಲ್ಲಿಯೇ ಟ್ರ್ಯಾಕ್ಟರ್ ಓಡಿಸುತ್ತಿದ್ದರು. ಆತನು ಕಡಿಮೆ ಶಿಕ್ಷಣ ಪಡೆದಿದ್ದಾನೆ. ನಂತರ ಪಾಟ್ನಾದಲ್ಲಿ ವಾಸಿಸಲು ಪ್ರಾರಂಭಿಸಿದರು. ಬಿತ್ತು ಕುಮಾರ್ NEET ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿಲ್ಲ, ಆದ್ರೂ ಅವರನ್ನು ಬಂಧಿಸಲಾಗಿದೆ ಎಂದು ಬಿತ್ತು ಕುಮಾರ್ ಸಹೋದರ ಸುರೇಂದ್ರ ಸಿಂಗ್ ಹೇಳಿದರು.
ಪ್ರಕರಣಕ್ಕೆ ನಂಟು ಹೊಂದಿರುವ ಜಿಲ್ಲೆಗಳು: ಮೇ 5 ರಂದು NEET 2024 ಪರೀಕ್ಷೆಯನ್ನು ದೇಶಾದ್ಯಂತ ಅನೇಕ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷೆಯ ದಿನವೇ ಪೇಪರ್ ಸೋರಿಕೆ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಪಾಟ್ನಾದ ಕೇಂದ್ರದಿಂದ ಸುಟ್ಟ ಪ್ರಶ್ನೆ ಪತ್ರಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಿಹಾರ ಮತ್ತು ಜಾರ್ಖಂಡ್‌ನ ಹಲವು ಜಿಲ್ಲೆಗಳಿಂದ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಜೂನ್ 21 ರಂದು (ಶುಕ್ರವಾರ) ಪೊಲೀಸರು ನಾಲ್ವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ತನಿಖಾ ತಂಡದ ವಶದಲ್ಲಿರುವ ಆಯುಷ್ ಕುಮಾರ್, ಸಿಕಂದರ್ ಯಾದವೆಂದು, ನಿತೀಶ್ ಕುಮಾರ್ ಮತ್ತು ಅನುರಾಗ್ ಯಾದವ್ ಪ್ರಮುಖ ಆರೋಪಿಗಳಾಗಿದ್ದಾರೆ.
ಸಿಕಂದರ್ ಪ್ರಕರಣದ ಮಾಸ್ಟರ್ ಮೈಂಡ್: ಅನುರಾಗ್ ಯಾದವ್, ಪೇಪರ್ ಸೋರಿಕೆಯ ಮಾಸ್ಟರ್ ಮೈಂಡ್ ಸಿಕಂದರ್ ಅವರ ಸೋದರಳಿಯ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಕಂಠಪಾಠ ಮಾಡಿಸಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕಂಠಪಾಠ ಮಾಡಿದ ನಿಖರವಾದ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಕೇಳಲಾಯಿತು. ಸಿಕಂದರ್ ಯದವೆಂದು ಡಣಾಪುರ ಪುರಸಭೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದಾರೆ. ಈತನೇ ಪೇಪರ್ ಸೋರಿಕೆಗೆ ಕಾರಣವಾಗಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಸಿಕಂದರ್, ತಾನು ಪೇಪರ್ ಸೋರಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಲವು ಮಂದಿಯ ಹೆಸರುಗಳನ್ನೂ ಆತ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಸೋಲುವ ಬಾಜಿ ಕಟ್ಟಿ ಸೋತು ಹೆಸರು ಬದಲಿಸಿಕೊಂಡ ವೈಎಸ್‌ಆರ್‌ಸಿಪಿ ನಾಯಕ! - YSRP Leader Changes Name