ETV Bharat / bharat

ಮಹಾರಾಷ್ಟ್ರ ಚುನಾವಣೆ: ಎನ್​ಸಿಪಿ ಎರಡನೇ ಪಟ್ಟಿಯಲ್ಲಿ ಸಿದ್ದಿಕಿ ಪುತ್ರ, ನವಾಬ್​ ಮಲಿಕ್​ ಪುತ್ರಿಗೆ ಟಿಕೆಟ್​

ಇಂದು ಪಕ್ಷದ ಅಧ್ಯಕ್ಷ ಅಜಿತ್​ ಪವಾರ್​ ಮತ್ತು ಕೇಂದ್ರ ಘಟಕ ಮುಖ್ಯಸ್ಥ ಸುನೀಲ್​ ತಾತ್ಕರೆ ನೇತೃತ್ವದಲ್ಲಿ ಜೀಶೆನ್​ ಎನ್​ಸಿಪಿ ಸೇರಿದ್ದು, ಇವರು ಬಾಂದ್ರಾ ಪೂರ್ವದಿಂದ ಕಣಕ್ಕೆ ಇಳಿಯುತ್ತಿದ್ದಾರೆ.

NCP has announced its second list of candidates for the upcoming Maharashtra assembly elections
ಬಾಬಾ ಸಿದ್ದಿಕಿ- ಜೀಶೆನ್​ ಸಿದ್ದಿಕಿ (ಎಎನ್​ಐ)
author img

By ETV Bharat Karnataka Team

Published : 3 hours ago

ಮುಂಬೈ: ಇತ್ತೀಚೆಗಷ್ಟೇ ಬಿಷ್ಣೋಯಿ ಗ್ಯಾಂಗ್​ನಿಂದ ಗುಂಡಿನ ದಾಳಿಯಿಂದ ಹತ್ಯೆಗೆ ಒಳಗಾದ ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಪುತ್ರ ಜೀಶನ್​ ಸಿದ್ದಿಕಿ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಏಳು ಕ್ಷೇತ್ರಗಳಿಗೆ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಎನ್​ಸಿಪಿ ಬಿಡುಗಡೆ ಮಾಡಿದ್ದು, ನವಾಬ್​ ಮಲಿಕ್​ ಪುತ್ರಿ ಸನಾ ಮಲಿಕ್​ಗೂ ಕೂಡ ಟಿಕೆಟ್​ ನೀಡಿದೆ.

ಇಂದು ಪಕ್ಷದ ಅಧ್ಯಕ್ಷ ಅಜಿತ್​ ಪವರ್​ ಮತ್ತು ಕೇಂದ್ರ ಘಟಕ ಮುಖ್ಯಸ್ಥ ಸುನೀಲ್​ ತಾತ್ಕರೆ ನೇತೃತ್ವದಲ್ಲಿ ಜೀಶೆನ್​ ಎನ್​ಸಿಪಿ ಸೇರಿದರು. ಅವರು ಬಾಂದ್ರಾ ಪೂರ್ವದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಇವರ ಎದುರಾಳಿಯಾಗಿ ಶಿವಸೇನೆ ಯುಬಿಟಿ ವರುಣ್​ ಸರ್ದೇಸಾಯಿ ಅವರನ್ನು ಕಣಕ್ಕೆ ಇಳಿಸಿದೆ.

ಗುರುವಾರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಪವಾರ್​​ ನಡುವಿನ ಸೀಟು ಹಂಚಿಕೆ ಮಾತುಕತೆ ಬಳಿಕ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಈ ಮೈತ್ರಿಯಲ್ಲಿ ಎನ್​ಸಿಪಿ 55ರಿಂದ 58 ಸೀಟು ಪಡೆಯುವ ನಿರೀಕ್ಷೆ ಹೊಂದಿದೆ.

ಲೋಕಸಭಾ ಚುನಾವಣೆಯಲ್ಲಿ ನಾಂದೇಡ್​ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡ ಮಾಜಿ ಬಿಜೆಪಿ ಸಂಸದ ಪ್ರತಾಪ್​ ಚಿಖಾಲಿಕರ್​ ಅವರಿಗೆ ಲೋಹಾ ಕ್ಷೇತ್ರದ ಟಿಕೆಟ್​ ನೀಡಲಾಗಿದೆ. ಬಿಜೆಪಿಯ ಮತ್ತೊಬ್ಬ ಮಾಜಿ ಸಂಸದರಾಗಿರುವ ಸಂಜಯ್​ ಕಾಕಾ ಪಾಟೀಲ್​ಗೆ ತಾಸಗಾಂವ್​ - ಕವತೇರ್​ ಮಹಾನ್​ಕಲ್​ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಇವರು ದಿವಂಗತ ಎನ್​ಸಿಪಿ ದಿಗ್ಗಜ ಆರ್​ಆರ್​ ಪಾಟೀಲ್​ ಪುತ್ರ ರೋಹಿತ್​ ಪಾಟೀಲ್​ಗೆ ಎನ್​ಸಿಪಿ ಟಿಕೆಟ್​ ನೀಡಿದೆ.

ಇಸ್ಲಾಂಪುರ್​ನಿಂದ ಶಿಜಿಕಾಂತ್​ ಪಾಟೀಲ್​, ಮುಂಬೈನ ಅನುಶಕ್ತಿ ನಗರ್​ನಿಂದ ಮಾಜಿ ಸಚಿವ ನವಾಬ್​ ಮಲ್ಲಿಕ್​ ಪುತ್ರಿ ಸನಾ ಮಲ್ಲಿಕ್​ ಹೆಸರನ್ನು ಘೋಷಿಸಲಾಗಿದೆ. ಇನ್ನು ಶ್ರಿರೂರ್​ನಿಂದ ಧ್ಯಾನೇಶ್ವರ್​​ ಕಟ್ಕೆಗೆ ಪುಣೆಯಲ್ಲಿನ ವಡ್ಗಾಂವ್​ ಶೆರಿಯಿಂದ ಸುನೀಲ್​ ತಿಂಗ್ರೆಗೆ ಟಿಕೆಟ್​ ನೀಡಿದೆ. ತಿಂಗ್ರೆ ಹೆಸರು ಮೇ ಅಲ್ಲಿ ಪುಣೆಯಲ್ಲಿ ಹಿಟ್​ ಅಂಡ್​ ರನ್​ ಪ್ರಕರಣದಿಂದಾಗಿ ಹೆಚ್ಚು ಸುದ್ದಿಯಾಗಿತ್ತು

ನವೆಂಬರ್​ 20ರಂದು 288 ಕ್ಷೇತ್ರಗಳಿಗೆ ನಡೆಯುತ್ತಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್​ಸಿಪಿ ಮೊದಲ ಪಟ್ಟಿಯಲ್ಲಿ 38 ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಿಸಿತು. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ನವೆಂಬರ್​ 23 ರಂದು ಹೊರಬೀಳಲಿದೆ.

ಇದನ್ನೂ ಓದಿ: ಪ್ರಿಯಾಂಕಾ ನಾಮಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ್​ ಖರ್ಗೆಗೆ ಅವಮಾನ: ಬಿಜೆಪಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.