ಲೆಂಗ್‌ಪುಯಿ(ಮಿಜೋರಾಂ): 14 ಜನರಿದ್ದ ಮ್ಯಾನ್ಮಾರ್ ಸೇನಾ ವಿಮಾನವು ಇಂದು ಬೆಳಿಗ್ಗೆ ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಪತನಗೊಂಡಿತು. ಮಿಜೋರಾಂ ಪೊಲೀಸ್ ಮಹಾನಿರ್ದೇಶಕರು ನೀಡಿದ ಮಾಹಿತಿ ಪ್ರಕಾರ, ಲಘು ವಿಮಾನದಲ್ಲಿ ಪೈಲಟ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಆರು ಜನರಿಗೆ ಗಾಯಗಳಾಗಿವೆ. ಎಂಟು ಮಂದಿ ಸುರಕ್ಷಿತವಾಗಿದ್ದಾರೆ. ಗಾಯಗೊಂಡವರನ್ನು ಲೆಂಗ್‌ಪುಯಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚಿನ ಪ್ರಕರಣ: ಥಾಯ್ಲೆಂಡ್‌ನಿಂದ ಮಾಸ್ಕೋಗೆ 6 ಜನರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಿಮಾನವು ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಪತನವಾಗಿತ್ತು. ರಷ್ಯಾದ ನಾಗರಿಕ ವಿಮಾನಯಾನ ಅಧಿಕಾರಿಗಳು ಈ ಘಟನೆಗೆ ಪ್ರತಿಕ್ರಿಯಿಸಿ ''ಇದು ಡಸಾಲ್ಟ್ ಫಾಲ್ಕನ್ 10 ವಿಮಾನ. ನಾಲ್ವರು ಸಿಬ್ಬಂದಿ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಥಾಯ್ಲೆಂಡ್‌ನ ಯು-ತಪಾವೊ ರಾಯೊಂಗ್‌ಪಟ್ಟಾಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿತ್ತು. ಆದರೆ, ರಾಡಾರ್‌ನಿಂದ ಕಣ್ಮರೆಯಾಗಿ ಸಂವಹನ ಕಡಿತಕೊಂಡಿತ್ತು" ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತೀಯ ವಾಯುಪಡೆ ವಿಮಾನ ದುರಂತ ರಹಸ್ಯ ಬೇಧಿಸಿದ ಮಾನವರಹಿತ ವಾಹನ! ಹೇಗೆ ಗೊತ್ತೇ? ರೋಚಕ ಕಹಾನಿ