ETV Bharat / bharat

ಕಾಲಲ್ಲಿ ಕೊಲ್ಲಾಪುರಿ ಚಪ್ಪಲಿ, ತಲೆ ಮೇಲೊಂದು ಗಾಂಧಿ ಟೋಪಿ: ಕೇರಳ ಶಾಲೆಯ ಪಠ್ಯವಾಯ್ತು ಡಬ್ಬಾವಾಲಾಗಳ ವಿತರಣಾ ವ್ಯವಸ್ಥೆ ಕಥೆ - dabbawalas in Kerala curriculum - DABBAWALAS IN KERALA CURRICULUM

ಮುಂಬೈನ ಡಬ್ಬಾವಾಲಾ ಖ್ಯಾತಿ ಶೀಘ್ರದಲ್ಲೇ ಕೇರಳದ ಮನೆ ಮನೆಗಳನ್ನೂ ತಲುಪಲಿದೆ. ಡಬ್ಬಾವಾಲಾಗಳ ಕಷ್ಟ ಸಹಿಷ್ಣುತೆಯ ಬಗ್ಗೆ ಈಗ ಪಠ್ಯಪುಸ್ತಕದಲ್ಲಿ ಓದಲು ಸಿಗುತ್ತಿದೆ. ಈ ನಿಟ್ಟಿನಲ್ಲಿ ಕೇರಳ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

Mumbai  dabbawalas in Kerala s school curriculum for 9th std
ಕಾಲಲ್ಲಿ ಕೊಲ್ಲಾಪುರಿ ಚಪ್ಪಲಿ ತಲೆ ಮೇಲೊಂದು ಗಾಂಧಿ ಟೋಪಿ: ಕೇರಳ ಶಾಲೆಯ ಪಠ್ಯಪುಸ್ತಕವಾಯ್ತು ಡಬ್ಬಾವಾಲಾಗಳ ವಿತರಣಾ ವ್ಯವಸ್ಥೆ (ETV Bharat)
author img

By ETV Bharat Karnataka Team

Published : Sep 12, 2024, 8:14 PM IST

- ಡಬ್ಬಾವಾಲಾಗಳಿಗೆ ಸಿಕ್ತು ಮಹಾನ್​ ಗೌರವ: ಕೇರಳ ಶಾಲೆಯ ಪಠ್ಯಕ್ರಮವಾಯ್ತು ಡಬ್ಬಾವಾಲಾಗಳ ಶ್ರಮಜೀವನ
ಮುಂಬೈ: ಕೋಟ್ಯಂತರ ಮುಂಬೈಗರ ಹಸಿವನ್ನು ಸಮಯಕ್ಕೆ ತಣಿಸುವ ಖ್ಯಾತಿ ಮುಂಬೈನ ಡಬ್ಬಾವಾಲಾಗಳಿಗೆ ಸಿಗುತ್ತಿದೆ. ಈಗಾಗಲೇ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಇವರ ನಿಖರ ಸೇವೆ, ಸಮಯ ಪಾಲನೆ ಹಾಗೂ ಪ್ರಾಮಾಣಿಕತೆ ಎಲ್ಲರನ್ನೂ ಅಚ್ಚರಿಗೊಳಿಸಿರುವುದಂತೂ ಸತ್ಯ. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಕೇರಳ ಸರ್ಕಾರ, ಮುಂಬೈ ಡಬ್ಬಾವಾಲಾಗಳ ಖ್ಯಾತಿಯನ್ನು ಶೀಘ್ರದಲ್ಲೇ ಕೇರಳದ ಮನೆಗಳನ್ನು ತಲುಪಿಸಲು ನಿರ್ಧರಿಸಿದೆ.

ಕೇರಳದ ಶಾಲಾ ಪಠ್ಯಕ್ರಮದಲ್ಲಿ ಮುಂಬೈನಲ್ಲಿರುವ ಡಬ್ಬಾವಾಲಾಗಳ ಮಾಹಿತಿ ಸೇರ್ಪಡೆ ಮಾಡಲು ಅಲ್ಲಿನ ಶಿಕ್ಷಣ ಇಲಾಖೆ ನಿರ್ಧರಿಸಿದೆ. 9ನೇ ತರಗತಿಯ ಇಂಗ್ಲಿಷ್ ಪಠ್ಯಕ್ರಮದಲ್ಲಿ ಡಬ್ಬಾವಾಲಾಗಳ ಶ್ರಮಜೀವನದ ಬಗ್ಗೆ ಸೇರಿಸಲಾಗಿದೆ. "ದಿ ಸಾಗಾ ಆಫ್ ದಿ ಟಿಫಿನ್ ಕ್ಯಾರಿಯರ್" ಎಂಬ ಶೀರ್ಷಿಕೆಯ ಅಡಿ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.

ಏಳು ಸಮುದ್ರ ದಾಟಿ ಪಸರಿಸಿದ ಕೀರ್ತಿ: 130 ವರ್ಷಗಳಷ್ಟು ಹಳೆಯದಾದ ಡಬ್ಬಾವಾಲಾಗಳ ವ್ಯಾಪಾರವು 1890 ರ ದಶಕದಲ್ಲಿ ಪ್ರಾರಂಭವಾಯಿತು. ಅಂದಿನಿಂದ, ಮುಂಬೈನ ಈ ಡಬ್ಬಾವಾಲಾಗಳು ಮುಂಬೈನಲ್ಲಿರುವ ಕಚೇರಿ ಕೆಲಸಗಾರರಿಗೆ ಸಮಯಕ್ಕೆ ಸರಿಯಾಗಿ ಆಹಾರದ ಡಬ್ಬಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬೈನಲ್ಲಿ ಐದು ಸಾವಿರಕ್ಕೂ ಹೆಚ್ಚು ಬಿನ್ ಕ್ಯಾರಿಯರ್‌ಗಳಿದ್ದು, ಅವು ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಬಿನ್‌ಗಳನ್ನು ತಲುಪಿಸುತ್ತವೆ. ಡಬ್ಬಿಗಳ ನಿರ್ವಹಣೆ ಮತ್ತು ವಿತರಣಾ ವ್ಯವಸ್ಥೆಯು ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಮೆಚ್ಚುಗೆ ಗಳಿಸಿದೆ.

ವೇಷ ಭೂಷಣವೇ ಇವರ ಟ್ರೇಡ್​ ಮಾರ್ಕ್​: ಬಿಳಿ ಕುರ್ತಾ-ಪೈಜಾಮಾ ಡಬ್ಬಾವಾಲಾಗಳ ವಿಶೇಷ ಸಮವಸ್ತ್ರವಾಗಿದೆ. ತಲೆಯ ಮೇಲೊಂದು ಗಾಂಧಿ ಟೋಪಿ, ಕಾಲಲ್ಲಿ ಕೊಲ್ಹಾಪುರಿ ಚಪ್ಪಲ್‌ಗಳು ಇವರ ಡ್ರೇಟ್​ ಮಾರ್ಕ್​ ಆಗಿವೆ. ಒಂದೇ ಒಂದು ಊಟದ ಡಬ್ಬಿಯೂ ಅದಲು ಬದಲಿಲ್ಲದಂತೆ ತಲುಪಬೇಕಾದವರಿಗೆ ಸಮಯಕ್ಕೆ ಸರಿಯಾಗಿ, ನಿಗದಿತ ವ್ಯಕ್ತಿಗೆ ಮುಟ್ಟುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಡಬ್ಬಾವಾಲಾಗಳ ಈ ಕರಾರುವಕ್ಕ ಕೆಲಸ ನಿಕ್ಕಸ ನಿಬ್ಬೆರಗಾಗುವಂತೆ ಮಾಡಿದೆ.

ಡಬ್ಬಾವಾಲಾಗಳ ಜೀವನೋಪಾಯ ನಿರ್ವಹಣೆ ಹೇಗೆ?: ಕೇರಳ ಸ್ಟೇಟ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎಸ್‌ಸಿಇಆರ್‌ಟಿ) 2024 ರ ಹೊಸ ಪಠ್ಯಕ್ರಮದ ಭಾಗವಾಗಿ ಡಬ್ಬಾವಾಲಾಗಳ ಸ್ಫೂರ್ತಿಯುತ ಮಾಹಿತಿಯನ್ನು ಅಳವಡಿಸಿಕೊಂಡಿದೆ. ಡಬ್ಬೇವಾಲಾಗಳ ಸಂಪೂರ್ಣ ಇತಿಹಾಸ, ಅವರ ಉಡುಗೆ, ಸೇವೆ, ನಿರ್ವಹಣೆ ಮತ್ತು ವಿತರಣಾ ವ್ಯವಸ್ಥೆಯ ಬಗ್ಗೆ ಪಠ್ಯದಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಡಬ್ಬಾವಾಲಾಗಳ ಸಂಪೂರ್ಣ ನಿರ್ವಹಣೆ ಮತ್ತು ಅವರ ಜೀವನದ ಪರಿಸ್ಥಿತಿಗಳನ್ನು ಈ ಅಧ್ಯಾಯದಲ್ಲಿ ಹೈಲೈಟ್ಸ್​ ಮಾಡಲಾಗಿದೆ.

ಕೇರಳ ಸರ್ಕಾರದ ನಿರ್ಧಾರಕ್ಕೆ ಹ್ಯಾಟ್ಯಾಪ್​ ಹೇಳಿದ ಸಂಘಟನೆ: ಈ ಕುರಿತು ಮಾತನಾಡಿರುವ ಡಬ್ಬಾವಾಲಾಗಳ ಸಂಘಟನೆಯ ವಕ್ತಾರ ವಿಷ್ಣು ಕಲ್ಡುಕೆ, ಕೇರಳದಂತಹ ರಾಜ್ಯ ನಮ್ಮನ್ನು ಗಮನಿಸಿದ್ದಕ್ಕಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ. ನಮಗೆ ಪ್ರಚಾರಕ್ಕೆ ಕೊರತೆ ಇಲ್ಲ. ಆದರೆ ನಮ್ಮ ನಿರ್ವಹಣೆ ಮತ್ತು ನಮ್ಮ ವ್ಯವಸ್ಥೆಯ ಮಾಹಿತಿಯು ದೂರದೂರಕ್ಕೆ ಹರಡಬೇಕು ಎಂಬುದಷ್ಟೇ ನಮ್ಮ ಪ್ರಾಮಾಣಿಕ ಬಯಕೆಯಾಗಿದೆ ಅಂತಾರೆ ಅವರು.

ಕೇರಳ ಶಿಕ್ಷಣ ಇಲಾಖೆಗೆ ಧನ್ಯವಾದ ಹೇಳಿದ ಡಬ್ಬಾವಾಲಾಗಳು: ಕೇರಳದ ಶಾಲಾ ಪಠ್ಯಕ್ರಮದಲ್ಲಿ ಡಬ್ಬಾವಾಲಾಗಳ ಕೆಲಸ, ಜೀವನ ಹಾಗೂ ನಿರ್ವಹಣೆಯ ವಿಷಯವನ್ನು ಸೇರಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಮುಂಬೈನ ಡಬ್ಬಾವಾಲಾಗಳು ಹೇಳಿದ್ದಾರೆ. ಈ ಸಂಬಂಧ ಮುಂಬೈ ಡಬ್ಬಾವಾಲಾಗಳು ಕೇರಳದ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಜಾಗತಿಕ ಮಟ್ಟದಲ್ಲಿ ಡಬ್ಬಾವಾಲಾಗಳ ಜೀವನ ಕ್ರಮ, ವಾಣಿಜ್ಯ ಶಾಲೆಗಳು ಮತ್ತು ಸಂಶೋಧಕರ ಗಮನ ಸೆಳೆದಿವೆ. ಮುಂಬೈನ ಡಬ್ಬಾವಾಲಾಗಳನ್ನು ಆಧರಿಸಿದ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಪುಸ್ತಕಗಳು ಮತ್ತು ಸಂಶೋಧನೆಗಳು ಇವರ ಕೆಲಸವನ್ನು ಪ್ರಪಂಚದಾದ್ಯಂತ ಹರಡಲು ಕಾರಣವಾಗಿವೆ. ಅಷ್ಟೇ ಅಲ್ಲ 2019 ರಲ್ಲಿ ಕಲಾವಿದ ಅಭಿಜಿತ್ ಕಿಣಿ ಎಂಬುವವರು ಡಬ್ಬಾವಾಲಾಗಳ ಮೇಲೆ ಕಾಮಿಕ್ ಪುಸ್ತಕವನ್ನೂ ಮಾಡಿದ್ದಾರೆ.

ನಮಗೆ ಹೆಮ್ಮೆಯ ವಿಷಯ: ಮುಂಬೈನ ಡಬ್ಬಾವಾಲಾಗಳ ಇತಿಹಾಸವನ್ನು ಕೇರಳದ ಪಠ್ಯಪುಸ್ತಕದಲ್ಲಿ ಸೇರಿಸುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಕೇರಳದ ಪಯ್ಯನೂರಿನ ವಿದ್ಯಾ ಮಂದಿರ ಪಬ್ಲಿಕ್ ಶಾಲೆಯ ಶಿಕ್ಷಕಿ ರಾಣಿ ಕೆ.ಹೇಳಿದ್ದಾರೆ. ಮುಂಬೈನ ಡಬ್ಬೇವಾಲಾಗಳ ಖ್ಯಾತಿ ಸಾಗರೋತ್ತರದಲ್ಲಿದೆ. ಮುಂಬೈನ ದಬೇವಾಲಾಗಳ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ ಮತ್ತು ಅವರ ಸೇವೆ ಯಾವುದೇ ಸಂದರ್ಭದಲ್ಲೂ ನಿಲ್ಲುವುದಿಲ್ಲ. ಕೋಟ್ಯಂತರ ಜನರಿಗೆ ಸಮಯಕ್ಕೆ ಸರಿಯಾಗಿ ಊಟವನ್ನು ತಲುಪಿಸುವ ಕೆಲಸವನ್ನು ಅವರು ಸದ್ದಿಲ್ಲದೇ ಶತಮಾನಗಳಿಗಿಂತಲೂ ಹಿಂದಿನಿಂದ ಮಾಡಿಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲ ಅವರ ನಿರ್ವಹಣೆ ಮತ್ತು ಕಾರ್ಯನಿರ್ವಹಣೆಯು ಗಮನಾರ್ಹವಾಗಿದೆ. ಕೇರಳದ ಶಾಲಾ ವಿದ್ಯಾರ್ಥಿಗಳಿಗೆ ಡಬ್ಬಾವಾಲಾಗಳ ಜೀವನವನ್ನು ಆಧರಿಸಿದ ಪಠ್ಯಕ್ರಮ ಮಾಡಿರುವುದು ವಿದ್ಯಾರ್ಥಿಗಳ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಇದನ್ನು ಓದಿ: ಮಹಿಳಾ ಹಾಸ್ಟೆಲ್‌ನಲ್ಲಿ ರೆಫ್ರಿಜರೇಟರ್​​ ಸ್ಫೋಟವಾಗಿ ಇಬ್ಬರು ಸಾವು: ಕಟ್ಟಡದ ಮಾಲೀಕ ಬಂಧನ - fire accident

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆ: ದಾಸೋಹಕ್ಕೆ ಮುಂದಾದ ಅಜ್ಮೀರ್​ ಶರೀಫ್​ ದರ್ಗಾ - Ajmer Sharif Dargah

ETV Bharat Logo

Copyright © 2025 Ushodaya Enterprises Pvt. Ltd., All Rights Reserved.