ETV Bharat / bharat

ಶಂಕಿತ ವ್ಯಕ್ತಿಯಲ್ಲಿ ಎಂಪಾಕ್ಸ್​ ವೈರಸ್​ ದೃಢ: ಆದರೆ ಮಾರಕವಲ್ಲದ ಕ್ಲಾಡ್​​ -2 ಮಾದರಿ: ಕೇಂದ್ರ ಸರ್ಕಾರ - Mpox virus confirmed

author img

By PTI

Published : Sep 9, 2024, 7:54 PM IST

ವಿದೇಶಿ ಪ್ರಯಾಣಿಕನಲ್ಲಿ ಕಂಡು ಬಂದಿದ್ದ ಶಂಕಿತ ಎಂಪಾಕ್ಸ್​ ವೈರಸ್​ ದೃಢಪಟ್ಟಿದೆ. ಆದರೆ, ಮಾರಕವಾದ ಕ್ಲಾಡ್​​-1 ಮಾದರಿ​ ಅಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಶಂಕಿತ ವ್ಯಕ್ತಿಯಲ್ಲಿ ಎಂಪಾಕ್ಸ್​ ವೈರಸ್​ ದೃಢ
ಶಂಕಿತ ವ್ಯಕ್ತಿಯಲ್ಲಿ ಎಂಪಾಕ್ಸ್​ ವೈರಸ್​ ದೃಢ (ETV Bharat)

ನವದೆಹಲಿ: ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದ ಶಂಕಿತ ಎಂಪಾಕ್ಸ್​ ವೈರಸ್​​ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಐಸೋಲೇಟ್​ ಮಾಡಲಾಗಿದೆ. ಆರೋಗ್ಯವೂ ಸ್ಥಿರವಾಗಿದೆ ಎಂದು ಹೇಳಿದೆ.

ವಿದೇಶದಿಂದ ಬಂದ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಆತನಲ್ಲಿ ಎಂಪಾಕ್ಸ್​ ವೈರಸ್​​ ಲಕ್ಷಣಗಳು ಕಂಡು ಬಂದಿದ್ದವು. ತಕ್ಷಣವೇ ಆತನನ್ನು ಪ್ರತ್ಯೇಕಿಸಿ, ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇದೀಗ ಪ್ರಯೋಗಾಲಯದಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಇದು ಪಶ್ಚಿಮ ಆಫ್ರಿಕಾದಲ್ಲಿ ಹರಡಿರುವ ಎರಡನೇ ಹಂತದ ಕ್ಲಾಡ್​​-2 ವೈರಸ್​ ಮಾದರಿಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಯಾಣಿಕನಲ್ಲಿ ಕಂಡು ಬಂದಿರುವ ವೈರಸ್​​ ಕ್ಲಾಡ್​​-2 ಆಗಿದ್ದು, ಇದು ಅಷ್ಟು ಮಾರಕವಲ್ಲ. 2022 ರಿಂದ ಭಾರತದಲ್ಲಿ ಇಂತಹ 30 ಪ್ರಕರಣಗಳು ಪತ್ತೆಯಾಗಿವೆ. ಇದು ವಾಸಿಯಾಗುವ ವೈರಸ್​ ಆಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಪತ್ತೆ, ಚಿಕಿತ್ಸೆ ಮತ್ತು ಪ್ರತ್ಯೇಕತೆಗೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಂಕಿತ ವೈರಸ್​ ಮಾರಕವಲ್ಲ: ಸೋಂಕಿತ ವ್ಯಕ್ತಿಯಲ್ಲಿ ಕಂಡು ಬಂದಿರುವ ವೈರಸ್​ ಕ್ಲಾಡ್​​-1 ವೈರಸ್​​ನ ಮಾದರಿಯಲ್ಲಿ. ಇದು ಅತ್ಯಂತ ಮಾರಕವಾಗಿದ್ದು, ಪ್ರಾಣಾಂತಕವಾಗಿದೆ. ಪ್ರಯಾಣಿಕನಲ್ಲಿ ಪತ್ತೆಯಾಗಿದ್ದು, ಕ್ಲಾಡ್​-2 ಮಾದರಿಯ ವೈರಸ್​. ಇದು ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಮಾರಕ ಕ್ಲಾಡ್​​-1 ವೈರಸ್​​ ಮಾದರಿಯ ಬಗ್ಗೆ ಎಚ್ಚರ ವಹಿಸಲು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಯೂಎಚ್​ಒ) ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿತ್ತು. ಭಾರತದಲ್ಲಿ ಕಂಡು ಬಂದಿರುವ ವೈರಸ್​ ಅದಲ್ಲ ಎಂದು ಸ್ಪಷ್ಟನೆ ನೀಡಿದೆ.

ಸೋಂಕಿತ ವ್ಯಕ್ತಿ ವೈರಸ್​ ಹರಡಿರುವ ದೇಶಕ್ಕೆ ಪ್ರಯಾಣಿಸಿ ವಾಪಸ್​ ಆಗಿದ್ದಾನೆ. ಹೀಗಾಗಿ ಆತನಿಗೆ ಸೋಂಕು ತಾಕಿರುವ ಸಾಧ್ಯತೆ ಇದೆ. ಪ್ರಸ್ತುತ ಆತನನ್ನು ನಿಗದಿತ ಆರೈಕೆಯಲ್ಲಿ ಇಡಲಾಗಿದೆ. ರೋಗಿಯ ಆರೋಗ್ಯ ಸದ್ಯ ಸ್ಥಿರವಾಗಿದೆ. ಯಾವುದೇ ಅಪಾಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಅಪಾಯದ ಸೂಚನೆಯಿಲ್ಲ: ಸೋಂಕಿತ ವ್ಯಕ್ತಿಯಲ್ಲಿ ಎಂಪಾಕ್ಸ್​ ದೃಢಪಟ್ಟಿರುವ ಕಾರಣ, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಈತನ ಸಂಪರ್ಕಕ್ಕೆ ಬಂದವರ ಬಗ್ಗೆ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಅವರನ್ನೂ ಬೇರ್ಪಡಿಸಿ ಚಿಕಿತ್ಸೆ ನೀಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ದಿಷ್ಟ ಅಪಾಯದ ಸೂಚನೆಗಳು ಹೊರಡಿಸುವ ಅವಶ್ಯಕತೆಯಿಲ್ಲ. ಪ್ರೋಟೋಕಾಲ್‌ಗಳ ಪ್ರಕಾರ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಸಂಪರ್ಕಿತರ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಶಂಕಿತ ಎಂಪಾಕ್ಸ್ ಲಕ್ಷಣ: ಕಟ್ಟೆಚ್ಚರ ವಹಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ - Mpox Outbreak

ETV Bharat Logo

Copyright © 2024 Ushodaya Enterprises Pvt. Ltd., All Rights Reserved.