ETV Bharat / bharat

ಪುರುಷನೊಂದಿಗೆ 10 ವರ್ಷ ಸಂಬಂಧದಲ್ಲಿದ್ದು 'ಅತ್ಯಾಚಾರ' ಎಂದ ಮಹಿಳೆಯ ಪ್ರಕರಣ ರದ್ದು - MP High Court Junks Rape Case

ವ್ಯಕ್ತಿಯೊಂದಿಗೆ ಹತ್ತು ವರ್ಷಗಳ ಕಾಲ ಸಂಬಂಧದಲ್ಲಿದ್ದು ಬಳಿಕ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಯ ಪ್ರಕರಣವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ.

Madhya Pradesh High Court  Rape Case  Madhya Pradesh
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 8, 2024, 9:46 AM IST

ಜಬಲ್‌ಪುರ(ಮಧ್ಯಪ್ರದೇಶ): ಪುರುಷನೊಂದಿಗೆ ಹತ್ತು ವರ್ಷಗಳ ಕಾಲ ಸಂಬಂಧದಲ್ಲಿದ್ದು ಬಳಿಕ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದ ಮಹಿಳೆಯ ಪ್ರಕರಣವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದು ಮಾಡಿದೆ.

ಪ್ರಕರಣದ ವಿವರ: ಮಹಿಳೆಯೊಬ್ಬಳು ಪುರುಷನೊಂದಿಗೆ 10 ವರ್ಷ ಸಂಬಂಧದಲ್ಲಿದ್ದು, ನಂತರ ಆತನ ವಿರುದ್ಧವೇ ಅತ್ಯಾಚಾರ ಆರೋಪ ಹೊರಿಸಿದ್ದಳು. ಇಬ್ಬರು ಸ್ವಇಚ್ಛೆಯಂತೆ ದೈಹಿಕ ಸಂಬಂಧ ಹೊಂದಿದ್ದರು. ಆದರೆ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ ನಂತರ ಪರಸ್ಪರ ಬೇರ್ಪಟ್ಟಿದ್ದಾರೆ. ಇದಾದ ಬಳಿಕ ಪುರುಷನ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿರುವುದನ್ನು ನ್ಯಾಯಾಲಯ ಗಮನಿಸಿದೆ.

ಈ ಪ್ರಕರಣವನ್ನು 'ಅತ್ಯಾಚಾರ ಪ್ರಕರಣ' ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳುವ ಮೂಲಕ ರದ್ದುಪಡಿಸಿದೆ. ಜೊತೆಗೆ, ಐಪಿಸಿ ಸೆಕ್ಷನ್ 366 ರಲ್ಲಿ ಮೊದಲು (ಮಹಿಳೆಯನ್ನು ಮದುವೆಗೆ ಒತ್ತಾಯಿಸುವುದು) ಮೂಲಕ ಪುರುಷನ ವಿರುದ್ಧ ಆರೋಪವಿಲ್ಲ. ನಂತರದ ಸಮಯದಲ್ಲಿ ಅರ್ಜಿದಾರರ ವಿರುದ್ಧ ಈ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾದ ಅಪರಾಧವನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು.

ನವೆಂಬರ್ 2021ರಲ್ಲಿ ಕಟ್ನಿ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಇತರ ಆರೋಪಗಳ ಹಿನ್ನೆಲೆಯಲ್ಲಿ ವ್ಯಕ್ತಿಯ ವಿರುದ್ಧ ಮಹಿಳೆ ಪ್ರಕರಣ ದಾಖಲಿಸಿದ್ದರು. ಈ ಕುರಿತು ಆರೋಪಿ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಭಾರತದ ವಾಯು ಗುಣಮಟ್ಟ ಮಾನದಂಡಗಳ ಪರಿಷ್ಕರಣೆ ಅಗತ್ಯ: ವಿಜ್ಞಾನಿ ಭಾರ್ಗವ್ ಕೃಷ್ಣ - Air Pollution In India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.