ETV Bharat / bharat

ಸಂಸದ ಸ್ಥಾನದಿಂದ ಇ.ತುಕಾರಾಂರನ್ನು ಅನರ್ಹಗೊಳಿಸಬೇಕು: ಪಿ.ರಾಜೀವ್ ಆಗ್ರಹ - P Rajiv - P RAJIV

ಅಕ್ರಮ ಹಣದಿಂದ ಆಯ್ಕೆಯಾದ ಇ.ತುಕಾರಾಂಗೆ ಸಂಸತ್ತಿನ ಒಳಗೆ ಸಂವಿಧಾನದ ಪ್ರತಿಯನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸಲು ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಟೀಕಿಸಿದರು.

ಪಿ.ರಾಜೀವ್
ಪಿ.ರಾಜೀವ್ (ETV Bharat)
author img

By ETV Bharat Karnataka Team

Published : Jul 14, 2024, 10:53 PM IST

ಬೆಂಗಳೂರು: ವಾಲ್ಮೀಕಿ ನಿಗಮದ ಹಣ ಬಳಸಿಕೊಂಡು ಸಂಸದರಾಗಿ ಆಯ್ಕೆಯಾದ ಇ.ತುಕಾರಾಂ ಅವರನ್ನು ಸಂಸದರ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದರು. ಪಕ್ಷದ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಚುನಾವಣಾ ಆಯೋಗದ ಮುಂದೆ ಮನವಿ ಸಲ್ಲಿಸಲಿದ್ದೇವೆ. ಅಕ್ರಮ ಹಣದಿಂದ ಆಯ್ಕೆಯಾದ ಈ ಸಂಸದರಿಗೆ ಸಂಸತ್ತಿನ ಒಳಗೆ ಸಂವಿಧಾನದ ಪ್ರತಿಯನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸಲು ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದರು.

ಇ.ತುಕಾರಾಂ ಅವರು ಸಂಸತ್ತಿನ ಒಳಗಡೆ ಒಂದು ಕ್ಷಣ ಕುಳಿತುಕೊಳ್ಳಲೂ ನೈತಿಕ ಮೌಲ್ಯವನ್ನು ಕಳಕೊಂಡಿದ್ದಾರೆ. ಅವರಿಗೆ ಆ ಅರ್ಹತೆ ಇಲ್ಲ ಎಂದು ಮಾಧ್ಯಮಗಳ ಮೂಲಕ ಜನತೆಯ ಗಮನಕ್ಕೆ ತರುತ್ತೇವೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ನಾಗೇಂದ್ರರನ್ನು ಬಂಧಿಸಿದ ಇ.ಡಿ.ಯು ನ್ಯಾಯಾಂಗದ ಮುಂದೆ ಹಾಜರುಪಡಿಸುವ ರಿಮಾಂಡ್ ಅರ್ಜಿಯಲ್ಲಿ ಇವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಮೀಸಲಿದ್ದ ಹಣ ದುರ್ಬಳಕೆ ಆಗಿದೆ. ಚುನಾವಣೆಗೆ ಕೂಡ 20 ಕೋಟಿ 19 ಲಕ್ಷ ರೂಪಾಯಿ ದುರ್ಬಳಕೆ ಆಗಿದೆ ಎಂದು ರಿಮಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದರು.

ಹಣ ಬಳಕೆ ಹಿಂದೆ ಸಿಎಂ, ಕೆಪಿಸಿಸಿ ಅಧ್ಯಕ್ಷರ ಕುಮ್ಮಕ್ಕು?: ಲೋಕಸಭಾ ಚುನಾವಣೆಗೆ ಎಸ್‍ಟಿ ನಿಗಮದ ಹಣವನ್ನು ನಾಗೇಂದ್ರ ಅವರು ಬಳಸಿದ್ದಾರೆ ಎಂದರೆ ಇದಕ್ಕೆ ಏನು ಕಾರಣ? ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತುಕಾರಾಂ, ನಾಗೇಂದ್ರರ ಸಂಬಂಧಿಕರೂ ಅಲ್ಲ. ನಾಗೇಂದ್ರರ ಸಹೋದರರು, ಮನೆಯವರು, ಮಕ್ಕಳು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೂ ಸಹ ನಾಗೇಂದ್ರ ಅವರು 20.19 ಕೋಟಿ ರೂಪಾಯಿಯನ್ನು ಲೋಕಸಭಾ ಚುನಾವಣೆಗೆ ದುರ್ಬಳಕೆ ಮಾಡಿದ ದಾಖಲೆ ಸಿಕ್ಕಿದೆ ಎಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಒಪ್ಪಿಗೆ ಮತ್ತು ಕುಮ್ಮಕ್ಕು ಇಲ್ಲದೆ, ಈ ಹಣವನ್ನು ಚುನಾವಣೆಗೆ ಬಳಸಲು ಸಾಧ್ಯವೇ ಎಂದು ಪಿ.ರಾಜೀವ್ ಅವರು ಪ್ರಶ್ನಿಸಿದರು.

ಹಾಗಾಗಿ ಚುನಾವಣಾ ಅಕ್ರಮದ ಕುರಿತು ಇನ್ನಷ್ಟು ಆಳವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಬಡವರ ಹಣವನ್ನು ಚುನಾವಣೆಗೆ ಬಳಸಿಕೊಂಡು ಯಾರು ಸಂಸದರಾಗಿ ಆಯ್ಕೆಯಾಗಿದ್ದಾರೋ (ಇ.ತುಕಾರಾಂ) ಅವರ ಆಯ್ಕೆಯನ್ನು ರದ್ದುಪಡಿಸಲು ಆಗ್ರಹಿಸಿದರು.

ರಾಜೀನಾಮೆ ಕೊಡದಿದ್ದರೆ ನಿರಂತರ ಹೋರಾಟ: ಸಂಸದ ಇ.ತುಕಾರಾಂ ಅವರಿಗೆ ಸಮಾಜದ ಬಗ್ಗೆ ಅಭಿಮಾನ ಮತ್ತು ಕಾಳಜಿ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಆಗ್ರಹಿಸಿದರು. ಇ.ತುಕಾರಾಂ ಅವರು ರಾಜೀನಾಮೆ ಕೊಡದೆ ಇದ್ದಲ್ಲಿ ಎಸ್‍ಟಿ ಮೋರ್ಚಾ ಮತ್ತು ಸಮಾಜದ ವತಿಯಿಂದ ನಿರಂತರ ಹೋರಾಟ ಸಂಘಟಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಸಿದರು.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಕುಟುಂಬಸ್ಥರ ಬ್ಯಾಂಕ್ ವಹಿವಾಟಿನ ಬಗ್ಗೆ ED ತ‌ನಿಖೆ - Valmiki Corporation Scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.