ETV Bharat / bharat

ಎರಡು ದಿನ ಮುಂಚಿತವಾಗಿಯೇ ಕೇರಳಕ್ಕೆ ಅಪ್ಪಳಿಸಿದ ಮುಂಗಾರು; ಅನ್ನದಾತರ ಸಂಭ್ರಮ; ಕರ್ನಾಟಕಕ್ಕೆ ಯಾವಾಗ? - monsoon arrives in kerala

ಭಾರತೀಯ ಕೃಷಿ ಆರ್ಥಿಕತೆಗೆ ಪ್ರಮುಖವಾಗಿರುವ ಮುಂಗಾರು ಮಳೆಯು ಕೇರಳದ ಕರಾವಳಿಗೆ ಗುರುವಾರ ಅಪ್ಪಳಿಸಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ನಿರೀಕ್ಷೆ ಹೊಂದಲಾಗಿದೆ.

Representative image
ಮಳೆಯ ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : May 30, 2024, 3:49 PM IST

Updated : May 30, 2024, 4:00 PM IST

ನವದೆಹಲಿ: ನೈಋತ್ಯ ಮುಂಗಾರು ಗುರುವಾರವೇ ಕೇರಳದ ಕರಾವಳಿಗೆ ಅಪ್ಪಳಿಸಿದೆ. ಈಶಾನ್ಯ ಭಾರತದ ಭಾಗಗಳಿಗೂ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಿಸಿದೆ. ಈ ಮುಂಗಾರು ಮಳೆಯು ಭೂಮಿಗೆ ಜೀವಕಳೆ ನೀಡಲಿದ್ದು, ಅನ್ನದಾತರಲ್ಲಿ ಸಂಭ್ರಮಕ್ಕೂ ಕಾರಣವಾಗಿದೆ. ಕೃಷಿ ಚಟುವಟಿಕೆಗಳಿಗೂ ವೇಗ ಸಿಗಲಿದೆ.

ಈ ವರ್ಷದ ಮುಂಗಾರು ಎರಡು ದಿನ ಮುಂಚಿತವಾಗಿಯೇ ದೇಶಕ್ಕೆ ಕಾಲಿಟ್ಟಿದೆ. ವಾಡಿಕೆ ಪ್ರಕಾರ, ಈ ಬಾರಿ ಜೂನ್ 1ರಂದು ಮಾನ್ಸೂನ್ ಪ್ರವೇಶವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಕೇರಳವು ಮುಂಗಾರು ಆಗಮನಕ್ಕೂ ಪೂರ್ವದಲ್ಲೇ ವ್ಯಾಪಕವಾದ ಮಳೆ ಕಂಡಿತ್ತು. ಇಂದು ಅಧಿಕೃತವಾಗಿ ಮುಂಗಾರು ಪ್ರವೇಶಿಸಿದೆ. ಜೂನ್ 6ಕ್ಕೆ ಕರ್ನಾಟಕಕ್ಕೆ ಮುಂಗಾರು ಆಗಮನದ ನಿರೀಕ್ಷೆ ಇದೆ. 2023ರ ಮುಂಗಾರು ಋತುವಿನಲ್ಲಿ (ಜೂನ್-ಸೆಪ್ಟೆಂಬರ್) ದೇಶದಾದ್ಯಂತ ಶೇ.94ರಷ್ಟು ಮಳೆಯಾಗಿತ್ತು.

ಈ ಮುಂಗಾರು ಮಳೆ ಭಾರತದ ನೆಲಕ್ಕೆ ಪ್ರಮುಖವಾಗಿದೆ. ಕೇರಳದಿಂದ ಅದು ಆರಂಭವಾಗಿ ದೇಶಾದ್ಯಂತ ಪರಿಸರಿಸಲಿದೆ. ಬಿಸಿ ಮತ್ತು ಶುಷ್ಕ ಋತುವಿನಿಂದ ಮಳೆಗಾಲಕ್ಕೆ ಪರಿವರ್ತನೆಯ ಪ್ರಮುಖ ಸೂಚಕವೂ ಆಗಿದೆ. ಮಾನ್ಸೂನ್ ಉತ್ತರಾಭಿಮುಖವಾಗಿ ಮುಂದುವರೆದಂತೆ ಅದು ಆವರಿಸುವ ಪ್ರದೇಶಗಳ ಮೇಲೆ ಸುಡುವ ಬೇಸಿಗೆಯ ತಾಪಮಾನಕ್ಕೆ ತಂಪಿನ ಕಂಪು ಸೂಸುತ್ತದೆ.

ಕೃಷಿ ಚಟುವಟಿಕೆಗಳಿಗೆ ವೇಗ: ಮುಂಗಾರು ಮಳೆ ಭಾರತೀಯ ಕೃಷಿ ಆರ್ಥಿಕತೆಗೆ ನಿರ್ಣಾಯಕವಾಗಿವೆ. ಭಾರತವು ಬೇಸಿಗೆ, ಮುಂಗಾರು (ಖಾರಿಫ್) ಮತ್ತು ಹಿಂಗಾರು (ರಬಿ) ಎಂಬ ಮೂರು ಬೆಳೆ ಋತುಗಳನ್ನು ಹೊಂದಿದೆ. ರಬಿ ಬೆಳೆಗಳನ್ನು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಿತ್ತನೆ ಮಾಡಿ, ಜನವರಿಯಿಂದ ಕೊಯ್ಲು ಮಾಡಲಾಗುತ್ತದೆ. ಖಾರಿಫ್ ಬೆಳೆಗಳು ​ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದ್ದು, ಇವುಗಳನ್ನು ಜೂನ್ - ಜುಲೈನಲ್ಲಿ ಬಿತ್ತನೆ ಮಾಡಿ, ಅಕ್ಟೋಬರ್-ನವೆಂಬರ್​ನಲ್ಲಿ ಕೊಯ್ಲು ಮಾಡಲಾಗುತ್ತದೆ. ಬೇಸಿಗೆ ಬೆಳೆಗಳು ಎಂದರೆ, ರಬಿ ಮತ್ತು ಖಾರಿಫ್ ನಡುವೆ ಬೆಳೆಯುವ ಬೆಳೆಗಳಾಗಿವೆ.

ಸಾಂಪ್ರದಾಯಿಕವಾಗಿ ಖಾರಿಫ್ ಬೆಳೆಗಳು ಮಾನ್ಸೂನ್ ಮಳೆಯ ಸಾಮಾನ್ಯ ಪ್ರಗತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಭತ್ತ, ಹೆಸರು, ಸಜ್ಜೆ, ಜೋಳ, ಶೇಂಗಾ, ಸೋಯಾಬೀನ್ ಮತ್ತು ಹತ್ತಿ ಸೇರಿ ಪ್ರಮುಖ ಉತ್ಪನ್ನಗಳು ಖಾರಿಫ್ ಬೆಳೆಗಳಾಗಿವೆ. ಆದರೆ, ಮಾನ್ಸೂನ್ ಮಳೆಯ ಮೇಲೆ ಖಾರಿಫ್ ಬೆಳೆಗಳು ಉತ್ಪಾದನೆಯ ಅವಲಂಬನೆಯು ಕ್ರಮೇಣ ಇಳಿಮುಖವಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ (ಇಂಡ್-ರಾ) ವಿಶ್ಲೇಷಿಸಿದೆ.

ಈ ವರ್ಷದ ಆರಂಭದಲ್ಲಿ ಹವಾಮಾನ ಇಲಾಖೆಯು ನೈಋತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ವಾಡಿಕೆಗಿಂತ ಹೆಚ್ಚಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ. ದೀರ್ಘ ಅವಧಿಯ ಸರಾಸರಿಯ ಶೇ.106ರಷ್ಟು ಮಳೆಯನ್ನು ನಿರೀಕ್ಷಿಸಲಾಗಿದೆ. ಖಾಸಗಿ ಸಂಸ್ಥೆಯಾದ ಸ್ಕೈಮೆಟ್ ಕೂಡ ಈ ವರ್ಷ ವಾಡಿಕೆಯ ಮುಂಗಾರು ಮಳೆಯ ಮುನ್ಸೂಚನೆ ನೀಡಿದೆ.

ಈ ನೈಋತ್ಯ ಮುಂಗಾರು ಅವಧಿಯಲ್ಲಿ ಭಾರತದಲ್ಲಿ ಒಟ್ಟಾರೆ ಮಳೆಯ ಶೇ.70ಕ್ಕಿಂತ ಹೆಚ್ಚು ಮಳೆ ಸುರಿಯುತ್ತದೆ. ಹೀಗಾಗಿ, ಮಾನ್ಸೂನ್ ಮಳೆಯ ಸಮಯೋಚಿತ ಮತ್ತು ಸರಿಯಾದ ಸಂಭವವು ಭಾರತೀಯ ಆರ್ಥಿಕತೆಗೆ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತದ ಜನಸಂಖ್ಯೆಯ ಸುಮಾರು ಶೇ.45ರಷ್ಟು ಜನರು ಮಳೆಯ ಮೇಲೆ ಅವಲಂಬಿತವಾಗಿರುವ ಕೃಷಿಯನ್ನೇ ನಂಬಿಕೊಂಡಿದ್ದಾರೆ.

ಇದನ್ನೂ ಓದಿ: ಜೂನ್ 6ಕ್ಕೆ ಕರ್ನಾಟಕಕ್ಕೆ ಮುಂಗಾರು ಎಂಟ್ರಿ: ಈ ಬಾರಿ ರಾಜ್ಯದಲ್ಲಿ ಹೇಗಿರಲಿದೆ ಮಳೆ?

Last Updated : May 30, 2024, 4:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.