ETV Bharat / bharat

ಜಸ್ಟ್​​​ ಮೂರೇ-3 ಸೆಕೆಂಡುಗಳಲ್ಲಿ ಧಾರ್ಮಿಕ ಮುಖ್ಯಸ್ಥನಿಗೆ ಗುಂಡಿಕ್ಕಿದ ದುಷ್ಕರ್ಮಿಗಳು; ಕೃತ್ಯ ಸಿಸಿಟಿವಿಯಲ್ಲಿ ಸೆರೆ - Gurudwara chief murder

author img

By ETV Bharat Karnataka Team

Published : Mar 28, 2024, 5:21 PM IST

Updated : Mar 30, 2024, 2:53 PM IST

Gurudwara chief murder: ದುಷ್ಕರ್ಮಿಗಳಿಬ್ಬರು ಧಾರ್ಮಿಕ ಮುಖ್ಯಸ್ಥನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ ಹತ್ಯೆಯಾದ ಎರಡನೇ ಕೊಲೆ ಇದಾಗಿದೆ. ಈ ಹತ್ಯಾಕಾಂಡಗಳಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.

ಧಾರ್ಮಿಕ ಮುಖ್ಯಸ್ಥನನ್ನು ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು

ಉತ್ತರಾಖಂಡ: ಉಧಮ್ ಸಿಂಗ್ ನಗರದಲ್ಲಿ ಧಾರ್ಮಿಕ ಮುಖ್ಯಸ್ಥನೊಬ್ಬನನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳಿಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಡೇರಾ ಕರಸೇವಾ ಪ್ರಮುಖ್ ಬಾಬಾ ತಾರ್ಸೆಮ್ ಸಿಂಗ್ ಹತ್ಯೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಬೈಕ್ ಏರಿ ಬಂದ ಇಬ್ಬರು ದಾಳಿಕೋರರು, ಮೂರೇ ಮೂರು ಸೆಕೆಂಡ್‌ಗಳಲ್ಲಿ ಈ ಹತ್ಯಾಕಾಂಡ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.

ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದು ಈವರೆಗೂ ಸುಳಿವು ಸಿಕ್ಕಿಲ್ಲ. ಕೇವಲ ಮೂರು ತಿಂಗಳಲ್ಲಿ ನಡೆದ ಎರಡನೇ ಕೊಲೆ ಇದಾಗಿದೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ನಡೆದಿದ್ದು, ಈ ಹತ್ಯಾಕಾಂಡಗಳಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.

ಬೆಳಗ್ಗೆ 6 ಗಂಟೆಯ ಸುಮಾರು ಬೈಕ್​​ನಲ್ಲಿ ಬಂದ ಅಪರಿಚಿತರು, ಡೇರಾದ ತೆರೆದ ಗೇಟ್‌ಗಳನ್ನು ಪ್ರವೇಶಿಸಿದ್ದಾರೆ. ಪ್ರವೇಶ ಮಾಡುತ್ತಿದ್ದಂತೆ ಕುರ್ಚಿಯ ಮೇಲೆ ಕುಳಿತಿದ್ದ ಬಾಬಾ ತಾರ್ಸೆಮ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ತಮ್ಮ ಬೈಕ್​ ಸಹಿತ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಗುಂಡಿಕ್ಕಿ ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಸಿಸಿಟಿವಿ ದೃಶ್ಯಗಳ ಆಧಾರ ಮೇರೆಗೆ ಪೊಲೀಸರು ಆರೋಪಿಗಳ ಹಿಂದೆ ಬಿದ್ದಿದ್ದಾರೆ.

ಎಸ್‌ಎಸ್‌ಪಿ ಮಂಜುನಾಥ್ ಮಾಹಿತಿ: ಬೈಕ್​​ ಸವಾರನ ಹಿಂದೆ ಕುಳಿತಿದ್ದ ದಾಳಿಕೋರ ದೊಡ್ಡ ರೈಫಲ್ ಹಿಡಿದು ಬಾಬಾ ತಾರ್ಸೆಮ್ ಸಿಂಗ್ ಮೇಲೆ ಎರಡು ಸುತ್ತು ಗುಂಡು ಹಾರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರೇ ಮೂರು ಸೆಕೆಂಡುಗಳಲ್ಲಿ ಈ ಘಟನೆ ನಡೆದುಹೋಗಿದೆ. ಕೆಲಸ ಮುಗಿಯುತ್ತಿದ್ದಂತೆ ದುಷ್ಕರ್ಮಿಗಳು ಬೈಕ್​ ಸಹಿತ ಅಲ್ಲಿಂದ ಪರಾರಿಯಾಗಿದ್ದಾರೆ. ಗುಂಡು ತಿಂದ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ತಕ್ಷಣ ಖತೀಮಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಅವರು ಅಲ್ಲಿಯೇ ಮೃತಪಟ್ಟಿರುವುದಾಗಿ ಉಧಮ್ ಸಿಂಗ್ ನಗರ ಎಸ್‌ಎಸ್‌ಪಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಖ್ಯಾತಿ ಗಳಿಸಿಕೊಂಡಿದ್ದರು: ಕೊಲೆಗೀಡಾದ ಬಾಬಾ ತಾರ್ಸೆಮ್ ಸಿಂಗ್ ಅವರು ಕಳೆದ ಹಲವು ದಿನಗಳಿಂದ ಇದೇ ಪ್ರಾರ್ಥನಾ ಮಂದಿರದ ಸೇವೆಯಲ್ಲಿ ತೊಡಗಿದ್ದರು. ಸದಾ ಸಮಾಜಸೇವೆ, ಜನರ ಸಮಸ್ಯೆಗಳ ಪರ ನಿಲ್ಲುತ್ತಿದ್ದರು. ತಮ್ಮ ಸರಳ ಜೀವನದಿಂದ ಖ್ಯಾತಿ ಸಹ ಗಳಿಸಿಕೊಂಡಿದ್ದರು. ಸಾವಿರಾರು ಭಕ್ತರನ್ನು ಹೊಂದಿದ್ದರು. ಪ್ರಾರ್ಥನಾ ಮಂದಿರದ ಪುನರ್​ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಅವರು ಮುಡಿಪಾಗಿಟ್ಟಿದ್ದರು. ಹಾಗಾಗಿ ಜನರು ಅವರನ್ನ ಕಾಣಲು ದೂರುದೂರಿಂದ ಆಗಮಿಸುತ್ತಿದ್ದರು.

ಬಿಜೆಪಿಗೆ ಹತ್ತಿರ: ಕೊಲೆಗೀಡಾದ ಬಾಬಾ ತಾರ್ಸೆಮ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಜೊತೆಗೆ ತಮ್ಮನ್ನು ಭೇಟಿಯಾಗುವವರ ಹಾಗೂ ಪ್ರಾರ್ಥನಾ ಮಂದಿರಕ್ಕೆ ಬರುವರರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಈ ಸಂಖ್ಯೆಯು ಉತ್ತರಾಖಂಡ - ಉತ್ತರಪ್ರದೇಶದಲ್ಲಿ ಮಾತ್ರವಲ್ಲದೇ ಪಂಜಾಬ್‌ನಲ್ಲಿಯೂ ದೊಡ್ಡದಾಗಿ ಬೆಳೆದಿತ್ತು. ಕೊಲೆ ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಇಡೀ ಪ್ರದೇಶದಲ್ಲಿ ಪೊಲೀಸ್​ ಪಡೆಗಳನ್ನು ನಿಯೋಜಿಸಿದ್ದಾರೆ. ವಿವಿಧೆಡೆ ತಪಾಸಣೆ ಕೂಡ ನಡೆಸಲಾಗುತ್ತಿದೆ. ತನಿಖೆ ನಡೆಸುವ ನಿಟ್ಟಿನಲ್ಲಿ ಎಸ್​​ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಗಡಿಯಲ್ಲಿ ಅಪರಾಧ ಹೆಚ್ಚಳ: ಖತೀಮಾ ನೇಪಾಳ ಮತ್ತು ಯುಪಿ ಗಡಿಯ ಪಕ್ಕದಲ್ಲಿರುವ ಪ್ರದೇಶ. ದುಷ್ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳಿಗೆ ಇದು ಹೇಳಿ ಮಾಡಿಸಿದ ಸ್ಥಳ. ಅಪರಾಧಿಗಳು ಇಲ್ಲಿಂದ ತಪ್ಪಿಸಿಕೊಳ್ಳುವುದು ತುಂಬಾ ಸುಲಭ ಎಂದು ಸ್ವತಃ ಡಿಜಿಪಿ ಅಭಿನವ್ ಕುಮಾರ್ ಹೇಳಿಕೆ ನೀಡಿದ್ದಾರೆ. ಈ ಅನುಮಾನದ ಹಿನ್ನೆಲೆ ಯುಪಿ ಮತ್ತು ಇತರ ಸ್ಥಳಗಳಿಗೆ ಪೊಲೀಸರ ತಂಡಗಳನ್ನು ಕಳುಹಿಸಿದ್ದಾರೆ. ಹಂತಕರು 8 ದಿನಗಳ ಕಾಲ ಪ್ರಾರ್ಥನಾ ಮಂದಿರ ಸಮೀಪದ ಹೋಟೆಲ್​​ನಲ್ಲಿ ತಂಗಿದ್ದರು ಎಂಬ ಅನುಮಾನ ಕೂಡ ಇದೆ.

ಹೆಚ್ಚಿದ ಅಪರಾಧ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪೊಲೀಸರು ಪ್ರತಿ ಚೆಕ್‌ಪೋಸ್ಟ್‌ಗೆ ಬಂದು ಹೋಗುವವರ ತಪಾಸಣೆ ನಡೆಸಿದ್ದಾರೆ. ಈ ರೀತಿ ಕೊಲೆ ನಡೆದಿರುವುದು ಇದೇ ಮೊದಲನೆಯದ್ದಲ್ಲ. ಇತ್ತೀಚೆಗೂ ಇಂತಹದ್ದೇ ಕೃತ್ಯ ನಡೆದಿತ್ತು. ಕೇವಲ ಮೂರು ತಿಂಗಳಲ್ಲಿ ಹತ್ಯೆಯಾದ ಎರಡನೇ ಕೊಲೆ ಇದಾಗಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿರುವುದರಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಮತ್ತು ವಿಶೇಷವಾಗಿ ಮುಖ್ಯಮಂತ್ರಿಗಳ ತವರು ಪ್ರದೇಶದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಭದ್ರತಾ ವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊಲೆ ಬೆದರಿಕೆ: ಸಾಮಾಜಿಕ ಜಾಲತಾಣದ ಬಳಕೆದಾರನೊಬ್ಬ ಇತ್ತೀಚೆಗೆ ಬಾಬಾ ತಾರ್ಸೆಂ ಸಿಂಗ್ ಬಗ್ಗೆ ಅವಾಚ್ಯ ಶಬ್ದಗಳಿಂದ ಬರೆದು ಫೋಟೋ ಹಂಚಿಕೊಂಡಿದ್ದರು. ನಂತರ ಮತ್ತೊಬ್ಬ ಬಳಕೆದಾರ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೊಲೆ ಬೆದರಿಕೆ ಹಾಕಿದ್ದನು. ಈ ವಿಚಾರದಲ್ಲಿ ಡೇರಾ ಕಾರ್ ಸರ್ವೀಸ್​ನ ಮ್ಯಾನೇಜರ್ ಚರಂಜಿತ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇಬ್ಬರು ಸಂತರ ಹತ್ಯೆ: ಖತೀಮಾದಲ್ಲಿ ಧಾರ್ಮಿಕ ಗುರುಗಳ ಹತ್ಯೆ ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಈ ವರ್ಷದ ಜನವರಿಯಲ್ಲಿ ಬಾಬಾ ಭರ್ಮಲ್ ದೇವಸ್ಥಾನದಲ್ಲಿ ಸಮಾಧಿ ಸ್ಥಳದ ಮುಖ್ಯಸ್ಥ ಮತ್ತು ಸೇವಕನನ್ನು ಬೆಳ್ಳಂಬೆಳಗ್ಗೆ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಈ ಸ್ಥಳಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆಗಾಗ ಭೇಟಿ ಸಹ ನೀಡುತ್ತಿದ್ದರು. ಹತ್ಯೆ ನಡೆಯುವ ಕೆಲ ದಿನಗಳ ಮುನ್ನ ಇಲ್ಲಿ ರಾಮಾಯಣ ಪಾರಾಯಣದಲ್ಲಿ ಅವರು ಪಾಲ್ಗೊಂಡಿದ್ದರು. ಈ ಕೊಲೆ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದರು. ಜನವರಿ 28 ರಂದು ಕಾಳಿಚರಣ್, ರಾಂಪಾಲ್ ಮತ್ತು ಪವನ್ ಸಿಂಗ್ ಎಂಬ ಮೂವರನ್ನು ಬಂಧಿಸಿ ಜೈಲಿಗೆ ಸಹ ಅಟ್ಟಿದ್ದಾರೆ. ಅದಕ್ಕೂ ಮುನ್ನ ಪೊಲೀಸರು, ಸುಮಾರು 1200 ಜನರನ್ನು ವಿಚಾರಣೆ ನಡೆಸಿದ್ದರು. 1000ಕ್ಕೂ ಹೆಚ್ಚು ಅಪರಾಧಿಗಳ ಹೇಳಿಕೆಯನ್ನೂ ದಾಖಲಿಕೊಂಡಿದ್ದರು. 1500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳ ಪರಿಶೀಲಬೆ ಬಳಿಕ ಪೊಲೀಸರು ಈ ಮೂವರು ಅಪರಾಧಿಗಳನ್ನು ಬಂಧಿಸಿದ್ದಾರೆ. ಈ ಘಟನೆ ಬೆನ್ನಲ್ಲೆ ಇದೀಗ ಇವರ ಕೊಲೆ ನಡೆದಿದೆ.

ಬೇಗ ಬಂಧಿಸುವಂತೆ ಸೂಚನೆ: ಬಾಬಾ ತಾರ್ಸೆಮ್ ಸಿಂಗ್ ಅವರ ಹತ್ಯೆ ಗಂಭೀರವಾದದ್ದು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ ಡಿಜಿಪಿಗೆ ಸೂಚಿಸಿದ್ದಾರೆ. ಈ ಘಟನೆಯ ತನಿಖೆಗೆ ಎಸ್‌ಐಟಿ ರಚಿಸಲಾಗಿದ್ದು, ಸಮಾಜ ಮತ್ತು ಮಾನವೀಯತೆಯ ಶತ್ರುಗಳಾದ ಈ ಹಂತಕರನ್ನು ಆದಷ್ಟು ಬೇಗ ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ದಾಳಿಕೋರರನ್ನು ಗುರುತಿಸಲಾಗಿದೆ. ಅವರ ಚಟುವಟಿಕೆ ಮತ್ತು ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಎಸ್‌ಟಿಎಫ್ ತಂಡ ಅಲ್ಲಿಗೆ ತಲುಪಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ. ಈ ಸಂಬಂಧ ನಾವು ನೆರೆಯ ರಾಜ್ಯಗಳ ಪೊಲೀಸ್ ಪಡೆಗಳನ್ನು ಸಹ ಸಂಪರ್ಕಿಸಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಛತ್ತೀಸ್‌ಗಢದಲ್ಲಿ 6 ನಕ್ಸಲರ ಹತ್ಯೆ - Naxalites killed

Last Updated : Mar 30, 2024, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.