ETV Bharat / bharat

ಕೃಷ್ಣನಗರ ಕ್ಷೇತ್ರದಲ್ಲಿ ರಾಜಾ ಕೃಷ್ಣಚಂದ್ರ ರೇ ವಂಶಸ್ಥೆ ಅಮೃತಾ ರೇ ಕಣಕ್ಕಿಳಿಸಿದ ಬಿಜೆಪಿ: ಮುನ್ನೆಲೆಗೆ ಬಂದ ಮೀರ್ ಜಾಫರ್ ಚರ್ಚೆ - Amrita Ray

ಬಂಗಾಳದ ಮೊದಲ ಅವಲಂಬಿತ ನವಾಬರಾಗಿ ಆಳ್ವಿಕೆ ನಡೆಸಿದ ಮೀರ್ ಜಾಫರ್ ಅವರು ಈ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಮೀರ್ ಜಾಫರ್ ಅವರ ಸ್ನೇಹಿತರಾಗಿದ್ದ ರಾಜಾ ಕೃಷ್ಣಚಂದ್ರ ರೇ ವಂಶಸ್ಥರಾದ ಅಮೃತಾ ರೇ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

BENGAL  KRISHNANAGAR LOK SABHA CONSTITUENCY  MIR JAFAR  TRAITOR
ಕೃಷ್ಣನಗರ ಕ್ಷೇತ್ರದಲ್ಲಿ ರಾಜಾ ಕೃಷ್ಣಚಂದ್ರ ರೇ ವಂಶಸ್ಥರಾದ ಅಮೃತಾ ರೇ ಕಣಕ್ಕಿಳಿಸಿದ ಬಿಜೆಪಿ: ಮುನ್ನೆಲೆಗೆ ಬಂದ ಮೀರ್ ಜಾಫರ್ ಚರ್ಚೆ
author img

By ETV Bharat Karnataka Team

Published : Apr 7, 2024, 1:12 PM IST

ಕೃಷ್ಣನಗರ (ಪಶ್ಚಿಮ ಬಂಗಾಳ): ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೀರ್ ಜಾಫರ್ ಇದ್ದಕ್ಕಿದ್ದಂತೆ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೀರ್ ಜಾಫರ್ (1691-1765) ಎಂದು ಕರೆಯಲ್ಪಡುವ ಮೀರ್ ಸೈಯದ್ ಜಾಫರ್ ಅಲಿ ಖಾನ್ ಬಹದ್ದೂರ್ ಅವರು ಕಮಾಂಡರ್-ಇನ್-ಚೀಫ್ ಅಥವಾ ಮಿಲಿಟರಿ ಜನರಲ್ ಆಗಿದ್ದರು. ಅವರು ಬಂಗಾಳದ ಮೊದಲ ನವಾಬರಾಗಿ ಆಳ್ವಿಕೆ ನಡೆಸಿದ್ದರು. ಅವರು ಬಂಗಾಳದ ಕೊನೆಯ ಸ್ವತಂತ್ರ ನವಾಬರಾದ ಸಿರಾಜ್-ಉದ್-ದೌಲಾ ಅವರ ನೇತೃತ್ವದಲ್ಲಿ ಬಂಗಾಳಿ ಸೈನ್ಯದ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಆದರೆ, ಪ್ಲಾಸಿ ಕದನದ ಸಮಯದಲ್ಲಿ ಅವರಿಗೆ ದ್ರೋಹ ಮಾಡಿದರು. ಮತ್ತು 1757ರಲ್ಲಿ ಬ್ರಿಟಿಷ್ ವಿಜಯದ ನಂತರ ಸಿಂಹಾಸನಕ್ಕೆ ಏರಿದರು.

ಲಾರ್ಡ್ ರಾಬರ್ಟ್​ ಕ್ಲೈವ್ ಅವರ ನಿಕಟ ವಿಶ್ವಾಸಿಯಾಗಿದ್ದ ಮೀರ್ ಜಾಫರ್ ಅವರು 1760ರ ವರೆಗೆ ಈಸ್ಟ್ ಇಂಡಿಯಾ ಕಂಪನಿಯಿಂದ ಮಿಲಿಟರಿ ಬೆಂಬಲವನ್ನು ಪಡೆದರು. ಮತ್ತು ರಾಜಾ ಕೃಷ್ಣಚಂದ್ರ ರೇ, ಮೀರ್ ಜಾಫರ್ ಅವರ ಸ್ನೇಹಿತರಾಗಿದ್ದರು.

ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ರಾಜಾ ಕೃಷ್ಣಚಂದ್ರ ರೇ ವಂಶಸ್ಥರಾದ ಅಮೃತಾ ರೇ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್‌ಗಳು ಶುರುವಾಗಿವೆ. ರಾಜಾ ಕೃಷ್ಣಚಂದ್ರ ರೇ ಇತಿಹಾಸವನ್ನು ಉಲ್ಲೇಖಿಸಿ ಬಿಜೆಪಿ ಅಭ್ಯರ್ಥಿಯನ್ನು ಹೀಯಾಳಿಸಲಾಗುತ್ತಿದೆ. ಇತಿಹಾಸವನ್ನು ಕೆದಕಿದರೆ, ಜಗದೀಶ್ ಶೇಠ್, ಮೀರ್ ಜಾಫರ್ ಮತ್ತು ಇತರರೊಂದಿಗೆ ಸಿರಾಜ್-ಉದ್-ದೌಲಾ ವಿರುದ್ಧ ಸಂಚು ರೂಪಿಸಿದ ಮತ್ತು ರಾಬರ್ಟ್ ಕ್ಲೈವ್ ಜೊತೆ ಸಂಚು ರೂಪಿಸಿದ ಗುಂಪಿನ ಭಾಗವಾಗಿ ಕೃಷ್ಣಚಂದ್ರ ರೇ ಇದ್ದುದನ್ನು ಕಾಣಬಹುದು. ಈ ಮೈತ್ರಿಯ ಪರಿಣಾಮವಾಗಿ, ಸಿರಾಜ್-ಉದ್-ದೌಲಾ ಪ್ಲಾಸಿ ಕದನದಲ್ಲಿ ಸೋತರು. ಕೃಷ್ಣಚಂದ್ರ ಅವರು ಬ್ರಿಟಿಷರೊಂದಿಗೆ ಮತ್ತು ವಿಶೇಷವಾಗಿ ರಾಬರ್ಟ್ ಕ್ಲೈವ್ ಅವರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರು ಎಂದು ತಿಳಿದಿದೆ.

1760ರ ದಶಕದಲ್ಲಿ ಬಂಗಾಳದ ನವಾಬ್ ಮೀರ್ ಖಾಸಿಮ್ ಕೃಷ್ಣಚಂದ್ರ ರೇ ಅವರನ್ನು ಗಲ್ಲಿಗೇರಿಸಲು ಆದೇಶಿಸಿದಾಗ ಈ ಉತ್ತಮ ಸಂಬಂಧವು ಉಪಯುಕ್ತವಾಯಿತು. ಮರಣದಂಡನೆಯನ್ನು ರದ್ದುಗೊಳಿಸುವುದರ ಜೊತೆಗೆ, ಕ್ಲೈವ್ ಐದು ಫಿರಂಗಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಮತ್ತು ಕೃಷ್ಣಚಂದ್ರನನ್ನು ಕೃಷ್ಣನಗರ ಪ್ರದೇಶದ ಜಮೀನುದಾರನನ್ನಾಗಿ ಮಾಡಿದರು. ಅವರಿಗೆ ಮಹಾರಾಜ ಎಂಬ ಬಿರುದು ಕೂಡ ನೀಡಲಾಯಿತು.

ಮಹುವಾ ಮೊಯಿತ್ರಾ ವಿರುದ್ಧ ಕಣಕ್ಕೆ: ರಾಜಾ ಕೃಷ್ಣಚಂದ್ರರ ವಂಶಸ್ಥರಾದ ಮಹಾರಾಣಿ ಅಮೃತಾ ರೇ ಅವರನ್ನು ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ ರಾಜಾ ಕೃಷ್ಣಚಂದ್ರ ಮತ್ತು ಮೀರ್ ಜಾಫರ್ ನಡುವಿನ ಈ ಮೈತ್ರಿ ಕುರಿತು ನೆಟ್ಟಿಗರು ಕಿಡಿಕಾರಿದ್ದಾರೆ. ಅಮೃತಾ ರೇ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ವಿರುದ್ಧ ಕಣಕ್ಕಿಳಿದಿದ್ದಾರೆ.

"ರಾಜಾ ಕೃಷ್ಣಚಂದ್ರ ರೇ ಅವರು ಬಂಗಾಳವನ್ನು ಮೀರ್ ಜಾಫರ್‌ನಂತೆ ಮಾರಾಟ ಮಾಡಲು ಬಯಸಿದ್ದರು" ಎಂಬಂತಹ ಕಾಮೆಂಟ್‌ಗಳಿಂದ ಸಾಮಾಜಿಕ ಜಾಲತಾಣದಲ್ಲಿ ತುಂಬಿವೆ. "ರಾಜಾ ಕೃಷ್ಣಚಂದ್ರ ರೇ ತನ್ನ ವಿರೋಧಿಗಳೊಂದಿಗೆ ರಹಸ್ಯ ಸಂಬಂಧವನ್ನು ಹೊಂದಿದ್ದನು" ಎಂದು ಮತ್ತೊಬ್ಬ ನೆಟ್ಟಿಗ ಬರೆದಿದ್ದಾರೆ.

ಆದರೆ, ಮೀರ್ ಜಾಫರ್ ವಂಶಸ್ಥರು ಎಲ್ಲಾ ವಿವಾದಗಳನ್ನು ಸರಳವಾಗಿ ತಳ್ಳಿಹಾಕುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನೆಲೆಸಿರುವ ಚೋಟೆ ನವಾಬ್ ಎಂದೂ ಕರೆಯಲ್ಪಡುವ ರೆಜಾ ಅಲಿ ಮಿರ್ಜಾ ಈಟಿವಿ ಭಾರತದ ಜೊತೆಗೆ ಮಾತನಾಡಿ, ''ಮೀರ್ ಜಾಫರ್ ಮತ್ತೆ ಚರ್ಚೆಗೆ ಬಂದಿದ್ದಾರೆ ಮತ್ತು ನನಗೆ ಖಂಡಿತವಾಗಿಯೂ ಸಂತೋಷವಾಗಿದೆ. ಆದರೆ, ಇದು ಲೋಕಸಭೆ ಚುನಾವಣೆಯ ಬಗ್ಗೆ ಮಾತ್ರವಲ್ಲ. ಮೀರ್ ಜಾಫರ್ ಯಾವಾಗಲೂ ಪ್ರಸ್ತುತವಾಗಿದೆ. ಬಂಗಾಳ, ಬಿಹಾರ ಮತ್ತು ಒಡಿಶಾದ ಸ್ವಾತಂತ್ರ್ಯಕ್ಕಾಗಿ ಅವರು ತಮ್ಮ ಜೀವನವನ್ನು ತ್ಯಾಗ ಮಾಡಿದರು. ಅವನನ್ನು ದೇಶದ್ರೋಹಿ ಎಂದು ಪರಿಗಣಿಸಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿದರು.

ಅಮೃತಾ ರೇ ಪ್ರತಿಕ್ರಿಯೆ: ಅಮೃತಾ ರೇ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾತಾಡನಾಡಿದ್ದಾರೆ. "ವಿರೋಧಿಗಳು ಹೆಚ್ಚು ವ್ಯಂಗ್ಯವಾಡಿದರೆ, ನನ್ನ ವೋಟ್ ಬ್ಯಾಂಕ್ ಹೆಚ್ಚಾಗುತ್ತದೆ. 200 ವರ್ಷಗಳ ಹಿಂದೆ ಅವರು ಇರಲಿಲ್ಲ. ನಾವು ಇರಲಿಲ್ಲ. ಆದ್ದರಿಂದ ಈ ಮಾತುಗಳನ್ನು ಹೇಳುವುದರಿಂದ ಏನು ಪ್ರಯೋಜನ? ಈಗ ಏನಾಗುತ್ತಿದೆ ಎಂದು ನೋಡಬೇಕು. ನಾವು ಮತದಾತರರನ್ನು ಮನವೊಲಿಸುವ ರೀತಿಯಲ್ಲಿ ಗೆಲ್ಲುತ್ತೇವೆ'' ಎಂದು ಅಮೃತಾ ರೇ ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಕೃಷ್ಣನಗರ ಚುನಾವಣಾ ಅಖಾಡವು ರಂಗೇರಿದೆ. ದಲಿತ ಸಮುದಾಯದ ಹೆಚ್ಚು ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಮಹುವಾ ಮೊಯಿತ್ರಾ ಮತ್ತು ಅಮೃತಾ ರೇ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತನ್ನನ್ನು ತಾನೇ ಶ್ರೇಷ್ಠ ಎಂದು ಬಿಂಬಿಸಿಕೊಳ್ಳುವ ಮೋದಿ ದೇಶದ ಘನತೆ, ಪ್ರಜಾಪ್ರಭುತ್ವ ಹಾಳು ಮಾಡುತ್ತಿದ್ದಾರೆ: ಸೋನಿಯಾ ಗಾಂಧಿ - Sonia Gandhi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.