ETV Bharat / bharat

ಪುಣೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ: ಮನೆಗಳಿಗೆ ಹಾನಿ - gas tanker explosion

ಬೆಂಕಿ ತಗುಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಘಟನೆ ಪುಣೆಯಲ್ಲಿ ನಡೆದಿದೆ. ಈ ಘಟನೆಯಿಂದ ಮನೆಗಳಿಗೆ ಹಾನಿಯಾಗಿದೆ.

Pune  gas tanker explosion  Maharashtra  Chakan Police
ಪುಣೆಯಲ್ಲಿ ಗ್ಯಾಸ್ ಕಳ್ಳತನದ ವೇಳೆ ಬೆಂಕಿ ತಗುಲಿ ಗ್ಯಾಸ್ ಟ್ಯಾಂಕರ್ ಸ್ಫೋಟ (ETV Bharat)
author img

By ETV Bharat Karnataka Team

Published : May 19, 2024, 1:02 PM IST

ಪುಣೆ (ಮಹಾರಾಷ್ಟ್ರ): ಪುಣೆಯ ಚಕಣ್​-ಶಿಕ್ರಾಪುರ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್​ನಿಂದ ಭೀಕರ ಸ್ಫೋಟ ಸಂಭವಿಸಿದೆ. ಕಿಡಿಗೇಡಿಗಳು ಕಳ್ಳತನ ಮಾಡುತ್ತಿರುವಾಗಲೇ ಒಂದರ ಹಿಂದೆ ಒಂದರಂತೆ ಮೂರ್ನಾಲ್ಕು ಸ್ಫೋಟಗಳು ಸಂಭವಿಸಿವೆ. ಈ ಘಟನೆ ಇಂದು (ಭಾನುವಾರ) ಬೆಳಗ್ಗೆ 5 ಗಂಟೆ ಸುಮಾರಿಗೆ ಶೆಲ್ ಪಿಂಪಲಗಾಂವ್​ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ಸಿಕ್ಕಿರುವ ಮಾಹಿತಿಯ ಪ್ರಕಾರ, ಚಕಣ್​-ಶಿಕ್ರಾಪುರ ರಸ್ತೆಯಲ್ಲಿರುವ ಮೋಹಿತೆವಾಡಿ ಪ್ರದೇಶದಲ್ಲಿ ಧಾಬಾ (ಹೋಟೆಲ್) ಇದೆ. ಈ ಧಾಬಾ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಭಾನುವಾರ ಮುಂಜಾನೆ ಈ ಧಾಬಾದ ಮುಂದೆ ಗ್ಯಾಸ್ ಟ್ಯಾಂಕರ್ ನಿಂತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ದಟ್ಟವಾದ ಬೆಂಕಿ ಆವರಿಸಿತು. ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ.

ಈ ಸ್ಫೋಟದಿಂದ ಉಂಟಾದ ಕಂಪನದಿಂದ ಸುಮಾರು ಒಂದು ಕಿ.ಮೀ.ವರೆಗೆ ಸದ್ದು ಕೇಳಿ ಬಂದಿದೆ. ಗ್ಯಾಸ್ ಟ್ಯಾಂಕರ್​ ಸ್ಫೋಟಗೊಂಡ ಪರಿಣಾಮ ಹೆದ್ದಾರಿ ಪಕ್ಕದ ಹಲವು ಮನೆಗಳ ಗಾಜುಗಳು ಒಡೆದಿದ್ದರೆ, ಕೆಲವು ಮನೆಗಳು ಕುಸಿದಿವೆ. ಆದರೆ, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಸ್ಫೋಟದಿಂದ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದೆ. ಆದರೆ, ಶೆಲ್ ಪಿಂಪಲಗಾಂವ್​ನಲ್ಲಿ ಗ್ರಾಮಸ್ಥರ ಜೀವನದ ಜೊತೆ ಚೆಲ್ಲಾಟವಾಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಚಕಣ್​ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Watch.. ತಮಿಳುನಾಡಿನಲ್ಲಿ ಹಠಾತ್ ಉಕ್ಕಿ ಹರಿದ ಜಲಪಾತ; ಒಬ್ಬ ಯುವಕ ಸಾವು, ಪ್ರವಾಸಿಗರಿಗೆ ನಿರ್ಬಂಧ - Tamil Nadu Waterfalls flood

ETV Bharat Logo

Copyright © 2024 Ushodaya Enterprises Pvt. Ltd., All Rights Reserved.