ಮೀರತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೀರತ್ನಲ್ಲಿ ರಸ್ತೆಯಲ್ಲಿ ಯುವತಿಯೊಬ್ಬಳ ಧೈರ್ಯ ಕಂಡು ನೆರೆದಿದ್ದ ಜನರು ಬೆರಗಾಗಿದ್ದಾರೆ. ಒಬ್ಬ ಯುವಕ ನಿರಂತರವಾಗಿ ಹುಡುಗಿಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ಯುವತಿಯೊಬ್ಬಳು ತುಂಬಾ ನೊಂದಿದ್ದಳು. ತನಗೆ ನೀಡಿದ ಕಿರುಕುಳಕ್ಕೆ ತಕ್ಕ ಉತ್ತರ ನೀಡಿದ ನೊಂದ ಯುವತಿಯು, ಆ ವ್ಯಕ್ತಿಗೆ ಬಹಿರಂಗವಾಗಿ ಕಪಾಳಮೋಕ್ಷ ಮಾಡಿದ್ದಾಳೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೀರತ್‌ನ ಥಾಪರ್ ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ವ್ಯಕ್ತಿಯು ಯುವತಿಯನ್ನು ಹಿಂಬಾಲಿಸುತ್ತಿದ್ದನು. ಜೊತೆಗೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನು ಎಂದು ಯುವತಿ ಕುಟುಂಬದ ಸದಸ್ಯರು ಹೇಳುತ್ತಾರೆ.
ಮೀರತ್‌ನ ಥಾಪರ್ ನಗರ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಯುವಕನಿಗೆ ಥಳಿಸಿದ್ದಾರೆ. ಹಲವು ದಿನಗಳಿಂದ ಯುವತಿಗೆ ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳದ ಆರೋಪದ ಹಿನ್ನೆಲೆ ಯುವತಿಯು, ಆರೋಪಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಈ ಸಮಯದಲ್ಲಿ, ಕೆಲವರು ಪೊಲೀಸರನ್ನು ಕರೆಯುವ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಇದನ್ನು ಕೇಳಿದ ಆರೋಪಿ ಕ್ಷಮೆ ಯಾಚಿಸಿ ಓಡಲು ಪ್ರಯತ್ನಿಸುತ್ತಾನೆ. ಆಗ ಯುವತಿ ಆರೋಪಿಯನ್ನು ಹಿಡಿಯುವಂತೆ ಕೂಗುತ್ತಾಳೆ. ಇಲ್ಲದಿದ್ದರೆ, ಆರೋಪಿ ಓಡಿ ಹೋಗುತ್ತಿದ್ದನು. ಇದೇ ವೇಳೆ, ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸ್ಥಳದಲ್ಲಿದ್ದವರು ಯುವತಿಗೆ ಹೇಳಿದರು. ಆದರೆ, ಅವಳು ನಿರಾಕರಿಸಿ ಅಲ್ಲಿಂದ ಹೊರಟು ಹೋದಳು.
ಈ ಘಟನೆ ಬಗ್ಗೆ ಯಾವುದೇ ಲಿಖಿತ ದೂರು ಬಂದಿಲ್ಲ. ವಿಡಿಯೋವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಠಾಣೆ ಸದರ್ ಬಜಾರ್ ಶಶಾಂಕ್ ದ್ವಿವೇದಿ ಹೇಳಿದ್ದಾರೆ.
ಇದನ್ನೂ ಓದಿ: ಎಸ್‌ಟಿ ಬಸ್ - ಟ್ರಕ್ ಮಧ್ಯೆ ಭೀಕರ ಅಪಘಾತ; 8 ಪ್ರಯಾಣಿಕರು ಸ್ಥಳದಲ್ಲೇ ಸಾವು, 22 ಮಂದಿಗೆ ಗಾಯ - ROAD ACCIDENT