ETV Bharat / bharat

ಬಾಬಾ ಸಿದ್ಧನಾಥ ದೇವಸ್ಥಾನದಲ್ಲಿ ಕಾಲ್ತುಳಿತ: 7 ಭಕ್ತರ ಸಾವು, 9 ಮಂದಿಗೆ ಗಾಯ - 7 Died In Stampede In Jehanabad - 7 DIED IN STAMPEDE IN JEHANABAD

7 Died In Stampede In Jehanabad: ಬಿಹಾರದ ಜೆಹಾನಾಬಾದ್‌ನಲ್ಲಿ ಭಾರೀ ಅಪಘಾತ ಸಂಭವಿಸಿದೆ. ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ.

7 DIED IN STAMPEDE IN JEHANABAD  SAWAN FOURTH SOMWAR 2024  Bihar  Baba Siddhanath Temple
ಬಿಹಾರದ ಬಾಬಾ ಸಿದ್ಧನಾಥ ದೇವಸ್ಥಾನದಲ್ಲಿ ಕಾಲ್ತುಳಿತ (ETV Bharat)
author img

By ETV Bharat Karnataka Team

Published : Aug 12, 2024, 9:30 AM IST

ಜೆಹಾನಾಬಾದ್ (ಬಿಹಾರ): ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಜಲಾಭಿಷೇಕಕ್ಕಾಗಿ ಹಲವಾರು ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಶಿವಭಕ್ತರು ದೇವಾಲಯಕ್ಕೆ ಬಂದಿದ್ದ ಸಮಯದಲ್ಲಿ ನೂಕುನುಗ್ಗಲು ಉಂಟಾಗಿದೆ. ಮೃತಪಟ್ಟವರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ. ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು. ವನವರ ಬೆಟ್ಟದಲ್ಲಿರುವ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಜಲಾಭಿಷೇಕಕ್ಕೆ ಅನೇಕ ಜನರು ಸೇರಿದ್ದರು. ರಾತ್ರಿ 12 ಗಂಟೆಯ ನಂತರ ಕಾಲ್ತುಳಿತದ ಘಟನೆ ನಡೆದಿದೆ ಎನ್ನಲಾಗಿದೆ.

ಮೃತರನ್ನು ಗಯಾ ಜಿಲ್ಲೆಯ ಮೋರ್ ಟೇಕ್ರಿ ನಿವಾಸಿ ಪೂನಂ ದೇವಿ, ಮಖ್ದುಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಡೋವಾ ಗ್ರಾಮದ ನಿಶಾ ಕುಮಾರಿ, ಜಲ್ ಬಿಘಾ ನಡೋಲ್​ನ ಸುಶೀಲಾ ದೇವಿ ಮತ್ತು ನಗರದ ಎರ್ಕಿ ಗ್ರಾಮದ ನಿಶಾ ದೇವಿ ಎಂದು ಗುರುತಿಸಲಾಗಿದೆ. ರಾಜು ಕುಮಾರ್ ಮತ್ತು ಪ್ಯಾರೆ ಪಾಸ್ವಾನ್ ಸೇರಿದ್ದಾರೆ. ಆದರೆ, ಓರ್ವ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಆ ಮಹಿಳೆಯ ಗುರುತು ಪತ್ತೆ ಮಾಡಲು ನಿರತರಾಗಿದ್ದಾರೆ.

''ಎಲ್ಲರೂ ಜಲಾಭಿಷೇಕಕ್ಕಾಗಿ ವನವಾರಕ್ಕೆ ತೆರಳಿದ್ದರು. ಜನರು ಬೆಟ್ಟವನ್ನು ಹತ್ತುತ್ತಿದ್ದರು ಮತ್ತು ಕೆಲವರು ಇಳಿಯುತ್ತಿದ್ದರು, ಈ ವೇಳೆ ನೂಕುನುಗ್ಗಲು ಉಂಟಾಯಿತು. ಇಲ್ಲಿ ಪೊಲೀಸ್ ಆಡಳಿತದಿಂದ ಯಾವುದೇ ವ್ಯವಸ್ಥೆ ಇರಲಿಲ್ಲ. ನೂಕುನುಗ್ಗಲು ತಡೆಯುವ ಬದಲು ಪೊಲೀಸರು ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಈ ವೇಳೆ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿಕರು ಹೇಳಿದರು.

ಸೋಮವಾರದ ಕಾರಣ ಅಪಾರ ಭಕ್ತಾದಿಗಳು ನೆರೆದಿದ್ದರು. ಬಾಬಾ ಸಿದ್ಧೇಶ್ವರನಾಥ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ತಲಾಲ ಗಂಗಾ ಮತ್ತು ಗೌಘಾಟ್ ಮೂಲಕ ಪರ್ವತವನ್ನು ತಲುಪಿದರು. ಇದರಿಂದ ದೇವಸ್ಥಾನದ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಮಹಿಳೆಯರು ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ವೇಳೆ 35-50 ಜನರ ಸಾವಿನ ಭೀತಿಯನ್ನು ಸ್ಥಳೀಯ ಕೃಷ್ಣಕುಮಾರ್ ವ್ಯಕ್ತಪಡಿಸಿದ್ದು, ''ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ. ಒಂದೇ ಆಂಬುಲೆನ್ಸ್‌ನಲ್ಲಿ ನಾಲ್ಕು ಮೃತದೇಹಗಳನ್ನು ತರಲಾಗುತ್ತಿದೆ. ಅಪರಿಚಿತ ಮೃತದೇಹಗಳನ್ನು ಮರೆಮಾಚುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ವಾಹನವೊಂದರಲ್ಲಿ 12 ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ. ಈ ಘಟನೆಗೆ ಪೊಲೀಸ್ ಆಡಳಿತವೇ ಹೊಣೆ'' ಎಂದು ಆರೋಪಿಸಿದರು.

ಜೆಹಾನಾಬಾದ್ ಡಿಸಿ ಹೇಳಿದ್ದೇನು?: ಜೆಹಾನಾಬಾದ್ ಜಿಲ್ಲಾಧಿಕಾರಿ ಅಲಂಕೃತಾ ಪಾಂಡೆ ಮಾತನಾಡಿ, ''ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರದ ಬಾಬಾ ಸಿದ್ಧನಾಥ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ 7 ಜನರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. ನಾವು ಎಲ್ಲದರ ಮೇಲೆ ನಿಗಾ ಇಟ್ಟಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ'' ಎಂದು ಹೇಳಿದರು.

"ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ನಾವು ಮೃತರ ಮತ್ತು ಗಾಯಗೊಂಡವರ ಕುಟುಂಬಗಳನ್ನು ಭೇಟಿ ಮಾಡಿ ವಿಚಾರಿಸುತ್ತಿದ್ದೇವೆ. ಮೃತರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ನಂತರ ನಾವು ಶವಗಳನ್ನು ಹೊರತೆಗೆಯಲಾಗಿದೆ. ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ'' ಎಂದು ಜೆಹನಾಬಾದ್ ಎಸ್‌ಎಚ್‌ಒ ದಿವಾಕರ್ ಕುಮಾರ್ ವಿಶ್ವಕರ್ಮ ತಿಳಿಸಿದರು.

ಇದನ್ನೂ ಓದಿ: ಕುಸಿದ ನದಿ ದಡ; ಐವರು ಸ್ನೇಹಿತರು ನೀರುಪಾಲು - YOUTHS DIED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.