ETV Bharat / bharat

ಹಿಂಸಾಚಾರ ಪೀಡಿತ ಬಾಂಗ್ಲಾದೇಶಿಯರಿಗೆ ಆಶ್ರಯ ನೀಡುವೆನೆಂದ ಸಿಎಂ ಮಮತಾ: ಬಿಜೆಪಿ ಕಿಡಿ - shelter to Bangladesh people

ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ನಾಗರಿಕರಿಗೆ ಆಶ್ರಯ ನೀಡಲು ಸಿದ್ಧ ಎಂಬ ಮಮತಾ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ (IANS)
author img

By ETV Bharat Karnataka Team

Published : Jul 21, 2024, 7:42 PM IST

ನವದೆಹಲಿ: ಹಿಂಸಾಚಾರದಿಂದ ತತ್ತರಿಸಿರುವ ಬಾಂಗ್ಲಾದೇಶದಲ್ಲಿ ತೊಂದರೆಗೀಡಾದವರಿಗೆ ಭಾರತದಲ್ಲಿ ಆಶ್ರಯ ನೀಡಲು ಸಿದ್ಧ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಲುವಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಮತಾರ ಹೇಳಿಕೆಯು ಜಾರ್ಖಂಡ್​ನಲ್ಲಿ ನಡೆಯಲಿರುವ ಚುನಾವಣೆಗಳನ್ನು ಗೆಲ್ಲಲು ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರಿಗೆ ಆ ರಾಜ್ಯದಲ್ಲಿ ಆಶ್ರಯ ನೀಡುವ ಐಎನ್​ಡಿಐಎ ಮೈತ್ರಿಕೂಟದ ದುಷ್ಟ ಸಂಚಿನ ಭಾಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳವೀಯ, ಇತರ ದೇಶದಿಂದ ಬರುವ ಯಾರಿಗಾದರೂ ಆಶ್ರಯ ನೀಡುವ ಅಧಿಕಾರ ಸಿಎಂ ಮಮತಾ ಅವರಿಗೆಲ್ಲಿದೆ ಎಂದು ಪ್ರಶ್ನಿಸಿದ ಅವರು, ವಲಸೆ ಮತ್ತು ಪೌರತ್ವವು ಸಂಪೂರ್ಣವಾಗಿ ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿದೆ ಮತ್ತು ಅಂತಹ ವಿಷಯಗಳಲ್ಲಿ ರಾಜ್ಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ, ನೆರೆಯ ದೇಶದ ಸಂಕಷ್ಟದಲ್ಲಿರುವ ಜನರಿಗೆ ತನ್ನ ರಾಜ್ಯದ ಬಾಗಿಲುಗಳನ್ನು ತೆರೆದಿಡುತ್ತೇನೆ ಮತ್ತು ಅವರಿಗೆ ಆಶ್ರಯ ನೀಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೋಲ್ಕತ್ತಾ ರ್ಯಾಲಿಯಲ್ಲಿ ಹೇಳಿದ್ದರು. ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಉಂಟಾಗಿರುವ ತೀವ್ರ ಹಿಂಸಾಚಾರದಿಂದ ಉದ್ಭವಿಸಬಹುದಾದ ಮಾನವೀಯ ಬಿಕ್ಕಟ್ಟಿನ ಬಗ್ಗೆ ತನ್ನ ನಿಲುವಿಗೆ ಸಮರ್ಥನೆಯಾಗಿ ನಿರಾಶ್ರಿತರ ಕುರಿತ ವಿಶ್ವಸಂಸ್ಥೆಯ ನಿರ್ಣಯವನ್ನು ಬ್ಯಾನರ್ಜಿ ಉಲ್ಲೇಖಿಸಿದರು.

ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಳವೀಯ, "ಭಾರತದಲ್ಲಿ ಯಾರಿಗಾದರೂ ಆಶ್ರಯ ನೀಡುವ ಅಧಿಕಾರವನ್ನು ಮಮತಾ ಬ್ಯಾನರ್ಜಿಗೆ ಯಾರು ನೀಡಿದರು? ವಲಸೆ ಮತ್ತು ಪೌರತ್ವವು ಪ್ರತ್ಯೇಕವಾಗಿ ಕೇಂದ್ರದ ವ್ಯಾಪ್ತಿಯಲ್ಲಿದೆ. ಅದರಲ್ಲಿ ರಾಜ್ಯಗಳಿಗೆ ಯಾವುದೇ ಅಧಿಕಾರವಿಲ್ಲ. ಇದು ಚುನಾವಣೆಯಲ್ಲಿ ಗೆಲ್ಲಲು ಅಕ್ರಮವಾಗಿ ಬಾಂಗ್ಲಾದೇಶಿಯರನ್ನು ಬಂಗಾಳದಿಂದ ಜಾರ್ಖಂಡ್​ಗೆ ಸ್ಥಳಾಂತರಿಸುವ ಐಎನ್​ಡಿಐಎ ಮೈತ್ರಿಕೂಟದ ದುಷ್ಟ ಯೋಜನೆಯ ಭಾಗವಾಗಿದೆ." ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಮತ್ತು ಅವರ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳುತ್ತಾರೆ. ಆದರೆ ಟಿಎಂಸಿಗೆ ಮತ ಚಲಾಯಿಸುವ ಅಕ್ರಮ ರೋಹಿಂಗ್ಯಾಗಳಿಗೆ ರೈಲುಗಳನ್ನು ಸುಡಲು, ರಸ್ತೆಗಳನ್ನು ಬಂದ್​ ಮಾಡಲು ಮತ್ತು ಜನರನ್ನು ಕೊಲ್ಲಲು ಅವರು ಕುಮ್ಮಕ್ಕು ನೀಡುತ್ತಾರೆ ಎಂದು ಮಾಳವೀಯ ಆರೋಪಿಸಿದರು.

ಇದನ್ನೂ ಓದಿ : ರೀಲ್ಸ್​ ಹುಚ್ಚು: ನೇಣು ಕುಣಿಕೆ ಬಿಗಿಯಾಗಿ ಬಾಲಕ, ಬೈಕ್​​ ಸ್ಟಂಟ್​ನಲ್ಲಿ ಯುವಕ ಸಾವು - Reels Craze

ETV Bharat Logo

Copyright © 2024 Ushodaya Enterprises Pvt. Ltd., All Rights Reserved.