ETV Bharat / bharat

ಕ್ಷಮಿಸಿ; ಟಿಎಂಸಿಪಿ ಸಂಸ್ಥಾಪನ ದಿನವನ್ನು ಅತ್ಯಾಚಾರ - ಕೊಲೆಗೀಡಾದ ಕಿರಿಯ ವೈದ್ಯಗೆ ಅರ್ಪಿಸಿದ ಸಿಎಂ ಮಮತಾ ಬ್ಯಾನರ್ಜಿ - Trinamool Congressstudent wing TMCP - TRINAMOOL CONGRESSSTUDENT WING TMCP

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಛತ್ರ ಪರಿಷತ್​ ಸಂಸ್ಥಾಪನಾ ದಿನವನ್ನು ನಮ್ಮ ಸಹೋದರಿಗೆ ಅರ್ಪಿಸಲು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Mamata Banerjee dedicated the foundation day oto the memory of the woman trainee doctor
ಸಿಎಂ ಮಮತಾ ಬ್ಯಾನರ್ಜಿ (ಐಎಎನ್​ಎಸ್​)
author img

By IANS

Published : Aug 28, 2024, 10:52 AM IST

ಕೋಲ್ಕತ್ತಾ, ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್​ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಟಿಎಂಸಿಪಿಯ ಸಂಸ್ಥಾಪನಾ ದಿನವನ್ನು ಆರ್​ಜಿ ಕಾರ್​ ವೈದ್ಯಕೀಯ ಕಾಲೇಜ್​ ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಕಿರಿಯ ವೈದ್ಯಕೀಯ ವೈದ್ಯೆಗೆ ಸಿಎಂ ಮಮತಾ ಬ್ಯಾನರ್ಜಿ ಅರ್ಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಛತ್ರ ಪರಿಷತ್​ ಸಂಸ್ಥಾಪನ ದಿನವನ್ನು ನಮ್ಮ ಸಹೋದರಿಗೆ ಅರ್ಪಿಸಲು ನಾನು ನಿರ್ಧರಿಸಿದ್ದೇನೆ. ಆರ್​ಜಿ ಕರ್​ ಆಸ್ಪತ್ರೆಯಲ್ಲಿ ಘಟನೆ ವಿಷಾದನೀಯ. ಕ್ರೂರವಾಗಿ ಹಿಂಸೆಗೆ ಒಳಗಾಗಿ ಸಾವನ್ನಪ್ಪಿದ ಸಹೋದರಿ ಹಾಗೂ ಈ ರೀತಿ ಅಮಾನವೀಯ ಕ್ರೌರ್ಯಕ್ಕೆ ಒಳಗಾದ ಎಲ್ಲ ಮಹಿಳೆಯರಿಗೆ ನನ್ನ ಸಂತಾಪಗಳಿವೆ. ಕ್ಷಮಿಸಿ ಎಂದು ಬರೆದಿದ್ದಾರೆ.

ವಿದ್ಯಾರ್ಥಿಗಳು ಸಮಾಜದಲ್ಲಿ ಅತಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಸಮಾಜ ಮತ್ತು ಸಂಸ್ಕೃತಿಯನ್ನು ಜಾಗೃತಿಗೊಳಿಸುವಲ್ಲಿ ಸಂಸ್ಕೃತಿ ಪ್ರೇರೇಪಿಸುವುದು ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯವಾಗಿದೆ. ಅವರಿಗೆ ಇಂದು ನಾನು ಮಾಡುತ್ತಿರುವ ಮನವಿ ಎಂದರೆ, ಪ್ರಯತ್ನಗಳನ್ನು ಪ್ರೋತ್ಸಾಹಿಸಿ, ಉತ್ತಮ ಆರೋಗ್ಯವನ್ನು ಹೊಂದಿ ಮತ್ತು ಭವಿಷ್ಯದ ಬಗ್ಗೆ ಬದ್ಧತೆ ಇಟ್ಟುಕೊಳ್ಳಿ ಎಂಬುದಾಗಿದೆ ಎಂದು ಇದೇ ವೇಳೆ ಕರೆ ಅವರು ಕರೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್​ ಛತ್ರ ಪರಿಷತ್​ ಸಂಸ್ಥಾಪನ ದಿನದ ಹಿನ್ನೆಲೆ ಕೋಲ್ಕತ್ತಾದಲ್ಲಿ ಮಧ್ಯಾಹ್ನದ ಬಳಿಕ ಭಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಿಎಂ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯಿಂದ 12ಗಂಟೆಗಳ ಕಾಲ ಮುಷ್ಕರ: ಇನ್ನು ಕೋಲ್ಕತ್ತಾದ ಆರ್​ಜಿ ಕರ್​ ಆಸ್ಪತ್ರೆ ವಿದ್ಯಾರ್ಥಿ ಹತ್ಯೆ ಖಂಡಿಸಿ, ಮಂಗಳವಾರ ವಿವಿಧ ಸಂಘಟನೆಗಳು ನೀಡಿದ್ದ ನಬನ್ನ ಅಭಿಜನ್​ ಮೆರವಣಿಗೆ ಸಂಘರ್ಷಕ್ಕೆ ತಿರುಗಿತು. ಪೊಲೀಸರು ಮೆರವಣಿಗೆ ಪ್ರತಿಭಟನಾಕಾರರ ಮೇಲೆ ನಡೆಸಿದ ಲಾಠಿ ಚಾರ್ಜ್, ಜಲಫಿರಂಗಿ ದಾಳಿ ಖಂಡಿಸಿ, ಇಂದು ರಾಜ್ಯಾದ್ಯಂತ ಬಿಜೆಪಿ 12 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದೆ.

ಕಿರಿಯ ವೈದ್ಯೆ ಹತ್ಯೆ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್​ ಆದೇಶದ ಮೇರೆಗೆ ಸಿಬಿಐ ಈಗಾಗಲೇ ತನಿಖೆಗೆ ಮುಂದಾಗಿದೆ. ಇದರ ಜೊತೆಗೆ ಸಿಬಿಐ ಆರ್​ಜಿ ಕರ್​ ಆಸ್ಪತ್ರೆಯಲ್ಲಿನ ಆರ್ಥಿಕ ಅವ್ಯವಹಾರದ ಕುರಿತು ಕೂಡ ತನಿಖೆ ನಡೆಸುತ್ತಿದೆ. (ಐಎಎನ್​ಎಸ್​)

ಇದನ್ನೂ ಓದಿ: ವೈದ್ಯಕೀಯ ವೃತ್ತಿಪರರ ಭದ್ರತೆ ಕುರಿತು ಕೇಂದ್ರ ಗೃಹ, ಆರೋಗ್ಯ ಕಾರ್ಯದರ್ಶಿಗಳ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.