ನವದೆಹಲಿ: ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಸ್ವಾಗತ ಮಾಡಿದರು.
ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆಗಾಗಿ ಮೊಹಮ್ಮದ್ ಮುಯಿಝು ಮತ್ತು ಮಾಲ್ಡೀವ್ಸ್‌ನ ಪ್ರಥಮ ಮಹಿಳೆ ಸಾಜಿದಾ ಮೊಹಮದ್ ಭಾನುವಾರದಂದು ನವದೆಹಲಿಗೆ ಬಂದಿಳಿದಿದ್ದಾರೆ. ಈ ವೇಳೆ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಉನ್ನತ ಮಟ್ಟದ ನಿಯೋಗದೊಂದಿಗೆ ಆತ್ಮೀಯ ಸ್ವಾಗತ ಕೋರಿದರು.
#WATCH | President Droupadi Murmu and Prime Minister Narendra Modi receive Maldives President Mohamed Muizzu as he arrives at Rashtrapati Bhavan, in Delhi.
— ANI (@ANI) October 7, 2024
(Video: DD News) pic.twitter.com/k7zLK31x7Z
ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಇದಕ್ಕೂ ಮುನ್ನ ಅವರು ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ನಂತರದಲ್ಲಿ ಅವರು ಪ್ರಧಾನಿ ಮೋದಿ ಅವರೊಂದಿಗೆ ಹೈದರಾಬಾದ್ ಹೌಸ್ನಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮ ಅವರ ಅಧಿಕೃತ ಆಹ್ವಾನದ ಮೇರೆಗೆ ಮೊಹಮ್ಮದ್ ಮುಯಿಝು ಅಕ್ಟೋಬರ್ 6 ರಿಂದ 10 ದಿನಗಳ ಕಾಲ ಅವರು ಭಾರತದ ಪ್ರವಾಸ ನಡೆಸಲಿದ್ದಾರೆ. ಈ ವೇಳೆ ಅವರು ಉದ್ಯಮ ಕಾರ್ಯಕ್ರಮ ಹಿನ್ನೆಲೆ ಬೆಂಗಳೂರು ಮತ್ತು ಮುಂಬೈಗೂ ಕೂಡ ಭೇಟಿ ನೀಡಲಿದ್ದಾರೆ.
ಇತ್ತೀಚಿಗೆ ನ್ಯೂಯಾರ್ಕ್ನಲ್ಲಿ ನಡೆದ 79ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಕಾರ್ಯಕ್ರಮದ ಸಂದರ್ಭದಲ್ಲಿ ಮುಯಿಝು ಅವರು ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೇ ಈ ವೇಳೆ ಅವರು ಉಭಯ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಶ್ಲಾಘಿಸಿದರು.
ಮುಯಿಝು ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತಿರುವ ಎರಡನೇ ಪ್ರವಾಸವಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾದ ಬಳಿಕ ನಡೆದ ಪ್ರಮಾಣವಚನ ಕಾರ್ಯಕ್ರಮಕ್ಕೂ ಅವರು ಹಾಜರಾಗಿದ್ದರು.
ಮುಯಿಝು ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಭಾರತದೊಂದಿಗಿನ ಸಂಬಂಧದಲ್ಲಿ ಅನೇಕ ಅಸಾಂಪ್ರದಾಯಿಕ ದೃಷ್ಟಿಕೋನದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಮಝಿಝು ತಮ್ಮ ಅಧ್ಯಕ್ಷೀಯ ಪ್ರಚಾರದಲ್ಲಿ ಇಂಡಿಯಾ ಔಟ್ ಮಾದರಿಯ ಪ್ರಚಾರವನ್ನು ನಡೆಸಿದ್ದರು. ಭಾರತೀಯ ಸೈನಿಕರನ್ನು ದೇಶದಿಂದ ತೆಗೆದುಹಾಕುವುದು ಅವರ ಪಕ್ಷದ ಪ್ರಮುಖ ಚುನಾವಣಾ ಪ್ರಚಾರವಾಗಿತ್ತು.
ಇದನ್ನೂ ಓದಿ: ಪರಮಾಣು ಶಸ್ತ್ರಾಸ್ತ್ರಗಳಂತೆ ಜಗತ್ತಿಗೆ ಎಐ ಅತ್ಯಂತ ಅಪಾಯಕಾರಿ: ಜೈಶಂಕರ್ ಕಳವಳ