ETV Bharat / bharat

ಆನೆ ದಾಳಿ: ಮಲಯಾಳಂ ಸುದ್ದಿ ವಾಹಿನಿಯ ಕ್ಯಾಮರಾಮನ್ ಬಲಿ - Elephant Attack

ಕಾಡಾನೆ ದಾಳಿಗೆ ಮಲಯಾಳಂನ ಪ್ರಮುಖ ಸುದ್ದಿ ವಾಹಿನಿಯ ವಿಡಿಯೋ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ.

JOURNALIST DIED IN ELEPHANT ATTACK
ಮೃತ ಮುಖೇಶ್ (ETV Bharat)
author img

By PTI

Published : May 8, 2024, 1:17 PM IST

ಕೇರಳ: ಕಾಡಾನೆ ದಾಳಿಗೊಳಗಾಗಿ ಮಲಯಾಳಂ ಖಾಸಗಿ ಸುದ್ದಿವಾಹಿನಿ ಮಾತೃಭೂಮಿ ಸಂಸ್ಥೆಯ ವಿಡಿಯೋ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯ ಕಂಜಿಕೋಡು ಸಮೀಪದ ಪಣಮರಕ್ಕಾಡ್ ಎಂಬಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿತು. ಪಾಲಕ್ಕಾಡ್ ಮೂಲದ ಎವಿ ಮುಖೇಶ್ ಮೃತಪಟ್ಟವರು ಎಂದು ತಿಳಿದುಬಂದಿದೆ.

ಕಾಡು ಆನೆಗಳ ಹಿಂಡು ನದಿ ದಾಟುತ್ತಿರುವುದನ್ನು ಚಿತ್ರೀಕರಿಸುತ್ತಿದ್ದಾಗ ಘಟನೆ ನಡೆದಿದೆ. ತಕ್ಷಣ ಅವರನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ. ಮುಖೇಶ್ ಮೃತದೇಹವನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಮುಖೇಶ್ ಮಲಪ್ಪುರಂನ ಪರಪನಂಗಡಿ ಮೂಲದ ಉನ್ನಿ ಮತ್ತು ದೇವಿ ದಂಪತಿಯ ಮಗ. ಇವರಿಗೆ ಮದುವೆಯಾಗಿದ್ದು ಪತ್ನಿ ತಿಶಾ ಅವರನ್ನು ಅಗಲಿದ್ದಾರೆ. ಎ.ವಿ.ಮುಖೇಶ್ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಮತ್ತೆ ಕಾಡಿಗೆ ಅಟ್ಟಿದ ಗ್ರಾಮಸ್ಥರು - Elephant Attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.