ETV Bharat / bharat

ಮುಂಬೈ ವಿಮಾನ ನಿಲ್ದಾಣದಲ್ಲಿ ₹10 ಕೋಟಿ ಮೌಲ್ಯದ ಚಿನ್ನ, ವಜ್ರ ಸೇರಿ ವಿದೇಶಿ ಕರೆನ್ಸಿ ವಶ - Customs Department

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಕೋಟಿ 60 ಲಕ್ಷ ಮೌಲ್ಯದ ಚಿನ್ನ, ವಜ್ರ ಹಾಗೂ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿನ್ನ ವಶ
ಚಿನ್ನ ವಶ
author img

By ETV Bharat Karnataka Team

Published : Mar 22, 2024, 10:29 PM IST

ಮುಂಬೈ (ಮಹಾರಾಷ್ಟ್ರ) : ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಮಹತ್ವದ ಕಾರ್ಯಾಚರಣೆ ಕೈಗೊಂಡಿದೆ. 10 ಕೋಟಿ 60 ಲಕ್ಷ ಮೌಲ್ಯದ ಚಿನ್ನ, ವಜ್ರ ಹಾಗೂ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ. ಮಾರ್ಚ್ 20 ರಿಂದ ಮಾರ್ಚ್ 22, 2024 ರವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, 8 ಪ್ರತ್ಯೇಕ ಪ್ರಕರಣಗಳಲ್ಲಿ 5.36 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ, 3.75 ಕೋಟಿ ರೂಪಾಯಿ ಮೌಲ್ಯದ ವಜ್ರಗಳು ಮತ್ತು 1.49 ಕೋಟಿ ಮೌಲ್ಯದ 2.59 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ನಗದು ವಶ
ನಗದು ವಶ

ಮಾರ್ಚ್ 20 ರಂದು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ವಿದೇಶಿ ಕರೆನ್ಸಿ ಮತ್ತು ವಜ್ರಗಳ ಕಳ್ಳಸಾಗಣೆ ಕುರಿತು ಏರ್‌ಪೋರ್ಟ್ ಕಮಿಷನರೇಟ್, ಮುಂಬೈ ಕಸ್ಟಮ್ಸ್ ವಲಯ-III ರ ಅಧಿಕಾರಿಗಳು ಪಡೆದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಶಂಕಿತರಲ್ಲಿ ಒಬ್ಬನನ್ನು ಪತ್ತೆಹಚ್ಚಿದರು. ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರು.

ಚಿನ್ನ ವಶ
ಚಿನ್ನ ವಶ

ಶಂಕಿತನ ಜೊತೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಅಧಿಕಾರಿಗಳು ಇದೇ ವೇಳೆ ಬಂಧಿಸಿದ್ದಾರೆ. ಈ ಪ್ರಯಾಣಿಕರ ಬ್ಯಾಗ್​ಗಳನ್ನು ಪರಿಶೀಲಿಸಿದ ನಂತರ 5.36 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ (ಯುಎಸ್‌ಡಿ, ಯುಕೆ ಪೌಂಡ್‌ಗಳು, ಯುರೋಗಳು ಮತ್ತು ಎನ್‌ಝಡ್ ಡಾಲರ್‌ಗಳನ್ನು ಒಳಗೊಂಡಿರುತ್ತದೆ) ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಹೊಲಿದ ಬಟ್ಟೆಯ ಪದರಗಳಲ್ಲಿ ಮರೆಮಾಡಲಾಗಿತ್ತು. ಅನುಮಾನದ ಮೇಲೆ ಅದೇ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕನ ಕೈಚೀಲವನ್ನು ಶೋಧಿಸಲಾಯಿತು. ಇದರಲ್ಲಿ ಕಪ್ಪು ಟೇಪ್‌ನಲ್ಲಿ ಸುತ್ತಿದ 3 ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ಯಾಂಟ್ ಪಾಕೆಟ್​ನಲ್ಲಿ ಬಚ್ಚಿಟ್ಟಿದ್ದ 3.75 ಕೋಟಿ ಮೌಲ್ಯದ ವಜ್ರ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮೂವರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಎಮಿರೇಟ್ಸ್ ವಿಮಾನ EK 500 ಮೂಲಕ ದುಬೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು 2 ಪ್ರತ್ಯೇಕ ಸಂದರ್ಭಗಳಲ್ಲಿ ತಡೆ ಹಿಡಿದು ತಪಾಸಣೆಗೆ ಒಳಪಡಿಸಲಾಯಿತು . ಒಟ್ಟು 1,589.00 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನಾಭರಣ (17 ತುಂಡುಗಳು) ಮರೆಮಾಚಲ್ಪಟ್ಟಿದ್ದು, ಇದೇ ವೇಳೆ ಕಂಡು ಬಂದಿತ್ತು. ಇಂಡಿಗೋ ಫ್ಲೈಟ್ 6E 62 ಮೂಲಕ ಜೆಡ್ಡಾದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ ತಡೆ ಹಿಡಿದು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಅವರ ಹೊಟ್ಟೆಯಲ್ಲಿ ಬಚ್ಚಿಟ್ಟ 24 ಕ್ಯಾರೆಟ್​ನ 255.00 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : ಪಾದರಕ್ಷೆ, ಒಳಉಡುಪಿನಲ್ಲಿದ್ದ ₹1.40 ಕೋಟಿ ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ!- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.