ETV Bharat / bharat

ಗ್ಯಾಂಗ್​ಸ್ಟರ್​ ಗವಳಿ ಬಿಡುಗಡೆಗೆ ಹೈಕೋರ್ಟ್ ಆದೇಶ: ಸುಪ್ರೀಂ ಮೊರೆ ಹೋದ ಮಹಾರಾಷ್ಟ್ರ ಸರ್ಕಾರ - Gangster Arun Gawli

ಭೂಗತ ಪಾತಕಿ ಅರುಣ್ ಗವಳಿ ಎಂಬಾತನನ್ನು ಅವಧಿಪೂರ್ವ ಬಿಡುಗಡೆಗೆ ಅವಕಾಶ ಮಾಡಿಕೊಟ್ಟ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

author img

By PTI

Published : Jun 2, 2024, 3:31 PM IST

ಡಾನ್ ಅರುಣ್ ಗವಳಿಯ ಹಳೆಯ ಚಿತ್ರ
ಗ್ಯಾಂಗ್​ಸ್ಟರ್ ಅರುಣ್ ಗವಳಿಯ ಹಳೆಯ ಚಿತ್ರ (IANS)

ನವದೆಹಲಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಭೂಗತ ಪಾತಕಿ ಅರುಣ್ ಗವಳಿ ಅವರನ್ನು ಅವಧಿಪೂರ್ವ ಬಿಡುಗಡೆಗೆ ಅವಕಾಶ ಮಾಡಿಕೊಟ್ಟ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯಲಿದೆ.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ (MCOCA -ಮಕೋಕಾ) ನಿಬಂಧನೆಗಳ ಅಡಿಯಲ್ಲಿ ಶಿಕ್ಷೆಗೊಳಗಾಗಿರುವ ಅರುಣ್ ಗವಳಿಯ ಅವಧಿಪೂರ್ವ ಬಿಡುಗಡೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಸಂದೀಪ್ ಮೆಹ್ತಾ ಅವರ ರಜಾಕಾಲದ ನ್ಯಾಯಪೀಠ ವಿಚಾರಣೆ ನಡೆಸಲಿದೆ.

2006ರ ಜನವರಿ 10ರಂದು ಜಾರಿಯಾದ ಕ್ಷಮಾದಾನ ನೀತಿಯ ಅಡಿಯಲ್ಲಿ ತನ್ನನ್ನು ಅವಧಿಪೂರ್ವವಾಗಿ ಜೈಲಿನಿಂದ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಗವಳಿ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠವು ಏಪ್ರಿಲ್ 5ರಂದು ಪುರಸ್ಕರಿಸಿತ್ತು. 2012ರ ಆಗಸ್ಟ್​ 31ರಂದು ತಮಗೆ ಶಿಕ್ಷೆ ನೀಡಿದ ತೀರ್ಪು ಬಂದ ಸಮಯದಲ್ಲಿ ಕ್ಷಮಾದಾನ ನೀತಿಯು ಆ ತೀರ್ಪಿಗೆ ಅನ್ವಯಿಸುತ್ತದೆ ಎಂದು ಗವಳಿ ಅರ್ಜಿಯಲ್ಲಿ ತಿಳಿಸಿದ್ದರು.

2007ರಲ್ಲಿ ಮುಂಬೈನಲ್ಲಿ ನಡೆದ ಶಿವಸೇನೆ ಕಾರ್ಪೊರೇಟರ್ ಕಮಲಾಕರ್ ಜಮಸಂದೇಕರ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗವಳಿ, 2006ರ ಕ್ಷಮಾದಾನ ನೀತಿಯ ಎಲ್ಲ ಷರತ್ತುಗಳನ್ನು ತಾವು ಈಗಾಗಲೇ ಪೂರೈಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಅವಧಿಪೂರ್ವ ಬಿಡುಗಡೆಗಾಗಿ ತಾವು ಸಲ್ಲಿಸಿರುವ ಅರ್ಜಿಯನ್ನು ಸರ್ಕಾರವು ತಿರಸ್ಕರಿಸಿರುವುದು ಅನ್ಯಾಯ, ನಿರಂಕುಶ ಮತ್ತು ಅಸಮರ್ಥನೀಯವಾಗಿದೆ ಎಂದು ಅವರು ಹೇಳಿದರು.

ತನಗೆ ಈಗಾಗಲೇ 65 ವರ್ಷ ವಯಸ್ಸಾಗಿದ್ದು, ಆರೋಗ್ಯ ಪರಿಸ್ಥಿತಿ ದುರ್ಬಲವಾಗಿದೆ ಎಂದು ವೈದ್ಯಕೀಯ ಮಂಡಳಿಯು ಪ್ರಮಾಣೀಕರಿಸಿದೆ. ಹೀಗಾಗಿ ತಾವು ಕ್ಷಮಾದಾನ ನೀತಿಯ ಪ್ರಯೋಜನ ಪಡೆಯಲು ಅರ್ಹರಾಗಿರುವುದಾಗಿ ಅವರು ವಾದಿಸಿದ್ದಾರೆ.

ಆದರೆ ಇದನ್ನು ವಿರೋಧಿಸಿರುವ ರಾಜ್ಯ ಸರ್ಕಾರ, ಮಾರ್ಚ್ 18, 2010ರ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ ಸಂಘಟಿತ ಅಪರಾಧದ ಅಪರಾಧಿಯೊಬ್ಬ 40 ವರ್ಷಗಳ ಕಾಲ ನೈಜ ಜೈಲು ಶಿಕ್ಷೆ ಅನುಭವಿಸದ ಹೊರತು ಆತನನ್ನು ಅವಧಿಪೂರ್ವ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ನಲ್ಲಿ ವಾದಿಸಿದೆ.

ಆದರೆ ರಾಜ್ಯ ಸರ್ಕಾರದ ಮನವಿಯನ್ನು ಒಪ್ಪದ ಹೈಕೋರ್ಟ್, ಪರಿಷ್ಕೃತ ಮಾರ್ಗಸೂಚಿಗಳನ್ನು ಸಂಪೂರ್ಣ ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದು, 2010ರ ಪರಿಷ್ಕೃತ ಮಾರ್ಗಸೂಚಿಗಳು ಸಾಮಾನ್ಯ ಸ್ವರೂಪದ್ದಾಗಿವೆ (General in Nature) ಎಂದು ಅಭಿಪ್ರಾಯಪಟ್ಟಿದೆ. 2006ರ ನೀತಿಯನ್ನು ನಿರ್ದಿಷ್ಟವಾಗಿ ವಯಸ್ಸಾದ ಮತ್ತು ದೈಹಿಕವಾಗಿ ದುರ್ಬಲರಾಗಿರುವ ಕೈದಿಗಳ ಅನುಕೂಲಕ್ಕಾಗಿ ರೂಪಿಸಲಾಗಿದೆ ಮತ್ತು ಈ ಪ್ರಕರಣದಲ್ಲಿ 2010 ರ ಮಾರ್ಗಸೂಚಿಗಳು ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.

"ಮೇಲಿನ ಚರ್ಚೆಯ ದೃಷ್ಟಿಯಿಂದ, ಅರ್ಜಿದಾರರು ಜನವರಿ 10, 2006ರ ಕ್ಷಮಾದಾನ ನೀತಿಯ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ಈ ನೀತಿಯು ಅವರ ಶಿಕ್ಷೆಯ ದಿನಾಂಕದಂದು ಚಾಲ್ತಿಯಲ್ಲಿತ್ತು. ಎಜುಸ್ಡೆಮ್ ಜೆನೆರಿಸ್ (Ejusdem Generis) ನಿಯಮದ ಅನ್ವಯ ಎಂಸಿಒಸಿಎ ಕಾಯ್ದೆಯ ಅಪರಾಧಿಗಳನ್ನು ಈ ನೀತಿಯ ಪ್ರಯೋಜನಗಳನ್ನು ಪಡೆಯುವುದರಿಂದ ತಡೆಯಲಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಅದರಂತೆ ರಿಟ್ ಅರ್ಜಿಯನ್ನು ಸ್ವೀಕರಿಸಲಾಗಿದೆ" ಎಂದು ಹೈಕೋರ್ಟ್ ಆದೇಶಿಸಿತ್ತು.

ಆದೇಶವನ್ನು ಜಾರಿ ಮಾಡಿದ ದಿನಾಂಕದಿಂದ ನಾಲ್ಕು ವಾರಗಳಲ್ಲಿ ಆ ಆದೇಶವನ್ನು ಪಾಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ಆದಾಗ್ಯೂ, ಏಪ್ರಿಲ್ 5ರ ಆದೇಶವನ್ನು ಜಾರಿಗೆ ತರಲು ನಾಲ್ಕು ತಿಂಗಳ ಸಮಯ ಕೋರಿ ರಾಜ್ಯ ಸರ್ಕಾರ ಮೇ 9ರಂದು ಮತ್ತೆ ಹೈಕೋರ್ಟ್ ಮೊರೆ ಹೋಯಿತು. ಈ ತೀರ್ಪನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡಿರುವುದರಿಂದ ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಇದನ್ನು ಮನ್ನಿಸಿದ ಹೈಕೋರ್ಟ್ ತನ್ನ ಆದೇಶ ಜಾರಿಗೆ 4 ವಾರಗಳ ಕಾಲಾವಕಾಶ ನೀಡಿದೆ.

2004-2009ರ ಅವಧಿಯಲ್ಲಿ ಮುಂಬೈನ ಚಿಂಚ್ ಪೋಕ್ಲಿ ಕ್ಷೇತ್ರದಿಂದ ಶಾಸಕರಾಗಿದ್ದ ಗವಳಿ, ಬೈಕುಲ್ಲಾ ಪ್ರದೇಶದ ದಗ್ಡಿ ಚಾಳ್ ಡಾನ್ ಆಗಿ ಕುಖ್ಯಾತಿ ಗಳಿಸಿದ್ದಾರೆ. 2006ರಲ್ಲಿ ನಡೆದ ಜಮಸಂದೇಕರ್ ಕೊಲೆ ಪ್ರಕರಣದಲ್ಲಿ ಇವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. 2012ರ ಆಗಸ್ಟ್​ನಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಈ ಕೊಲೆ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 17 ಲಕ್ಷ ರೂ.ಗಳ ದಂಡ ವಿಧಿಸಿತ್ತು.

ಇದನ್ನೂ ಓದಿ: ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು - ASSEMBLY ELECTION RESULT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.