ETV Bharat / bharat

ಮಹಾರಾಷ್ಟ್ರ ಚುನಾವಣೆ: ಥಾಣೆ ಜಿಲ್ಲೆಯಲ್ಲಿ 13.26 ಕೋಟಿ ಮೌಲ್ಯದ ಮದ್ಯ, ಉಚಿತ ಉಡುಗೊರೆ ಜಪ್ತಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮತದಾರರಿಗೆ ಹಂಚಲು ಸಾಗಿಸಲಾಗುತ್ತಿದ್ದ 13.26 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By PTI

Published : 2 hours ago

ಥಾಣೆ: ಅಕ್ಟೋಬರ್ 15 ರಿಂದ ಮಹಾರಾಷ್ಟ್ರದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ನವೆಂಬರ್ 5 ರವರೆಗೆ ಥಾಣೆ ಜಿಲ್ಲೆಯಲ್ಲಿ 13.26 ಕೋಟಿ ರೂ. ಮೌಲ್ಯದ ಮದ್ಯ, ಮಾದಕವಸ್ತು ಮತ್ತು ಜನರಿಗೆ ಉಚಿತವಾಗಿ ನೀಡಲು ಸಂಗ್ರಹಿಸಲಾಗಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಸಾಗಾಟದ ವಸ್ತುಗಳ ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಒಟ್ಟು 209 ಎಫ್ಐಆರ್​ಗಳನ್ನು ದಾಖಲಿಸಲಾಗಿದೆ ಎಂದು ಥಾಣೆ ಜಿಲ್ಲಾಧಿಕಾರಿ ಅಶೋಕ್ ಶಿಂಗಾರೆ ಹೇಳಿದ್ದಾರೆ. ವಿಶೇಷ ವೀಕ್ಷಕ (ವೆಚ್ಚಗಳು) ಬಿ ಆರ್ ಬಾಲಕೃಷ್ಣನ್ ಅವರೊಂದಿಗೆ ಬುಧವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

18 ವಿಧಾನಸಭಾ ಕ್ಷೇತ್ರಗಳಾದ್ಯಂತ 72,29,339 ಮತದಾರರನ್ನು ಹೊಂದಿರುವ ಥಾಣೆ ಜಿಲ್ಲೆಯಲ್ಲಿ ಮುಂಬರುವ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಅಂಕಿ ಸಂಖ್ಯೆಗಳನ್ನು ಶಿಂಗಾರೆ ಹಂಚಿಕೊಂಡರು. ಥಾಣೆ ಜಿಲ್ಲೆಯಲ್ಲಿ 22,82,882 ಮಹಿಳಾ ಮತ್ತು 1,415 ತೃತೀಯ ಲಿಂಗಿ ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ 1,72,981 ಮತದಾರರು, 38,149 ವಿಕಲಚೇತನರು ಮತ್ತು 85 ವರ್ಷ ಮೇಲ್ಪಟ್ಟ 56,976 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 30,868 ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಲಿದ್ದಾರೆ ಎಂದು ಶಿಂಗಾರೆ ಹೇಳಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ಜರುಗಲಿದೆ.

ಪ್ರಧಾನಿ ಮೋದಿ ಪ್ರಚಾರ ಆರಂಭ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಉತ್ತರ ಮಹಾರಾಷ್ಟ್ರದ ಧುಲೆಯಲ್ಲಿ ಅವರು ಮೊದಲ ಪ್ರಚಾರ ಭಾಷಣ ಮಾಡಲಿದ್ದು, ನಂತರ ನಾಸಿಕ್ ಗೆ ತೆರಳಲಿದ್ದಾರೆ.

ಶಿವಸೇನೆ (ಯುಬಿಟಿ) ಪ್ರಣಾಳಿಕೆ ಬಿಡುಗಡೆ: ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಪ್ರಣಾಳಿಕೆಯನ್ನು ಅನಾವರಣಗೊಳಿಸಿದರು. ಬಾಲಕಿಯರಿಗೆ ನೀಡಲಾಗುವಂತೆ ಶಾಲಾ ಬಾಲಕರಿಗೂ ಉಚಿತ ಶಿಕ್ಷಣ, ಮೀಸಲಾತಿಯ ಮೇಲಿನ ಶೇಕಡಾ 50 ರಷ್ಟು ಮಿತಿಯನ್ನು ತೆಗೆದುಹಾಕುವುದು, ಹಳೆಯ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸುವುದು, ಮುಂಬೈನಲ್ಲಿ ಐದು ಲಕ್ಷ ಜನರಿಗೆ ಕೈಗೆಟುಕುವ ವಸತಿ ಒದಗಿಸುವುದು, ಧಾರಾವಿ ಪುನರಾಭಿವೃದ್ಧಿ ಮತ್ತು ರತ್ನಗಿರಿಯಲ್ಲಿ ಬರ್ಸು ಪೆಟ್ರೋಕೆಮಿಕಲ್ ರಿಫೈನರಿ ಈ ಎರಡು ಯೋಜನೆಗಳನ್ನು ರದ್ದುಗೊಳಿಸುವುದು ಪ್ರಣಾಳಿಕೆಯ ಪ್ರಮುಖ ಭರವಸೆಗಳಾಗಿವೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 3ನೇ ದಿನವೂ ಗದ್ದಲ; ಪ್ರತಿಪಕ್ಷಗಳ 12 ಶಾಸಕರನ್ನು ಹೊರಹಾಕಿದ ಸ್ಪೀಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.