ETV Bharat / bharat

ಬೆಂಗಳೂರಿನಲ್ಲಿ ಪ್ರೀತಿ, ಮಧ್ಯಪ್ರದೇಶದಿಂದ ಜಾರ್ಖಂಡ್​ ತಲುಪಿದ ವಿವಾಹಿತೆ; ಲವರ್​ ಪರಾರಿ! - Search Of Love - SEARCH OF LOVE

ಮಧ್ಯಪ್ರದೇಶದ ವಿವಾಹಿತೆಯೊಬ್ಬಳು ತನ್ನ ಪ್ರೀತಿಯನ್ನು ಹುಡುಕಿಕೊಂಡು ಜಾರ್ಖಂಡ್​ನ ಪಲಮು ತಲುಪಿದ್ದಾರೆ. ಅಲ್ಲಿ ತನ್ನ ಲವರ್​ ಆಗಮನದ ಬಗ್ಗೆ ಮಾಹಿತಿ ಪಡೆದ ಆರೋಪಿತ ಪ್ರೇಮಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಆಗ ಅಲ್ಲಿ ನಡೆದಿದ್ದೇನು ಎಂಬುದರ ಮಾಹಿತಿ ಇಲ್ಲಿದೆ..

GIRL IN SEARCH OF BOYFRIEND  GIRL REACHED PALAMU FROM MP  LOVE STORY IN PALAMU
ಬೆಂಗಳೂರಿನಲ್ಲಿ ಪ್ರೀತಿ, ಮಧ್ಯಪ್ರದೇಶದಿಂದ ಜಾರ್ಖಂಡ್​ ತಲುಪಿದ ವಿವಾಹಿತೆ (ETV Bharat)
author img

By ETV Bharat Karnataka Team

Published : Jul 17, 2024, 4:06 PM IST

ಪಲಾಮು (ಜಾರ್ಖಂಡ್​): ಮಧ್ಯಪ್ರದೇಶದ ಇಟಾರ್ಸಿಯ ವಿವಾಹಿತೆಯೊಬ್ಬಳು ತನ್ನ ಪ್ರಿಯಕರನ ಹುಡುಕಿಕೊಂಡು ಜಾರ್ಖಂಡ್​ನ ಪಲಾಮು ತಲುಪಿದ್ದಳು. ಆಪಾದಿತ ಪ್ರೇಮಿಯ ಮನೆಯ ಹೊರಗೆ ಆಕೆ ಗಂಟೆಗಳ ಕಾಲ ಪ್ರತಿಭಟಿಸಿದ್ದಳು. ಬಳಿಕ ಪೊಲೀಸರೇ ಮಧ್ಯಪ್ರವೇಶಿಸಿ ವಿವಾಹಿತೆಯನ್ನು ಆಕೆಯ ಪ್ರಿಯಕರನ ಮನೆಯಲ್ಲಿ ಇರುವಂತೆ ಮಾಡಿದ್ದಾರೆ. ಇತ್ತ ತನ್ನ ಗೆಳತಿ ಮನೆಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಆರೋಪಿ ಪ್ರೇಮಿ ಪರಾರಿಯಾಗಿದ್ದಾನೆ. ಈ ಘಟನೆ ಪಲಮುವಿನ ಹುಸೇನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಯುವಕನ ಪರಿಚಯ: ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಪಲಮುವಿನ ದಿಯೋರಿ ನಿವಾಸಿ ಸೋನು ಕುಮಾರ್, ಕೆಲವು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಲ್ಲಿಯೇ ಸೋನು ಮಧ್ಯಪ್ರದೇಶದ ಇಟಾರ್ಸಿಯ ನಿವಾಸಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಸ್ವಲ್ಪ ಸಮಯದ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಆಕೆಗೆ ಮೊದಲೇ ಮದುವೆಯಾಗಿತ್ತು.

ಸೋನು ಮದುವೆ: ಬೆಂಗಳೂರಿನಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ ನಂತರ ಸೋನು ಪಲಮುವಿನ ದಿಯೋರಿಯಲ್ಲಿರುವ ತನ್ನ ಮನೆಗೆ ಮರಳಿದ್ದ. ಕಳೆದ ವಾರ ಸೋನು ಮದುವೆಯಾದ. ಈ ವಿಷಯ ಸೋನುವಿನ ಗೆಳತಿಗೆ ತಿಳಿದಿದೆ. ಕೂಡಲೇ ಆಕೆ ಸೋನುವನ್ನು ಹುಡುಕುತ್ತಾ ಪಲಮುವಿನ ದಿಯೋರಿಗೆ ಬಂದಿದ್ದಾಳೆ.

ಮಧ್ಯೆ ರಾತ್ರಿಯವರೆಗೂ ಪ್ರತಿಭಟನೆ: ಮಂಗಳವಾರ ಸಂಜೆ ಏಳು ಗಂಟೆ ಸುಮಾರಿಗೆ ವಿವಾಹಿತೆ ಸೋನು ಮನೆಗೆ ಬಂದಿದ್ದಾಳೆ. ರಾತ್ರಿ 1 ಗಂಟೆಯವರೆಗೂ ಸೋನು ಹುಡುಗನ ಮನೆಯ ಹೊರಗೆ ಕುಳಿತಿದ್ದಳು. ಈ ಬಗ್ಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು: ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪೊಲೀಸರು ವಿವಾಹಿತೆಯೊಂದಿಗೆ ಮಾತುಕತೆ ನಡೆಸಿ ವಿಷಯ ತಿಳಿದುಕೊಂಡಿದ್ದಾರೆ. ವಿವಾಹಿತೆ ಕೂಡ ಪೊಲೀಸರಿಗೆ ಸಂಪೂರ್ಣ ವಿಷಯ ತಿಳಿಸಿದ್ದಾಳೆ. ಇದಾದ ಬಳಿಕ ಸ್ಥಳೀಯರ ಒತ್ತಡಕ್ಕೆ ಮಣಿದು ಸೋನು ಮನೆಯವರು ಆಕೆಯನ್ನು ಒಂದು ದಿನದ ಮಟ್ಟಿಗೆ ತಮ್ಮ ಮನೆಯಲ್ಲಿ ಇರಿಸಿಕೊಳ್ಳಲು ಒಪ್ಪಿದರು.

ದೂರು ಸಲ್ಲಿಸದ ವಿವಾಹಿತೆ: ಯುವಕನಿಂದ ಮೋಸ ಹೋಗಿರುವ ಮಹಿಳೆ ತನ್ನ ಪ್ರಿಯಕರನನ್ನು ಹುಡುಕುತ್ತಿದ್ದಾಳೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆ ಇನ್ನೂ ದೂರು ಸಲ್ಲಿಸಿಲ್ಲ ಎಂದು ಪೊಲೀಸ್​ ಅಧಿಕಾರಿ ಬಬ್ಲು ಕುಮಾರ್ ತಿಳಿಸಿದ್ದಾರೆ.

ಓದಿ: ಭಗ್ನ ಪ್ರೇಮಿಯಿಂದ ತ್ರಿವಳಿ ಕೊಲೆ! - Bihar Triple Murder

ETV Bharat Logo

Copyright © 2025 Ushodaya Enterprises Pvt. Ltd., All Rights Reserved.