ETV Bharat / bharat

ಲೋಕಸಭೆ ಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿಯಾದರೆ ಏನೆಲ್ಲಾ ಆಗುತ್ತೆ?

ಬಹುನಿರೀಕ್ಷಿತ 2024ರ ಲೋಕಸಭೆ ಚುನಾವಣೆಯ ದಿನಾಂಕ, ವೇಳಾಪಟ್ಟಿ ಇಂದು ಪ್ರಕಟಗೊಂಡಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ನಿಯಮದಡಿ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿದೆ ಎಂಬ ಮಾಹಿತಿ ಇಲ್ಲಿದೆ.

Lokasabha Election: What is Model Code of conduct

author img

By ETV Bharat Karnataka Team

Published : Mar 16, 2024, 2:46 PM IST

Updated : Mar 16, 2024, 3:27 PM IST

ನವದೆಹಲಿ: ಭಾರತೀಯ ಚುನಾವಣಾ ಆಯೋಗ 2024ರ ಲೋಕಸಭೆ ಚುನಾವಣೆ ದಿನಾಂಕವನ್ನು ಘೋಷಿಸಿದ್ದು, ಈ ಪ್ರಕಟಣೆಯ ಬೆನ್ನಲ್ಲೇ, ಇಡೀ ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅದರ ಪರಿಣಾಮ, ಇನ್ನು ಎರಡು ತಿಂಗಳ ಕಾಲ ಆಡಳಿತ ಯಂತ್ರವು ಜನಪ್ರತಿನಿಗಳ ಹಿಡಿತ ಕಳೆದುಕೊಂಡು ನೌಕರಶಾಹಿ ತೆಕ್ಕೆಗೆ ಜಾರಲಿದೆ. ನೀತಿ ಸಂಹಿತೆ ನಿಯಮದಡಿ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿದೆ, ಜನಸಾಮಾನ್ಯರ ಮೇಲೆ ಈ ನಿಯಮಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ವಿವರ ಸೇರಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸರ್ಕಾರಗಳ ಮೇಲೆ ಆಯೋಗ ಹೇರುವ ಕೆಲವೊಂದು ನಿರ್ಬಂಧಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀತಿ ಸಂಹಿತೆ ಎಂದರೇನು?: ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕೆಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನೀತಿ ಸಂಹಿತೆ ಎಂದು ಕರೆಯಲಾಗುತ್ತದೆ. ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನೀತಿ ಸಂಹಿತೆ ಅಡಿ ತಿಳಿಸಲಾಗಿದೆ.

ನೀತಿ ಸಂಹಿತೆ ನಿಯಮಗಳು ಹೀಗಿವೆ:

  • ಚುನಾವಣೆ ಘೋಷಣೆ ಬಳಿಕ ಸರ್ಕಾರದಿಂದ ಯಾವುದೇ ಅನುದಾನ ಕೊಡುವುದು, ಈ ಕುರಿತು ಆಶ್ವಾಸನೆ ನೀಡುವುದು, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವುಂತಿಲ್ಲ.
  • ಈ ಅವಧಿಯಲ್ಲಿ ರಸ್ತೆಗಳ ನಿರ್ಮಾಣ, ಕುಡಿವ ನೀರಿನ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಇತ್ಯಾದಿಗಳಿಗೆ ಸಂಬಂಧಿಸಿದ ಭರವಸೆಗಳನ್ನು ಸಹ ಅನುಮತಿಸಲಾಗುವುದಿಲ್ಲ.
  • ಆಡಳಿತ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸರ್ಕಾರಿ ಅಥವಾ ಸಾರ್ವಜನಿಕ ಉದ್ಯಮಗಳಲ್ಲಿ ತಾತ್ಕಾಲಿಕ ನೇಮಕಾತಿಗಳನ್ನು ಮಾಡಿಕೊಳ್ಳುವಂತಿಲ್ಲ.
  • ಚುನಾವಣಾ ಪ್ರಚಾರಕ್ಕಾಗಿ ಸರ್ಕಾರಿ ಯಂತ್ರೋಪಕರಣಗಳು ಅಥವಾ ಸಿಬ್ಬಂದಿಯನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಮಾರ್ಗಸೂಚಿಗಳು ಹೇಳುತ್ತವೆ.
  • ಚುನಾವಣಾ ಸಮಯದಲ್ಲಿ ಆಡಳಿತ ಪಕ್ಷ ಅಧಿಕೃತ ವಿಮಾನಗಳು, ವಾಹನಗಳು, ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ಸೇರಿ ಸರ್ಕಾರಿ ವಾಹನ ಬಳಸಲಾಗುವುದಿಲ್ಲ.
  • ಸಚಿವರು, ಮಂತ್ರಿಗಳು ಸರ್ಕಾರಿ ವೆಚ್ಚದಲ್ಲಿ ಯಾವುದೇ ಚುನಾವಣಾ ಜಾಥಾ ನಡೆಸದಿರುವ ಬಗ್ಗೆಯೂ ಮಾರ್ಗಸೂಚಿಗಳು ಹೇಳುತ್ತವೆ.
  • ನೀತಿ ಸಂಹಿತೆ ಜಾರಿ ಬಳಿಕ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಿಲ್ಲ.
  • ವರ್ಗಾವಣೆ ಬಹಳ ಮುಖ್ಯವಾಗಿದ್ದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯುವುದು ಅಗತ್ಯ.
  • ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸಭೆ ಆಯೋಜಿಸುವ, ಮೆರವಣಿಗೆ ನಡೆಸುವ ಮತ್ತು ಧ್ವನಿವರ್ಧಕಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸರಿಂದ ಲಿಖಿತ ಅನುಮತಿ ಪಡೆಯಬೇಕು.
  • ಸರ್ಕಾರಿ ವಿಶ್ರಾಂತಿ ಗೃಹಗಳಲ್ಲಿ ಸಭೆ, ಚುನಾವಣಾ ರಣತಂತ್ರ ರೂಪಿಸಲು ಬಳಸಿಕೊಳ್ಳುವುದು, ಸರ್ಕಾರಿ ಹಣದಲ್ಲಿ ಜಾಹೀರಾತು ನೀಡುವುದು, ಸಾಧನೆಗಳನ್ನು ಬಿಂಬಿಸುವಂತಹ ಲೇಖನಗಳನ್ನು ಪ್ರಕಟಿಸುವಂತಿಲ್ಲ.
  • ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಪರಸ್ಪರ ದ್ವೇಷವನ್ನು ಉಂಟುಮಾಡುವ, ವಿವಿಧ ಜಾತಿ ಮತ್ತು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಕೈಗೊಳ್ಳುವಂತಿಲ್ಲ.
  • ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳ ಟೀಕೆಗಳನ್ನು ರಾಜಕೀಯ, ಕಾರ್ಯಕ್ರಮಗಳು, ಹಿಂದಿನ ದಾಖಲೆ ಮತ್ತು ಕೆಲಸಗಳಿಗೆ ಸೀಮಿತಗೊಳಿಸಬೇಕು.
  • ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷವು ವೈಯಕ್ತಿಕ ಟೀಕೆಗಳನ್ನು ಅಥವಾ ನಾಯಕರು ಅಥವಾ ಕಾರ್ಯಕರ್ತರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಿಸದ ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ.
  • ವ್ಯಕ್ತಿಗಳ ಅಭಿಪ್ರಾಯಗಳು ಅಥವಾ ಚಟುವಟಿಕೆಗಳ ವಿರುದ್ಧ ಪ್ರತಿಭಟಿಸುವ ಮೂಲಕ ಅವರ ಮನೆಗಳ ಮುಂದೆ ಪ್ರದರ್ಶನಗಳು ಅಥವಾ ಪಿಕೆಟಿಂಗ್ ಅನ್ನು ಚುನಾವಣಾ ಸಮಿತಿ ನಿಷೇಧಿಸುತ್ತದೆ.
  • ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಯಾವುದೇ ವ್ಯಕ್ತಿಯ ಜಮೀನು, ಕಟ್ಟಡವನ್ನು ಅನುಮತಿಯಿಲ್ಲದೇ ಧ್ವಜ, ಬ್ಯಾನರ್‌, ಸೂಚನೆ ಮತ್ತು ಘೋಷಣೆಗಳನ್ನು ಬರೆಯಲು ಅನುಮತಿ ಇರುವುದಿಲ್ಲ.

ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ: ಈ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಲ್ಲಿ ಮತದಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಚುನಾವಣಾ ಆಯೋಗದಿಂದ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ರಾಜಕೀಯ ಪಕ್ಷ ಅಥವಾ ಅದರ ಅಭ್ಯರ್ಥಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ, ಅಂಥವರನ್ನು ಪ್ರಚಾರದಿಂದ ನಿಷೇಧಿಸಬಹುದು. ಅಭ್ಯರ್ಥಿಯು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಇಷ್ಟೇ ಅಲ್ಲ, ಅಗತ್ಯವಿದ್ದರೆ, ಅಭ್ಯರ್ಥಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಬಹುದು ಮತ್ತು ಆತ ಜೈಲು ಪಾಲಾಗುವ ಸಾಧ್ಯತೆಯೂ ಇದೆ. ನೀತಿ ಸಂಹಿತೆ ಕೇವಲ ರಾಜಕೀಯ ಪಕ್ಷಗಳಿಗೆ ಅಥವಾ ಅಭ್ಯರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಾಮಾನ್ಯರಿಗೂ ಅನ್ವಯಿಸುತ್ತದೆ. ಹಾಗಾಗಿ ಶಾಂತಿ ಮತ್ತು ಸುವ್ಯಸ್ಥೆಯೊಂದಿಗೆ ಚುನಾವಣೆಗೆ ಸಹಕರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿ!

Last Updated : Mar 16, 2024, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.