ETV Bharat / bharat

ಲೋಕಸಭೆ ಚುನಾವಣೆಗಳಲ್ಲಿ ಗೆದ್ದವರಿಗಿಂತ ಠೇವಣಿ ಕಳೆದುಕೊಂಡವರೇ ಹೆಚ್ಚು: ಹೀಗಿದೆ ಅಂಕಿಅಂಶ - Security Deposit

ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಓರ್ವ ಗೆದ್ದರೆ, ಉಳಿದವರು ಸೋಲುತ್ತಾರೆ. ಅದರಲ್ಲಿ ಕೆಲವರು ಹೀನಾಯವಾಗಿ ಸೋತು ಠೇವಣಿ ನಷ್ಟ ಅನುಭವಿಸುತ್ತಾರೆ. ಈವರೆಗಿನ 17 ಲೋಕಸಭೆ ಚುನಾವಣೆಗಳಲ್ಲಿ ಜನರಿಂದ ತಿರಸ್ಕೃತರಾದ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆ
ಲೋಕಸಭೆ ಚುನಾವಣೆ
author img

By PTI

Published : Mar 19, 2024, 2:14 PM IST

ನವದೆಹಲಿ: ದೇಶ ಸ್ವತಂತ್ರವಾದ ಬಳಿಕ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಇಲ್ಲಿಯುವರೆಗೂ ನಡೆದ 17 ಲೋಕಸಭೆ ಚುನಾವಣೆಗಳಲ್ಲಿ 71 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಆಯಾ ಕ್ಷೇತ್ರದಲ್ಲಿ ಬಿದ್ದ 6/1 ರಷ್ಟು (ಆರನೇ ಒಂದು ಭಾಗದಷ್ಟು) ಮತಗಳನ್ನು ಪಡೆಯಲೂ ಅಭ್ಯರ್ಥಿಗಳು ವಿಫಲವಾಗಿರುವ ಮಹತ್ವದ ಅಂಶ ಬಯಲಾಗಿದೆ.

ಮೊದಲ ಲೋಕಸಭಾ ಚುನಾವಣೆಯಿಂದ 2019ರ 17ನೇ ಲೋಕಸಭೆ ಚುನಾವಣೆಯಲ್ಲಿ 91,160 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಇದರಲ್ಲಿ 71,246 ಮಂದಿ ತಮ್ಮ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಅಂದರೆ ಒಟ್ಟು ಶೇಕಡಾ 78ರಷ್ಟು ಮಂದಿ ಜನರಿಂದ ತಿರಸ್ಕೃತರಾಗಿದ್ದಾರೆ. ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಬಹಿರಂಗ ಮಾಡಿದ ಅಂಕಿಅಂಶಗಳಲ್ಲಿ ಕಂಡುಬಂದಿದೆ.

ಚುನಾವಣಾವಾರು ಠೇವಣಿ ನಷ್ಟ: 1951-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಸುಮಾರು 40 ಪ್ರತಿಶತದಷ್ಟು ಅಂದರೆ, 1,874 ಅಭ್ಯರ್ಥಿಗಳಲ್ಲಿ 745 ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡರು. 1996ರ 11ನೇ ಲೋಕಸಭೆ ಚುನಾವಣೆಯಲ್ಲಿ ಈ ಪ್ರಮಾಣ ಭಾರೀ ಹೆಚ್ಚಿತು. ಸ್ಪರ್ಧಿಸಿದ 13,952 ಅಭ್ಯರ್ಥಿಗಳಲ್ಲಿ 12,688 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಅಂದರೆ, ಇದರ ಪ್ರಮಾಣ ಶೇಕಡಾ 91. ವಿಶೇಷವೆಂದರೆ, ಲೋಕಸಭೆ ಇತಿಹಾಸದಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ ಚುನಾವಣೆ ಇದಾಗಿತ್ತು.

1991-92ರಲ್ಲಿ, 8,749 ಸ್ಪರ್ಧಿಗಳಲ್ಲಿ 7,539 ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿ ಕಳೆದುಕೊಂಡರು. ಶೇಕಡಾ 86 ಅಭ್ಯರ್ಥಿಗಳು ಠೇವಣಿ ನಷ್ಟ ಹೊಂದಿದ್ದರು. 2009ರಲ್ಲಿ 8,070 ರಲ್ಲಿ 6,829 ಅಭ್ಯರ್ಥಿಗಳು (ಶೇಕಡಾ 85) ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, 2014ರ ಚುನಾವಣೆಯಲ್ಲಿ 8,251 ಅಭ್ಯರ್ಥಿಗಳಲ್ಲಿ 7 ಸಾವಿರ (ಶೇ.84) ಮಂದಿ ಭದ್ರತಾ ಠೇವಣಿ ಕಳೆದುಕೊಂಡರು.

1957ರ ಚುನಾವಣೆಯಲ್ಲಿ 919 ಅಭ್ಯರ್ಥಿಗಳಲ್ಲಿ ಕೇವಲ 130 ಅಥವಾ ಶೇಕಡಾ 14 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಅತಿ ಕಡಿಮೆ ನಷ್ಟವಾಗಿದೆ. 1977 ರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಏಕೆಂದರೆ ಆ ಪಕ್ಷಗಳ 1,060 ಅಭ್ಯರ್ಥಿಗಳಲ್ಲಿ 100 ಅಭ್ಯರ್ಥಿಗಳು (ಶೇಕಡಾ 9) ಮಾತ್ರ ಠೇವಣಿ ಕಳೆದುಕೊಂಡಿದ್ದರು. 1951-52ರ ಮೊದಲ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ 1,217 ಅಭ್ಯರ್ಥಿಗಳಲ್ಲಿ 344 ಮಂದಿ (ಶೇ.28) ಠೇವಣಿ ಕಳೆದುಕೊಂಡಿದ್ದರು.

ಇದರ ಬಳಿಕ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೂ ಶಾಕ್​ ಅನುಭವಿಸಿದರು. ಅಖಾಡದಲ್ಲಿದ್ದ 1,623 ಅಭ್ಯರ್ಥಿಗಳ ಪೈಕಿ 779 ಮಂದಿ ಠೇವಣಿ ಕಳೆದುಕೊಂಡಿದ್ದರು. ಅಂದರೆ, ಪ್ರತಿ ಇಬ್ಬರು ಅಭ್ಯರ್ಥಿಗಳಲ್ಲಿ ಓರ್ವ ರಾಷ್ಟ್ರೀಯ ಪಕ್ಷದ ಸ್ಪರ್ಧಾಳು ಜನರಿಂದ ನಿರಾಕರಣೆಗೆ ಒಳಪಟ್ಟಿದ್ದರು.

2019ರ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಬಿಎಸ್‌ಪಿ ಅತ್ಯಧಿಕ ಸ್ಥಾನಗಳಲ್ಲಿ ಠೇವಣಿ ನಷ್ಟ ಹೊಂದಿದೆ. ಅದರ 383 ಅಭ್ಯರ್ಥಿಗಳಲ್ಲಿ 345 ಅಭ್ಯರ್ಥಿಗಳು ಮಕಾಡೆ ಮಲಗಿದ್ದರು. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ತನ್ನ 421 ಅಭ್ಯರ್ಥಿಗಳಲ್ಲಿ 148 ಮಂದಿ ಠೇವಣಿ ಕೂಡ ಪಡೆಯಲು ವಿಫಲವಾಗಿದ್ದರು. ಬಿಜೆಪಿಯ ಸೋತ 69 ಅಭ್ಯರ್ಥಿಗಳಲ್ಲಿ 51 ಮಂದಿ ಠೇವಣಿ ಕಳೆದುಕೊಂಡಿದ್ದರೆ, ಸಿಪಿಐನ 49 ಅಭ್ಯರ್ಥಿಗಳಲ್ಲಿ 41 ಮಂದಿ ಠೇವಣಿ ನಷ್ಟು ಹೊಂದಿದ್ದಾರೆ ಎಂದು ಅಧಿಕೃತ ದಾಖಲೆಗಳು ತಿಳಿಸಿವೆ.

ಠೇವಣಿ ಮೊತ್ತ ಎಷ್ಟಿದೆ?: 1951ರಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂಪಾಯಿ ಇದ್ದರೆ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 250 ರೂಪಾಯಿ ಭದ್ರತಾ ಇಡಬೇಕಿತ್ತು. ಆದರೆ, ಆ ಮೊತ್ತವನ್ನು ಕಾಲಾನಂತರದಲ್ಲಿ ಹೆಚ್ಚಿಸಲಾಗಿದ್ದು, ಪ್ರಸ್ತುತ ಸಾಮಾನ್ಯ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕ್ರಮವಾಗಿ 25 ಸಾವಿರ, 12,500 ರೂಪಾಯಿ ಠೇವಣಿ ಇಡಬೇಕಿದೆ.

ಠೇವಣಿ ನಷ್ಟದ ಷರತ್ತು ಏನು?: ಅಭ್ಯರ್ಥಿ ತಾನು ಚುನಾವಣೆಗೆ ಸ್ಪರ್ಧಿಸಿದ ಕ್ಷೇತ್ರದಲ್ಲಿ ಇರುವ ಜನಸಂಖ್ಯೆಯ ಪ್ರಮಾಣ ಅಥವಾ ಚಲಾವಣೆಯಾದ ಮತಗಳಲ್ಲಿ ಶೇಕಡಾ 6/1ರಷ್ಟು ಮತಗಳನ್ನು ಕಡ್ಡಾಯವಾಗಿ ಪಡೆದಿರಬೇಕು. ಆಗ ಮಾತ್ರ ಅಭ್ಯರ್ಥಿಯ ಠೇವಣಿ ವಾಪಸ್ಸಾಗಲಿದೆ. ಇಲ್ಲವಾದಲ್ಲಿ ಜನರಿಂದ ಸಾರಸಗಟಾಗಿ ತಿರಸ್ಕೃತವಾಗಿ ಭದ್ರತಾ ಠೇವಣಿಯನ್ನು ಚುನಾವಣಾ ಆಯೋಗವು ತನ್ನ ವಶಕ್ಕೆ ಪಡೆಯುತ್ತದೆ.

18ನೇ ಲೋಕಸಭೆಗೆ ಏಪ್ರಿಲ್ 19ರಿಂದ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ - 2024: 10.5 ಲಕ್ಷ ಮತಗಟ್ಟೆಗಳಿಗೆ ಹೇಗಿದೆ ಗೊತ್ತಾ ಭದ್ರತಾ ವ್ಯವಸ್ಥೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.