ETV Bharat / bharat

ಕೊನೆಯ ಹಂತದ ಲೋಕಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ಪ್ರಧಾನಿ ಮೋದಿ ಸೇರಿ ಅನೇಕರು ಕಣದಲ್ಲಿ - Final round of voting - FINAL ROUND OF VOTING

Lok Sabha Election 2024 7th Phase: 2024ರ ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಶನಿವಾರ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖರು ಕಣದಲ್ಲಿದ್ದಾರೆ.

FINAL ROUND OF VOTING
ವಿದ್ಯುನ್ಮಾನ ಮತಯಂತ್ರ ಮತ್ತು ಇತರ ಚುನಾವಣೆ ಸಂಬಂಧಿತ ಸಾಮಗ್ರಿಗಳನ್ನು ಮತಗಟ್ಟೆಗೆ ಒಯ್ಯುತ್ತಿರುವ ಅಧಿಕಾರಿಗಳು. (IANS)
author img

By ETV Bharat Karnataka Team

Published : May 30, 2024, 3:29 PM IST

Updated : May 31, 2024, 5:14 PM IST

ನವದೆಹಲಿ: ಲೋಕಸಭಾ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ಜೂನ್​ 1 ರಂದು (ಶನಿವಾರ) ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಂತದಲ್ಲಿ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.

Lok Sabha Election 2024 7th Phase
ಕೊನೆಯ ಹಂತದ ಲೋಕಸಭಾ ಚುನಾವಣೆ (ETV Bharat)

ಒಟ್ಟು 904 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಹಿರಂಗ ಚುನಾವಣಾ ಪ್ರಚಾರ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳು ಮನೆ ಮನೆ ಪ್ರಚಾರಕ್ಕೆ ಮುಂದಾಗಿದ್ದಾರೆ. ಒಟ್ಟು ಸಲ್ಲಿಕೆಯಾಗಿದ್ದ 2078 ನಾಮಪತ್ರಗಳಲ್ಲಿ 1413 ನಾಮಪತ್ರಗಳು ಸ್ವೀಕೃತಿಯಾದರೆ, 598 ನಾಮಪತ್ರಗಳು ತಿರಸ್ಕೃತವಾಗಿವೆ. 57 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲಾಗಿದ್ದು, ಕಣದಲ್ಲಿ 904 ಅಭ್ಯರ್ಥಿಗಳು ಉಳಿದಿದ್ದಾರೆ. ಪಂಜಾಬ್‌ನ ಲುಧಿಯಾನ ಕ್ಷೇತ್ರದಿಂದ (43) ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಶಿಮ್ಲಾ ಕ್ಷೇತ್ರದಿಂದ (5) ಕಡಿಮೆ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.

Lok Sabha Election 2024 7th Phase
ಕೊನೆಯ ಹಂತದ ಲೋಕಸಭಾ ಚುನಾವಣೆ (ETV Bharat)

ಚುನಾವಣೆ ನಡೆಯಲಿರುವ ರಾಜ್ಯಗಳು: ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢ ರಾಜ್ಯದಲ್ಲಿ ಕೊನೆ ಹಂತದ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6ರ ವರೆಗೆ ನಡೆಯಲಿದೆ. ಈ ಹಂತದಲ್ಲಿ ಬಿಹಾರದಿಂದ 134, ಚಂಡೀಗಢದಿಂದ 19, ಹಿಮಾಚಲ ಪ್ರದೇಶದಿಂದ 37, ಜಾರ್ಖಂಡ್‌ನಿಂದ 52, ಒಡಿಶಾದಿಂದ 66, ಪಂಜಾಬ್‌ನಿಂದ 328, ಉತ್ತರ ಪ್ರದೇಶದಿಂದ 144, ಪಶ್ಚಿಮ ಬಂಗಾಳದಿಂದ 124 ಅಭ್ಯರ್ಥಿಗಳು ಸೇರಿದಂತೆ ಒಟ್ಟು 904 ಹುರಿಯಾಳುಗಳು ಕಣದಲ್ಲಿದ್ದಾರೆ.

Lok Sabha Election 2024 7th Phase
ಕೊನೆಯ ಹಂತದ ಲೋಕಸಭಾ ಚುನಾವಣೆ (ETV Bharat)

ಕ್ಷೇತ್ರಗಳು: ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ 13 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆದರೆ, ಪಶ್ಚಿಮ ಬಂಗಾಳದ 9, ​​ಬಿಹಾರದ 8, ಒಡಿಶಾದ 6, ಹಿಮಾಚಲ ಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ 1 ಸ್ಥಾನಕ್ಕೆ ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದು, ಇಡೀ ಚಿತ್ತ ಈ ಕ್ಷೇತ್ರದತ್ತ ನೆಟ್ಟಿದೆ. ಇವರಷ್ಟೇ ಅಲ್ಲದೇ ಹಾಲಿ ಸಂಸದರಾದ ರವಿಶಂಕರ್ ಪ್ರಸಾದ್, ಆರ್.ಕೆ.ಸಿಂಗ್, ಆರ್‌ಜೆಡಿ ಅಭ್ಯರ್ಥಿಗಳಾದ ಮಿಸಾ ಭಾರತಿ, ಸುರೇಂದ್ರ ಪ್ರಸಾದ್ ಯಾದವ್‌ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ: 'ಗಾಂಧಿ' ಸಿನಿಮಾಗೂ ಮುನ್ನ ಅವರು ಯಾರೆಂದು ಜಗತ್ತಿಗೆ ಗೊತ್ತಿರಲಿಲ್ಲ': ಮೋದಿ ಹೇಳಿಕೆಗೆ ಕಾಂಗ್ರೆಸ್‌ ಹಿಗ್ಗಾಮುಗ್ಗಾ ತರಾಟೆ - Congress Attacks PM Modi

Last Updated : May 31, 2024, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.