ಹೈದರಾಬಾದ್: ಹೈದರಾಬಾದ್ ಮಹಾನಗರ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ನಡೆಯುವ ಭೂ ಕಬಳಿಕೆಗಳಿಂದಾಗಿ ಅನೇಕ ಕೆರೆಗಳು ಕಣ್ಮರೆಯಾಗುತ್ತಿವೆ. ಕಂದಾಯ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಓಲೈಕೆ ಮಾಡುವ ಮೂಲಕ ಈ ರೀತಿ ನೂರಾರು ಕೋಟಿಯ ಭೂಮಿಗಳು ಒತ್ತುವರಿದಾರರ ಪಾಲಾಗುತ್ತಿದೆ ಎಂಬ ಆರೋಪಗಳು ಇಲ್ಲಿನ ಜನರಿಂದ ವ್ಯಕ್ತವಾಗುತ್ತವೆ.
ಕೆರೆಗಳಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಮನೆ, ಪ್ಲಾಟ್, ಉದ್ಯಮಗಳು ತಲೆ ಎತ್ತುತ್ತಿವೆ. ಇದೀಗ ಅದೇ ರೀತಿಯಲ್ಲಿ ರಾತ್ರೋ ರಾತ್ರಿ ಭೂಮಿ ಒತ್ತುವರಿ ಮಾಡಲು ಯತ್ನಿಸಿರುವ ಘಟನೆ ರಾಜೇಂದ್ರನಗರ ಕ್ಷೇತ್ರದ ಮಮಿಡಿಕುಂಟಾ ಕೆರೆಯಲ್ಲಿ ನಡೆದಿದೆ. ಬುಧವಾರ ರಾತ್ರಿ 8 ಗಂಟೆಯಿಂದ ಗುರುವಾರ ಬೆಳಗ್ಗೆ 4 ಗಂಟೆಯವರೆಗೆ ಐದು ಎಕರೆ ಕೆರೆ ಪ್ರದೇಶವನ್ನು 20 ಪ್ರೊಕ್ಲೈನರ್ ಮತ್ತು 40 ಟಿಪ್ಪರ್ಗಳು ಮರಳಿನಿಂದ ಮುಚ್ಚಿ ಹಾಕಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ಸ್ಥಳೀಯರು ಈ ಅಕ್ರಮ ತಡೆಯಲು ಮುಂದಾದರೂ ರೌಡಿಗಳ ಬೆದರಿಕೆಯಿಂದಾಗಿ ಅವರು ಹಿಂದೆ ಸರಿದಿದ್ದಾರೆ. ಜಿಎಚ್ಎಂಸಿ ಅಡಿ 185 ಹೊಂಡಗಳಿದ್ದವು, ಇನ್ನು ಎಚ್ಎಂಡಿಎ ಅಡಿ 3,500 ಹೊಂಡಗಳಿವೆ. ಇದರಲ್ಲಿ ಶೇ 50ರಷ್ಟು ಒತ್ತುವರಿದಾರರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎಲ್ಲ ಕೆರೆ, ಕೊಳದ ಸುತ್ತ ಎಫ್ಟಿಎಲ್ ಬೇಲಿ ಹಾಕುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೂ, ಇಲ್ಲಿಯವರೆಗೆ ಶೇ 25ರಷ್ಟು ಕೊಳಗಳನ್ನು ಕೂಡ ಗುರುತಿಸಲಾಗಿಲ್ಲ.
ರಾಜೇಂದ್ರನಗರ ಪ್ರದೇಶ: ರಾಜೇಂದ್ರನಗರ ಸರ್ಕಲ್ನಲ್ಲಿ ಕಳೆದೊಂದು ವರ್ಷದಿಂದ ಹಲವು ಎಕರೆ ಪ್ರದೇಶಗಳನ್ನು ಈ ರೀತಿ ಕಬಳಿಸಲಾಗಿದೆ. ಇದೇ ಸಂದರ್ಭದಲ್ಲಿ ಈ ಕುರಿತು ಸ್ಥಳೀಯರು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಇಡೀ ಸಂಪೂರ್ಣ ಪ್ರಕರಣದಲ್ಲಿ ಅನೇಕ ಕಾಣದ ಕೈಗಳು ಕೂಡ ಇದೆ ಎಂಬುದು ತಿಳಿದು ಬರುತ್ತದೆ. ಗುರುವಾರ ನಡೆದ ಹೊಂಡ ಒತ್ತುವರಿ ಪ್ರಕರಣ ಸಂಬಂಧ ಕೂಡ ಸ್ಥಳೀಯರು ದೂರಿದ್ದಾರೆ. ಆದರೆ, ಇದನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಮೈಲಾರ್ದೆವುಪಲ್ಲಿ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಧನುಂಜಯ್ ನೇತೃತ್ವದಲ್ಲಿ ಅಧಿಕಾರಿಗಳು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ಶಂಶಬಾದ್ ಪೊಲೀಸರು 2 ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಾಬುಲ್ ರೆಡ್ಡಿಯಲ್ಲಿನ ನರ್ಸಬಾಯಿ ಕುಂಟಾದ ಕಟೆಡಾನ್ನಲ್ಲಿ ಎರಡು ವರ್ಷದ ಹಿಂದೆ 22 ಎಕರೆ ಪ್ರದೇಶವನ್ನು ಹೊಂದಿತು. ಇಲ್ಲಿನ ಮಮಿಡಿಕುಂಟಾವನ್ನು ಒತ್ತುವರಿ ಮಾಡಿ, ಸಂಪೂರ್ಣ ಕೆರೆಯನ್ನು ಮಣ್ಣನ್ನು ಹಾಕಿ ಮುಚ್ಚಿ ಹಾಕಲಾಗಿದ್ದು, ಆ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿ ಮಾರಲಾಗಿದೆ.
ಕಟೆಡಾನ್ನಲ್ಲಿನ ಅಪ್ಪ ಕೊಳ ಕೂಡ 39 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಹಿಂದೆ ಈ ಕೊಳವೂ ಸಾವಿರಾರು ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತಿತ್ತು. ಈ ಪ್ರದೇಶವನ್ನು ಪ್ರವಾಹದಿಂದ ರಕ್ಷಿಸುತ್ತಿತ್ತು. ಆದರೆ, ಈ ಪ್ರದೇಶದ ಮೇಲೆ ಕಬಳಿಕೆದಾರರ ಕಣ್ಣು ಬಿದ್ದು, ಇದೀಗ ಈ ಕೊಳ ಕೇವಲ 12 ಎಕರೆಯಷ್ಟು ಉಳಿದು ಕೊಂಡಿದೆ. ಉಳಿದ ಜಾಗದಲ್ಲಿ ಮನೆ, ಫ್ಲಾಟ್ಗಳು ತಲೆ ಎತ್ತಿನಿಂತಿದೆ.
ಇದನ್ನೂ ಓದಿ: ಅತೀಂದ್ರಿಯ ಆಚರಣೆ: ಮೂಢನಂಬಿಕೆಯಿಂದ ಮಗುವಿನ ಕತ್ತು ಸೀಳಿದ ತಾಯಿ