ETV Bharat / bharat

ಮೊದಲ ಬಾರಿಗೆ ಮೊಬೈಲ್​ ನೆಟ್​ವರ್ಕ್​ಗೆ ಸಿಕ್ಕ ಹಿಮಾಚಲದ ಹಳ್ಳಿ; ಗ್ರಾಮಸ್ಥರಿಗೆ ಪ್ರಧಾನಿ ಮೋದಿ ಕರೆ! - Lahaul Spiti

ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಜಿಲ್ಲೆಯ ಗ್ಯು ಎಂಬ ಗ್ರಾಮಕ್ಕೆ ಮೊದಲ ಬಾರಿಗೆ ಮೊಬೈಲ್​ ನೆಟ್​ವರ್ಕ್ ಲಭ್ಯವಾಗಿದೆ.

Lahaul Spiti's Giu village people gets surprise call from PM Modi as hamlet gets mobile network for first time
ಮೊದಲ ಬಾರಿಗೆ ಮೊಬೈಲ್​ ನೆಟ್​ವರ್ಕ್​ಗೆ ಸಿಕ್ಕ ಹಿಮಾಚಲದ ಹಳ್ಳಿ; ಗ್ರಾಮಸ್ಥರಿಗೆ ಪ್ರಧಾನಿ ಮೋದಿ ಕಾಲ್​!
author img

By ETV Bharat Karnataka Team

Published : Apr 19, 2024, 10:59 PM IST

ಲಾಹೌಲ್ ಸ್ಪಿತಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಹಳ್ಳಿಯೊಂದಕ್ಕೆ ಮೊದಲ ಬಾರಿ ಮೊಬೈಲ್​ ನೆಟ್​ವರ್ಕ್​ ಲಭ್ಯವಾಗಿದ್ದು, ಈ ಗ್ರಾಮದ ಜನರಿಗೆ ಖುದ್ದು ಪ್ರಧಾನಿ ಮೋದಿ ಕರೆ ಮಾಡಿ, ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸಿ ಸುಮಾರು 15 ನಿಮಿಷಗಳ ಕಾಲ ಮಾತನಾಡಿದ್ದಾರೆ.

ಲಾಹೌಲ್ ಸ್ಪಿತಿ ಜಿಲ್ಲೆಯ ಗ್ಯು ಎಂಬ ಗ್ರಾಮಕ್ಕೆ ಇದುವರೆಗೂ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಗ್ರಾಮದಲ್ಲೇ ಮೊಬೈಲ್ ಟವರ್​ ಅಳವಡಿಸಲಾಗಿದ್ದು, ಇದೀಗ ಮೊಬೈಲ್ ನೆಟ್​ವರ್ಕ್ ಸಿಗುತ್ತಿದೆ. ಈ ನೆಟ್‌ವರ್ಕ್ ಗ್ರಾಮಕ್ಕೆ ಬಂದ ತಕ್ಷಣವೇ ಪ್ರಧಾನಿ ಮೋದಿ ಗ್ರಾಮದ ಮುಖ್ಯಸ್ಥರಿಗೆ ಕರೆ ಮಾಡಿದ್ದಾರೆ. ದೋರ್ಜೆ ಎಂಬ ಶಿಕ್ಷಕರಿಗೆ ಮೋದಿ ಕರೆ ಮಾಡಿ, ಇತರ ಗ್ರಾಮಸ್ಥರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಂದಾಜು 14 ನಿಮಿಷಗಳ ಕಾಲ ಪ್ರಧಾನಿ ಮತ್ತು ಗ್ರಾಮಸ್ಥರ ನಡುವೆ ಮಾತುಕತೆ ನಡೆದಿದ್ದು, ಇದು ಎಲ್ಲೆಡೆ ಚರ್ಚೆಯಾಗುತ್ತಿದೆ.

ಕಿನ್ನೌರ್ ಮತ್ತು ಲಾಹೌಲ್ ಸ್ಪಿತಿ ಜಿಲ್ಲೆಗಳ ಗಡಿಯಲ್ಲಿರುವ ಈ ಗ್ರಾಮವು ಸುಮಾರು 11,000 ಅಡಿ ಎತ್ತರದ ಪ್ರದೇಶದಲ್ಲಿದೆ. ಗ್ರಾಮದ ಜನರು ನೆಟ್‌ವರ್ಕ್ ಹುಡುಕಿಕೊಂಡು ಸುಮಾರು 7ರಿಂದ 8 ಕಿಲೋಮೀಟರ್ ದೂರ ಹೋಗಬೇಕಾಗಿತ್ತು. ಕಳೆದ ವರ್ಷ ದೀಪಾವಳಿ ಆಚರಿಸಲು ಪ್ರಧಾನಿ ಮೋದಿ ಕಿನ್ನೌರ್‌ಗೆ ಬಂದಿದ್ದರು. ಆ ಸಮಯದಲ್ಲಿ ಕೆಲವು ಗ್ರಾಮಸ್ಥರು ಈ ಸಮಸ್ಯೆಯನ್ನು ಪ್ರಧಾನಿಗೆ ತಿಳಿಸಿದ್ದರು ಎಂದು ಎನ್ನಲಾಗಿದೆ.

ಈ ವಿಷಯವನ್ನು ಖುದ್ದು ಮೋದಿ ಅವರೇ ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಇದೀಗ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ನಿಮ್ಮ ಗ್ರಾಮಕ್ಕೆ ಮೊಬೈಲ್ ನೆಟ್‌ವರ್ಕ್ ಬಂದಿದೆ. ದೀಪಾವಳಿ ಸಂದರ್ಭದಲ್ಲಿ ಬಂದಾಗ ಈ ಸಮಸ್ಯೆ ನನಗೆ ತಿಳಿಯಿತು. ಈಗ ನೆಟ್‌ವರ್ಕ್ ಬಂದ ನಂತರ ಹಳ್ಳಿಯ ಜನರು ತಮ್ಮ ಪರಿಚಯಸ್ಥರೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ ಎಂಬುವುದಾಗಿ ಪ್ರಧಾನಿ ತಿಳಿಸಿದ್ದಾರೆ ಎಂದು ಶಿಕ್ಷಕ ದೋರ್ಜೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ದೋರ್ಜೆ ಗ್ರಾಮಸ್ಥರ ಪರವಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಲಾಹೌಲ್ ಸ್ಪಿತಿ ಹಿಮಾಚಲ ಮಾತ್ರವಲ್ಲದೆ ದೇಶದ ಅತ್ಯಂತ ದುರ್ಗಮ ಜಿಲ್ಲೆಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹ. ಹಿಮಪಾತದ ಅವಧಿಯಲ್ಲಿ ಮೊದಲ ವರ್ಷದ ಸುಮಾರು 6 ತಿಂಗಳುಗಳ ಕಾಲ ಈ ಜಿಲ್ಲೆಯನ್ನು ದೇಶ ಮತ್ತು ಪ್ರಪಂಚದಿಂದ ಕಡಿತಗೊಳಿಸಲಾಗುತ್ತದೆ. ಅಟಲ್ ಸುರಂಗ ನಿರ್ಮಾಣದ ನಂತರ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಚಳಿಗಾಲದಲ್ಲಿ ಈ ಪ್ರದೇಶದ ತಾಪಮಾನವು ಮೈನಸ್ 30 ಡಿಗ್ರಿಗಳಿಗೆ ಇಳಿಯುತ್ತದೆ. ದೇಶಾದ್ಯಂತ ಬೇಸಿಗೆ ಕಾಲವಾಗಿರುವಾಗ ಈ ದಿನಗಳಲ್ಲಿಯೂ ಈ ಪ್ರದೇಶದಲ್ಲಿ ತಾಪಮಾನವು ಮೈನಸ್ 4ರಿಂದ ಮೈನಸ್ 5 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ.

ಇದನ್ನೂ ಓದಿ: ಅನಂತನಾಗ್-ರಾಜೌರಿಯಲ್ಲಿ ಕಣಕ್ಕಿಳಿಯದ ಬಿಜೆಪಿ; ಎನ್‌ಸಿ-ಪಿಡಿಪಿ ನೇರ ಸ್ಪರ್ಧೆ, ಯಾರಿಗೆ ಕಮಲ ಪಕ್ಷದ ಬೆಂಬಲ? - Jammu Kashmir BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.