ETV Bharat / bharat

ಬಿಜೆಪಿ ತೊರೆಯಲು ಕಾರಣ ಬಿಚ್ಚಿಟ್ಟ ವೀರಪ್ಪನ್ ಪುತ್ರಿ ವಿದ್ಯಾರಾಣಿ - Vidhya Veerappan

ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ವೀರಪ್ಪನ್ ಹಿರಿಯ ಪುತ್ರಿ ವಿದ್ಯಾರಾಣಿ ಸಂದರ್ಶನ ಇಲ್ಲಿದೆ.

ಬಿಜೆಪಿ ಪಕ್ಷದ ನೀತಿಗಳು ಇಷ್ಟವಾಗದ ಕಾರಣ ಪಕ್ಷ ತೊರೆದೆ: ವಿರಪ್ಪನ್ ಪುತ್ರಿ ವಿದ್ಯಾರಾಣಿ ಸಂದರ್ಶನ

author img

By ETV Bharat Karnataka Team

Published : Apr 15, 2024, 9:27 PM IST

Updated : Apr 15, 2024, 10:52 PM IST

ಕೃಷ್ಣಗಿರಿ(ತಮಿಳುನಾಡು): ವೀರಪ್ಪನ್ ಹಿರಿಯ ಪುತ್ರಿ ವಿದ್ಯಾರಾಣಿ ವೀರಪ್ಪನ್ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ನಾಮ್ ತಮಿಳರ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ವಿದ್ಯಾರಾಣಿ, 'ಈಟಿವಿ ಭಾರತ್'​ಗೆ ಸಂದರ್ಶನ ನೀಡಿದರು.

ಪ್ರಶ್ನೆ: ನಿಮ್ಮ ಚುನಾವಣಾ ಪ್ರಚಾರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?

ಉತ್ತರ: ಪ್ರಚಾರಕ್ಕೆ ಹೋದಾಗ ಜನ ನನ್ನನ್ನು ಸ್ವಂತ ಮಗಳಂತೆ ನೋಡುತ್ತಾರೆ. ತಂದೆ ಇಲ್ಲದಿರುವುದರಿಂದ ಜನರು ನನ್ನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಈ ಚುನಾವಣೆ ನನಗೆ ತುಂಬಾ ಅನುಕೂಲಕರವಾಗಿದೆ. ರಾಜಕೀಯವನ್ನು ಮೀರಿ ಜನರು ನನ್ನನ್ನು ಭಾವನಾತ್ಮಕವಾಗಿ ಮಗಳಾಗಿ ನೋಡುತ್ತಿದ್ದಾರೆ.

ಪ್ರಶ್ನೆ: ರಾಜಕೀಯ ಪ್ರವೇಶಿಸಿರುವ ನಿಮಗೆ ತಾಯಿ ಮತ್ತು ಸಹೋದರಿಯ ಬೆಂಬಲವಿದೆಯೇ?

ಉತ್ತರ: ಖಂಡಿತವಾಗಿಯೂ ನನ್ನನ್ನು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಅವರೂ ತಮಿಳು ರಾಷ್ಟ್ರೀಯತೆಯ ತತ್ವದಡಿಯಲ್ಲಿ ಬದುಕುತ್ತಿದ್ದಾರೆ.

ಪ್ರಶ್ನೆ: ಇತ್ತೀಚೆಗಷ್ಟೇ ವೀರಪ್ಪನ್ ಜೀವನ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ಇದು ಅವರ ಹಲವು ಮುಖಗಳನ್ನು ಅನಾವರಣಗೊಳಿಸಿತು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ತಂದೆ ವೀರಪ್ಪನ್ ಆ ದಿನಗಳಲ್ಲಿ ಕೆಲವು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದರು. ಆಗ ಹೇಳಿದ್ದನ್ನು ಇಂದಿನ ಜನರು ಅರ್ಥಮಾಡಿಕೊಳ್ಳಲು ದೇವರು ಸಾಧ್ಯವಾಗಿಸಿದ್ದಾನೆ. ತಂದೆಯ ವಿವಿಧ ಮುಖಗಳನ್ನು ಅನೇಕ ಜನರು ಕಂಡಿದ್ದಾರೆ. ಅವರನ್ನು ಒಂದು ಕಡೆಯಿಂದ ಕ್ರಿಮಿನಲ್​ ಆಗಿ, ಮತ್ತೊಂದು ಕಡೆಯಿಂದ ನಾಯಕನಂತೆ ಕಾಣುತ್ತಿದ್ದರು. ಆದರೆ ಇಂದು ಅವರು ಮಾಡಿದ ಪ್ರತಿಯೊಂದು ಕಾರ್ಯದ ಹಿಂದೆ ಒಂದು ಪ್ರಮುಖ ಕಾರಣವಿತ್ತೆಂಬುದು ಒಳ್ಳೆಯ ವಿಷಯ. ಅವರ ಯಾವುದೇ ಅಪರಾಧ ಕೃತ್ಯವನ್ನು ನಾನು ಸಮರ್ಥಿಸಿಕೊಳ್ಳಲಾರೆ.

ಪ್ರಶ್ನೆ: ನಿಮ್ಮ ಗೆಲ್ಲುವಿಗಿರುವ ಸಾಧ್ಯತೆಗಳೇನು?

ಉತ್ತರ: ಕ್ಷೇತ್ರದ ಪ್ರತಿಯೊಬ್ಬರೂ ನನಗೆ ಬೆಂಬಲ ನೀಡುತ್ತಿದ್ದು, ಮತ ಹಾಕಲು ಉತ್ಸುಕರಾಗಿದ್ದಾರೆ.

ಪ್ರಶ್ನೆ: ನೀವು ಕೆಲವು ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದೀರಿ, ನಂತರ ಪಕ್ಷ ತೊರೆಯಲು ಕಾರಣ?

ಉತ್ತರ: ಬಿಜೆಪಿ ರಾಷ್ಟ್ರೀಯ ಪಕ್ಷ, ಜನರಿಗೆ ಏನಾದರೂ ಒಳ್ಳೆಯದು ಮಾಡಬಹುದು ಎಂಬ ಭರವಸೆಯಿಂದ ನಾನು ಅಲ್ಲಿಗೆ ಹೋಗಿದ್ದೆ. ಸುಮಾರು ಒಂದೂವರೆ ವರ್ಷಗಳ ಕಾಲ ಚೆನ್ನಾಗಿತ್ತು. ನಂತರ ನಾನು ರಾಜಕಾರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಹಾಗಾಗಿ ನಾನು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೆ. ಈ ಬಾರಿ ಕೊನೆಯ ಕ್ಷಣದಲ್ಲಿ ಬಿಜೆಪಿ ಕೂಡ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ನೀಡಿತು. ಆದರೆ ಆ ಪಕ್ಷದ ನೀತಿಗಳು ಇಷ್ಟವಾಗದ ಕಾರಣ ಬಿಜೆಪಿ ತೊರೆದು ನಾಮ್ ತಮಿಳರ್​ ಪಕ್ಷಕ್ಕೆ ಸೇರಿಕೊಂಡೆ.

ಪ್ರಶ್ನೆ: ನೀವು ರಾಜಕೀಯದಿಂದಾಗಿ ಬಿಜೆಪಿ ತೊರೆದಿದ್ದೀರಿ ಎಂದು ಹೇಳುತ್ತೀರಿ. ನಾಮ್ ತಮಿಳರ್ ಪಕ್ಷದ ಯಾವ ನೀತಿ ನಿಮ್ಮನ್ನು ಆಕರ್ಷಿಸಿತು?

ಉತ್ತರ: ನಾವು ಮುಂದಿನ ಪೀಳಿಗೆಯನ್ನು ಉಳಿಸಲು ಬಯಸಿದರೆ, ಮರ-ಗಿಡ, ಮಣ್ಣು, ಭೂಮಿ ಮತ್ತು ನೀರಿ ಸೇರಿ ಪ್ರಕೃತಿಯನ್ನು ರಕ್ಷಿಸಬೇಕು. ಅದನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡಬೇಕು. ಮುಂದಿನ ಪೀಳಿಗೆಗೆ ನಾವು ಕಲಿಸಬೇಕಾದ ಪ್ರಕೃತಿಯನ್ನು ಪ್ರೀತಿಸುವ ತತ್ವಗಳು ನನ್ನನ್ನು ಆಕರ್ಷಿಸಿದವು.

ಪ್ರಶ್ನೆ: ಕೃಷ್ಣಗಿರಿ ಲೋಕಸಭಾ ಕ್ಷೇತ್ರಕ್ಕೆ ನಿಮ್ಮ ಭರವಸೆ ಏನು?

ಉತ್ತರ: ಬೆಂಗಳೂರು ಮೆಟ್ರೊ ರೈಲು ಸೇವೆಯನ್ನು ಹೊಸೂರಿಗೆ ವಿಸ್ತರಿಸಬೇಕು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಅದೇ ರೀತಿ ಹೊಸೂರಿನಲ್ಲಿಯೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಲು ಬಯಸುತ್ತೇನೆ. ಈ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಶೇ.80 ರಷ್ಟು ಉದ್ಯೋಗ ನೀಡಬೇಕು ಎಂಬ ಕಾನೂನು ರೂಪಿಸಬೇಕು ಎಂದು ನಾನು ಧ್ವನಿ ಎತ್ತುತ್ತೇನೆ.

ಇದನ್ನೂ ಓದಿ: 1200 ಜನರಿರುವ ದೊಡ್ಡದಾದ ಕುಟುಂಬದಲ್ಲಿದ್ದಾರೆ 350 ಮತದಾರರು!: ಇವರಿರುವುದು ಎಲ್ಲಿ ಗೊತ್ತಾ? - Assam family has nearly 350 voters

Last Updated : Apr 15, 2024, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.