ETV Bharat / bharat

ಪುತ್ರನ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಜಾಲತಾಣದಲ್ಲಿ ವೈರಲ್ ಆದ ಮುಖ್ತಾರ್​ ಅನ್ಸಾರಿ ವಿಷಪ್ರಾಶನದ ಪತ್ರ! - Mukhtar Ansari letter - MUKHTAR ANSARI LETTER

ಕುಖ್ಯಾತ ಡಾನ್ ಹಾಗೂ ಮಸಲ್ ಮ್ಯಾನ್ ಮುಖ್ತಾರ್ ಅನ್ಸಾರಿ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಈ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದರಿಂದ ಅವರ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಜಾಲತಾಣದಲ್ಲಿ ಮುಕ್ತಾರ್ ಅನ್ಸಾರಿ ವಿಷ ಪ್ರಾಶನದ ಪತ್ರ ವೈರಲ್ ಆಗಿದೆ.

ಮೃತ ಮುಖ್ತಾರ್ ಅನ್ಸಾರಿ
ಮೃತ ಮುಖ್ತಾರ್ ಅನ್ಸಾರಿ
author img

By ETV Bharat Karnataka Team

Published : Mar 29, 2024, 3:10 PM IST

ಲಖನೌ (ಉತ್ತರ ಪ್ರದೇಶ): ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್, ರಾಜಕಾರಣಿ, ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಗುರುವಾರ ಸಂಜೆ ನಿಧನರಾಗಿದ್ದು ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಆತನ ಕುಟುಂಬಸ್ಥರು, ಅವರಿಗೆ ವಿಷಪ್ರಾಶನ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆಯೂ ಅವರು ಆಗ್ರಹಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಜೈಲಿನಲ್ಲಿದ್ದಾಗ ಅವರು ವಿಷ ಸೇವಿಸಿರುವುದಾಗಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ತಾರ್ ಅವರ ಕಿರಿಯ ಪುತ್ರ ಒಮರ್ ಅನ್ಸಾರಿ ತಂದೆಯ ಸಾವಿನ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಮ್ಮ ತಂದೆಯನ್ನು ಜಿಲ್ಲಾ ಕಾರಾಗೃಹದಿಂದ ನೇರವಾಗಿ ಪ್ರತ್ಯೇಕ ಬ್ಯಾರಕ್‌ಗೆ ಹಾಕಿದ್ದಾರೆ. ಅಲ್ಲದೇ ನನ್ನ ತಂದೆ ತನ್ನ ದುಃಸ್ಥಿತಿಯ ಬಗ್ಗೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ತಿಳಿಸಿದ್ದರು. ರಾತ್ರಿ ಮಾಧ್ಯಮಗಳ ಮೂಲಕ ಈ ಸಾವಿನ ಸುದ್ದಿ ತಿಳಿಯಿತು. ಅವರ ಈ ಸಾವಿನ ಬಗ್ಗೆ ಪೊಲೀಸರು ಸಹ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇತ್ತೀಚೆಗಷ್ಟೇ ಅಪ್ಪನನ್ನು ನೋಡಲು ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಅವರು ತಮಗೆ ವಿಷ ನೀಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ವಕೀಲರ ಮೂಲಕ ಪತ್ರ ಬರೆದು ಕೋರ್ಟ್‌ಗೂ ತಿಳಿಸಿದ್ದರು. ಹಾಗಾಗಿ ಅವರ ಸಾವಿನ ಕುರಿತು ವ್ಯಕ್ತವಾದ ಅನುಮಾನ ಬಗೆಹರಿಸುವ ಸಲುವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜಕೀಯ ದ್ವೇಷ ಹಾಗೂ ಉದ್ದೇಶಪೂರ್ವಕವಾಗಿ ತಮ್ಮನ್ನು ಅಪರಾಧ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. 2005 ರಿಂದ ಜೈಲುವಾಸ ಅನುಭವಿಸುತ್ತಿರುವೆ. ಬಾಂದಾ ಜೈಲಿನಲ್ಲಿ ತಮಗೆ ಜೀವ ಬೆದರಿಕೆ ಇದೆ. ಆಹಾರದಲ್ಲಿ ವಿಷ ಪದಾರ್ಥ ಬೆರೆಸಿ ಕೊಲೆ ಮಾಡುವ ಪ್ರಯತ್ನ ನಡೆದಿದೆ. ಇದಕ್ಕೂ ಮೊದಲು ಜೈಲಿನಲ್ಲಿಯೇ ಎರಡು ಬಾರಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಅರ್ಜಿದಾರರ ಪರ ಅವರ ವಕೀಲರು ಈ ತಿಂಗಳ ಆರಂಭದಲ್ಲಿ ಕೋರ್ಟ್‌ನಲ್ಲಿ ಹೇಳಿದ್ದರು. ಈ ಮನವಿ ಪತ್ರ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.

ಹತ್ಯೆಗೆ ಸಂಚು ಆರೋಪ: ತಮ್ಮ ಹತ್ಯೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಒಬ್ಬರು ಸಂಚು ರೂಪಿಸಿರುವುದಾಗಿ ಅಂತಾರಾಷ್ಟ್ರೀಯ ಮೂಲಗಳಿಂದ ತಿಳಿದು ಬಂದಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದು, ಪತ್ರದಲ್ಲಿ ಹಲವರ ಹೆಸರು ಕೂಡ ಪ್ರಸ್ತಾಪ ಮಾಡಿದ್ದಾರೆ. ಅರ್ಜಿದಾರರ ಹತ್ಯೆ ಸಂಚನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಅದೇ ರೀತಿ ಸರ್ಕಾರದ ಷಡ್ಯಂತ್ರದ ಭಾಗವಾಗಿ ಆರೋಪಿ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನಾ ಬಜರಂಗಿಯನ್ನು ಜೈಲಿನೊಳಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಹೀಗೆ ಜೈಲಿನಲ್ಲಿ ಅನೇಕ ಜನರನ್ನು ಕೊಲ್ಲಲಾಗಿದೆ. ಅರ್ಜಿದಾರರ ಜೀವ ಉಳಿಸಬೇಕು. ಜೈಲು ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯ ಮತ್ತು ಅರ್ಜಿದಾರರ ಜೀವನದ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಮುಖ್ತಾರ್ ಅನ್ಸಾರಿ ಅವರ ಹಿರಿಯ ಸಹೋದರ ಸಿಬ್ಗತುಲ್ಲಾ ಅನ್ಸಾರಿ ಸೇರಿದಂತೆ ಮೃತ ಗ್ಯಾಂಗ್‌ಸ್ಟರ್‌ನ ಕುಟುಂಬದವರ ಆರೋಪದ ಕುರಿತು ತನಿಖೆ ನಡೆಸುವಂತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ. ಅವರ ಸಾವಿನ ಬಗ್ಗೆ ಮುಖ್ತಾರ್ ಅನ್ಸಾರಿ ಅವರ ಕುಟುಂಬವು ಮಾಡಿರುವ ಗಂಭೀರ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ. ಇದರಿಂದ ಅವರ ಸಾವಿನ ಕುರಿತ ಸತ್ಯಾಸತ್ತತೆಗಳು ಬೆಳಕಿಗೆ ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅನುಮಾನ ಇದು ಸಹಜ ಎಂದು ಮಾಯಾವತಿ ಟ್ವೀಟ್​​ ಮಾಡಿಕೊಂಡಿದ್ದಾರೆ.

ಆಧಾರರಹಿತ ಆರೋಪ ಎಂದ ಯುಪಿ ಮಾಜಿ ಡಿಜಿಪಿ: 'ವಿಷ ನೀಡಿ ಕೊಲ್ಲುತ್ತಿದ್ದಾರೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ. ಮರಣೋತ್ತರ ಪರೀಕ್ಷೆಯ ನಂತರ ಎಲ್ಲವೂ ಗೊತ್ತಾಗಲಿದೆ. ಅವರ ಸಾವು ಕುರಿತು ರಾಜ್ಯದಲ್ಲಿ ಕೆಲವು ವದಂತಿಗಳನ್ನು ಹರಡಲಾಗುತ್ತಿದೆ. ಹಾಗೂ ಹೈ ಅಲರ್ಟ್ ನೀಡಲಾಗಿದೆ. ವಿಶೇಷವಾಗಿ ಘಾಜಿಪುರ, ಮೌ, ಅಜಂಗಢ, ಜೌನ್‌ಪುರ್ ಮತ್ತು ವಾರಾಣಸಿಯಂತಹ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ವಿಷ ಸೇವಿಸಿದ್ದಾರೆ ಎಂಬ ಆರೋಪವು ಸಂಪೂರ್ಣವಾಗಿ ಆಧಾರರಹಿತ ಆರೋಪವಾಗಿದೆ. ಅವರ ಮೃತದೇಹವನ್ನು ಬಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅನ್ಸಾರಿ ಒಬ್ಬ ಕ್ರಿಮಿನಲ್, ಡಾನ್ ಮತ್ತು ಮಾಫಿಯಾ, ಮತ್ತು ಅವನ ಸಾವಿನ ಬಗ್ಗೆ ವ್ಯಾಪಕವಾಗಿ ಯೋಚಿಸಬಾರದು' ಎಂದು ಯುಪಿ ಮಾಜಿ ಡಿಜಿಪಿ ಒಪಿ ಸಿಂಗ್ ಅವರು ಹೇಳಿದ್ದಾರೆ.

ಮುಖ್ತಾರ್‌ ನಿಧನದ ಹಿನ್ನೆಲೆಯಲ್ಲಿ ಅವರ ನಿವಾಸ ಹಾಗೂ ಆಸ್ಪತ್ರೆಯ ಸುತ್ತ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಭಾರಿ ಸಂಖ್ಯೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 144 ಅಡಿ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಂಡಾ, ಮೌ, ಗಾಜಿಪುರ ಹಾಗೂ ವಾರಾಣಸಿ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಬಾಂಡಾದಲ್ಲಿ ಶವಪರೀಕ್ಷೆ ನಡೆಯಲಿದ್ದು, ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗುವುದು. ಸೋಷಿಯಲ್‌ ಮೀಡಿಯಾ ಸೆಲ್‌ ಸಹ ಸಕ್ರಿಯಗೊಳಿಸಲಾಗಿದೆ ಎಂದು ಲಖನೌದಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿಯ ಮೂಲಗಳು ತಿಳಿಸಿವೆ.

63 ವರ್ಷದ ಅನ್ಸಾರಿ ಸದರ್‌ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲು ಬಹುಜನ ಸಮಾಜ ಪಕ್ಷದಿಂದ ಶಾಸಕನಾಗಿದ್ದ ಅನ್ಸಾರಿ, 2002 ಮತ್ತು 2007ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ. 2012ರಲ್ಲಿ ಮೂವರು ಅನ್ಸಾರಿ ಸಹೋದರರು ಸೇರಿ ಕ್ವಾಮಿ ಏಕ್ತಾ ದಳ ಎಂಬ ಪಕ್ಷ ಸ್ಥಾಪಿಸಿದ್ದರು. 2016ರಲ್ಲಿ ಮತ್ತೆ ಬಿಎಸ್‌ಪಿ ಸೇರಿ, ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 60ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದರು.

ಇದನ್ನೂ ಓದಿ: ಹೃದಯಾಘಾತದಿಂದ ಮಾಫಿಯಾ ಡಾನ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.