ETV Bharat / bharat

'ಆಯಾ ರಾಮ್-ಗಯಾ ರಾಮ್': ನಿತೀಶ್‌ ಕುಮಾರ್‌ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ

ಮಹಾಘಟಬಂಧನದಿಂದ ನಿತೀಶ್ ಕುಮಾರ್ ನಿರ್ಗಮನದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಈ ರೀತಿ ನಡೆಯುತ್ತದೆ ಎಂಬುದು ನನಗೆ ಮೊದಲೇ ತಿಳಿದಿತ್ತು ಎಂದು ಹೇಳಿದರು.

ಕಲಬುರಗಿ  Kalaburagi  Mahagathbandhan  Mallikarjun Kharge  Nitish Kumar  ಮಹಾಘಟಬಂಧನ್‌  ನಿತೀಶ್ ಕುಮಾರ್  ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
author img

By ETV Bharat Karnataka Team

Published : Jan 28, 2024, 1:11 PM IST

ಕಲಬುರಗಿ: ಮಹಾಘಟಬಂಧನದಿಂದ ನಿತೀಶ್ ಕುಮಾರ್ ನಿರ್ಗಮಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ''ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ನಡೆಯುತ್ತದೆ ಎಂದು ನನಗೆ ಗೊತ್ತಿತ್ತು ಎಂದಿರುವ ಅವರು, "ದೇಶದಲ್ಲಿ ಆಯಾ ರಾಮ್-ಗಯಾ ರಾಮ್ ರೀತಿಯ ಅನೇಕ ಜನರಿದ್ದಾರೆ'' ಎಂದು ಟೀಕಿಸಿದರು.

"ಮೊದಲು ಅವರು ಮತ್ತು ನಾವು ಒಟ್ಟಿಗೆ ಜಗಳವಾಡುತ್ತಿದ್ದೆವು. ನಾನು ಲಾಲುಜಿ ಮತ್ತು ತೇಜಸ್ವಿ ಅವರೊಂದಿಗೆ ಮಾತನಾಡುವ ಸಮಯದಲ್ಲಿ ನಿತೀಶ್ ಹೋಗುತ್ತಿದ್ದರು. ಅವರು ಉಳಿಯಲು ಬಯಸಿದರೆ, ಅವರು ಉಳಿಯುತ್ತಿದ್ದರು. ಆದರೆ, ಅವರು ಹೋಗಬೇಕೆಂದೇ ಬಯಸುತ್ತಾರೆ. ಆದ್ದರಿಂದ ನಮಗೆ ಇದು ಮೊದಲೇ ತಿಳಿದಿತ್ತು. ಆದರೆ, ಇಂಡಿಯಾ ಮೈತ್ರಿಕೂಟವನ್ನು ಯಥಾಸ್ಥಿತಿಯಲ್ಲಿಡಲು ಪ್ರಯತ್ನ ಮಾಡುತ್ತಿದ್ದೆವು. ಈ ಮಾಹಿತಿಯನ್ನು ಈಗಾಗಲೇ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ನಮಗೆ ನೀಡಿದ್ದರು. ಇಂದು ನಿಜವಾಯಿತು'' ಎಂದರು.

  • #WATCH | On the resignation of Nitish Kumar as the CM of Bihar, Congress chief Mallikarjun Kharge says, " Bihar Dy CM (Tejashwi Yadav) and Lalu Prasad Yadav had hinted regarding this and today it became true. 'Aise desh mein bahut saare log hein, aaya ram gaya ram'..." pic.twitter.com/WB2J5ck7Zh

    — ANI (@ANI) January 28, 2024 " class="align-text-top noRightClick twitterSection" data=" ">

ಜನತಾ ದಳ (ಯುನೈಟೆಡ್) ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಭಾನುವಾರ ಪಾಟ್ನಾದ ರಾಜಭವನಕ್ಕೆ ಆಗಮಿಸಿ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ನೀಡಿದರು. ನಿತೀಶ್ ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಮರುಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೈತ್ರಿಕೂಟದ ಆಡಳಿತಕ್ಕೆ ಅಂತ್ಯ ಹಾಡಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದ ನಡುವೆ, ಪಾಟ್ನಾದ ಪಕ್ಷದ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಆರ್‌ಜೆಡಿ ಭಾನುವಾರ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತು ನೀಡಿದ್ದು, ಜನತಾ ದಳ (ಯುನೈಟೆಡ್) ಮುಖ್ಯಸ್ಥರನ್ನು ಹೊರಗಿಟ್ಟು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಮಾತ್ರ ಬಿಂಬಿಸಲಾಗಿತ್ತು. ಪೂರ್ಣ ಪುಟದ ಜಾಹೀರಾತಿನಲ್ಲಿ, ತೇಜಸ್ವಿಯವರ ದೊಡ್ಡ ಚಿತ್ರವನ್ನು ಮಾತ್ರ ಹಾಕಲಾಗಿತ್ತು.

ಬಿಹಾರ ವಿಧಾನಸಭೆ ಬಲಾಬಲ: ಬಿಹಾರ ವಿಧಾನಸಭೆಯ ಒಟ್ಟು 243 ಸ್ಥಾನಗಳ ಪೈಕಿ, ಆರ್​ಜೆಡಿ 79 ಶಾಸಕರನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಬಿಜೆಪಿ 78, ಜೆಡಿ(ಯು) 45, ಕಾಂಗ್ರೆಸ್ 19, ಸಿಪಿಐ (ಎಂಎಲ್) 12, ಸಿಪಿಐ(ಎಂ) ಮತ್ತು ಸಿಪಿಐ ತಲಾ 2 ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) 4, ಎಐಎಂಐಎಂ -2, ಸ್ವತಂತ್ರ- 1 ಸ್ಥಾನ ಇದೆ.

ಇದನ್ನೂ ಓದಿ: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಬಿಜೆಪಿ ಜೊತೆ ಹೊಸ ಸರ್ಕಾರ, ಸಂಜೆ ಪ್ರಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.