ETV Bharat / bharat

ವಯನಾಡ್ ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಮಾಡಿ, ಪರಿಹಾರ ಹಣ ಸಾಲಕ್ಕೆ ಸೇರಿಸಬೇಡಿ: ಕೇರಳ ಸಿಎಂ - Wayanad Landslide - WAYANAD LANDSLIDE

ವಯನಾಡ್ ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಮಾಡುವಂತೆ ಬ್ಯಾಂಕ್‌ಗಳಿಗೆ ಕೇರಳ ಸಿಎಂ ಮನವಿ ಮಾಡಿದ್ದಾರೆ. ಜೊತೆಗೆ, ಆ ಹಣವನ್ನು ಸರ್ಕಾರದಿಂದಲೂ ನಿರೀಕ್ಷಿಸಬೇಡಿ ಎಂದೂ ಹೇಳಿದ್ದಾರೆ.

ಕೇರಳ ಸಿಎಂ
ಕೇರಳ ಸಿಎಂ (ETV Bharat)
author img

By PTI

Published : Aug 19, 2024, 9:28 PM IST

ತಿರುವನಂತಪುರಂ(ಕೇರಳ): ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ ಜೀವ ಮತ್ತು ಜೀವನವನ್ನೇ ಕಿತ್ತುಕೊಂಡಿದೆ. ದುರಂತದಲ್ಲಿ ಬದುಕುಳಿದವರು ಮನೆ, ಆಸ್ತಿ, ಬಂಧುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ, ಮಾಡಿರುವ ಸಾಲವನ್ನು ಕಟ್ಟುವಂತೆ ಬ್ಯಾಂಕ್​ಗಳು ಪೀಡಿಸುತ್ತಿವೆ. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕೇರಳ ಸರ್ಕಾರ ಸಂಪೂರ್ಣ ಸಾಲ ಮನ್ನಾ ಮಾಡಲು ಬ್ಯಾಂಕ್​​ಗಳಿಗೆ ಕೋರಿದೆ.

ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರು ಮತ್ತು ಬದುಕುಳಿದ ಕುಟುಂಬಗಳು ಬ್ಯಾಂಕ್​ಗಳಲ್ಲಿ ಮಾಡಿದ ಸಾಲದ ಮಾಸಿಕ ಕಂತನ್ನು ಕೆಲ ಬ್ಯಾಂಕ್​ಗಳು ಕಡಿತ ಮಾಡಿವೆ. ಉಳಿದ ಕಂತುಗಳ ಹಣ ಪಾವತಿಸಲು ಸೂಚಿಸಿವೆ. ಬ್ಯಾಂಕ್‌ಗಳ ಈ ನಡೆಗೆ ಕೇರಳ ಸರ್ಕಾರ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತಾಗಿ ಇಂದು ಬ್ಯಾಂಕರ್​ಗಳ ಸಮಿತಿ ನಡೆಸಿದ ಸಿಎಂ ಪಿಣರಾಯಿ ವಿಜಯನ್​​, ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಬಡ್ಡಿ ಮೊತ್ತ, ಅಥವಾ ಮಾಸಿಕ ಕಂತುಗಳ ಕಡಿತ, ಹಣ ಪಾವತಿಗೆ ಸಮಯ ವಿಸ್ತರಣೆ ಮಾಡುವುದು ಸಂತ್ರಸ್ತರಿಗೆ ನೀಡುವ ಪರಿಹಾರವಲ್ಲ. ಅದರ ಬದಲು ಅವರು ಪಡೆದುಕೊಂಡ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಹೇಳಿದರು.

ಕಳೆದುಕೊಂಡವರ ಬಳಿ ಕೇಳಬಾರದು: ಸಾಲ ಪಡೆದವರಲ್ಲಿ ಹಲವರು ಮೃತಪಟ್ಟಿದ್ದಾರೆ. ಅವರ ಜಮೀನು ವಿಕೋಪಕ್ಕೆ ವಿರೂಪವಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ನೆರವಾಗಲು ನಾವು ದೃಢ ನಿರ್ಧಾರ ಕೈಗೊಳ್ಳಬೇಕಿದೆ. ದುರಂತದಲ್ಲಿ ಜೀವ ಉಳಿಸಿಕೊಂಡವರ ಸಾಲದಲ್ಲಿ ಬ್ಯಾಂಕ್‌ಗಳು ಮಾಸಿಕ ಕಂತನ್ನು ಕಡಿತಗೊಳಿಸಿ, ಉಳಿದ ಹಣ ಕಟ್ಟಲು ಸೂಚಿಸಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುರಂತದಲ್ಲಿ ಪ್ರಾಣದ ಜೊತೆಗೆ ಜಮೀನು, ಮನೆ ಎಲ್ಲವೂ ನಾಶವಾಗಿದೆ. ಅಳಿದುಳಿದ ಪ್ರದೇಶದಲ್ಲಿ ಜನರು ಮತ್ತೆ ಜೀವನ ಕಟ್ಟಿಕೊಳ್ಳಬೇಕಿದೆ. ಭೂಕುಸಿತದಿಂದ ಅಲ್ಲಿನ ಕೃಷಿ ಭೂಮಿಯ ಭೌಗೋಳಿಕ ವ್ಯವಸ್ಥೆಯೇ ಬದಲಾಗಿದೆ. ಹಾನಿಗೊಳಗಾದ ಸ್ಥಳಗಳು ನಿರುಪಯುಕ್ತವಾಗಿವೆ. ಈ ಪ್ರದೇಶಗಳಲ್ಲಿ ಯಾವುದೇ ಕೃಷಿ ಮಾಡಲೂ ಸಾಧ್ಯವಿಲ್ಲ. ಸಾಲ ಮಾಡಿ ಕಟ್ಟಿದ ಮನೆಯೂ ಈಗ ಇಲ್ಲವಾಗಿದೆ. ಈಗ ಅವರೆಲ್ಲರೂ ಕಂತು ಕಟ್ಟುವ ಸ್ಥಿತಿಯಲ್ಲಿಲ್ಲ ಎಂದು ಸಿಎಂ ಬ್ಯಾಂಕ್​​ಗಳ ಗಮನಕ್ಕೆ ತಂದರು.

ಸಾಲ ಮನ್ನಾ ಮಾಡಿದ ನಂತರ ಬ್ಯಾಂಕ್‌ಗಳು ಸಾಮಾನ್ಯವಾಗಿ ಆ ಮೊತ್ತವನ್ನು ಸರ್ಕಾರ ಪಾವತಿಸಬೇಕೆಂದು ನಿರೀಕ್ಷಿಸುತ್ತವೆ. ಈ ವಿಷಯದಲ್ಲಿ ಬ್ಯಾಂಕ್‌ಗಳು ಅಂತಹ ನಿಲುವಿಗೆ ಬರಬಾರದು. ಬ್ಯಾಂಕ್‌ಗಳೇ ಈ ಮೊತ್ತವನ್ನು ಭರಿಸಬೇಕೆಂದು ಒತ್ತಾಯಿಸಿದರು.

ಪರಿಹಾರ ಮೊತ್ತವೂ ಸಾಲಕ್ಕೆ ಸೇರ್ಪಡೆ: ಭೂಕುಸಿತದಲ್ಲಿ ಬದುಕುಳಿದವರ ಸಾಲದಲ್ಲಿ ಮಾಸಿಕ ಕಂತುಗಳನ್ನು ಕಡಿತಗೊಳಿಸಿ, ಉಳಿದ ಹಣ ಪಾವತಿಗೆ ಕೇರಳ ಗ್ರಾಮೀಣ ಬ್ಯಾಂಕ್ ಸೂಚಿಸಿದೆ. ಇದರ ವಿರುದ್ಧ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕೆಲ ಬ್ಯಾಂಕ್​​ಗಳು ಮಾನವೀಯತೆ ಮರೆತು ಸರ್ಕಾರ ನೀಡಿದ ಪರಿಹಾರದ ಹಣವನ್ನೂ ಸಾಲದ ಮೊತ್ತದಲ್ಲಿ ಕಡಿತ ಮಾಡಿದ್ದಾರೆ.

ಸರ್ಕಾರವು ಬದುಕುಳಿದವರಿಗೆ ಅವರ ತಕ್ಷಣದ ಅಗತ್ಯಗಳನ್ನು ಪೂರೈಸಲು ಪರಿಹಾರದ ಮೊತ್ತವನ್ನು ಒದಗಿಸಿದೆ. ಸಂತ್ರಸ್ತರು ಹೊಂದಿರುವ ಬ್ಯಾಂಕ್​​ ಖಾತೆಗಳಿಗೆ ಹಣವನ್ನು ಪಾವತಿಸಲಾಗಿದೆ. ಅದನ್ನು ಸಾಲದಲ್ಲಿ ಮುರಿದುಕೊಳ್ಳಲಾಗಿದೆ. ಇಂತಹ ಕ್ರಮ ಈಗಿನ ಪರಿಸ್ಥಿತಿಗೆ ತರವಲ್ಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ವಯನಾಡ್ ಭೂಕುಸಿತ ಸಂತ್ರಸ್ತರ ಎಲ್ಲ ರೀತಿಯ ಸಾಲ ಮನ್ನಾ: ಕೇರಳ ಬ್ಯಾಂಕ್​ ಘೋಷಣೆ - Kerala Bank Waives Loans

ETV Bharat Logo

Copyright © 2024 Ushodaya Enterprises Pvt. Ltd., All Rights Reserved.