ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 2024ರ ಮೊದಲಾರ್ಧದಲ್ಲಿ ನಡೆದಿರುವ ಭಯೋತ್ಪಾದಕ ಘಟನೆಗಳ ಕುರಿತ ದತ್ತಾಂಶವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕಟಿಸಿದ್ದಾರೆ. ಹಿಂದಿನ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಘಟನೆಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಜೂನ್‌ನಲ್ಲಿ ಉಗ್ರಗಾಮಿ ಘಟನೆಗಳು ಗಮನಾರ್ಹವಾಗಿ ಏರಿಕೆ ಕಂಡಿರುವುದು ಭದ್ರತಾ ಪಡೆಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಜನವರಿ 2024ರಲ್ಲಿ ಒಬ್ಬ ಉಗ್ರಗಾಮಿ ಹತ್ಯೆ ಹಾಗೂ ಒಂದು ಘಟನೆ ವರದಿಯಾಗಿತ್ತು. ಫೆಬ್ರವರಿಯಲ್ಲಿ ಎರಡು ಘಟನೆಗಳು ನಡೆದಿದ್ದವು. ಆಗ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಮಾರ್ಚ್, ಫೆಬ್ರವರಿಯನ್ನು ಎರಡು ಘಟನೆಗಳು ನಡೆದಿದ್ದು, ಮತ್ತೆ ನಾಗರಿಕ ಸಾವು- ನೋವುಗಳಿಗೆ ಕಾರಣವಾಗಿತ್ತು. ಏಪ್ರಿಲ್ನಲ್ಲಿ ಆರು ಘಟನೆಗಳು ನಡೆದಿದ್ದವು. ಈ ವೇಳೆ ಮೂವರು ನಾಗರಿಕರು ಹಾಗೂ ನಾಲ್ಕು ಭಯೋತ್ಪಾದಕರ ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ದತ್ತಾಂಶ ಬಹಿರಂಗಪಡಿಸುತ್ತದೆ.
ಮೇ ತಿಂಗಳಲ್ಲಿ ಐದು ಘಟನೆಗಳು ನಡೆದಿದ್ದು, ಇದರ ಪರಿಣಾಮ ಒಬ್ಬ ನಾಗರಿಕ ಸಾವು, ಒಬ್ಬ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ ಮತ್ತು ಐದು ಉಗ್ರಗಾಮಿಗಳು ಸಾವನ್ನಪ್ಪಿದ್ದರು. ಆದಾಗ್ಯೂ, ಜೂನ್ ತಿಂಗಳಲ್ಲಿ ಏಳು ಘಟನೆಗಳು ವರದಿಯಾಗಿದ್ದು, ಒಂಬತ್ತು ನಾಗರಿಕರು ಸಾವು, ಒಬ್ಬ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ ಹಾಗೂ ಎಂಟು ಉಗ್ರಗಾಮಿಗಳ ಹತ್ಯೆ ಮಾಡಲಾಗಿತ್ತು. ಜೂನ್ ಅನ್ನು ಇದುವರೆಗಿನ ವರ್ಷದ ಅತ್ಯಂತ ಮಾರಣಾಂತಿಕ ತಿಂಗಳಾಗಿದ್ದು, ಒಟ್ಟು 18 ಸಾವುಗಳು ಸಂಭವಿಸಿವೆ. ಇದನ್ನು ಹಿಂದಿನ ವರ್ಷಗಳಿಗೆ ಹೋಲಿಸಿದರೆ, 2023 ರ ಮೊದಲಾರ್ಧದಲ್ಲಿ ಒಂಬತ್ತು ನಾಗರಿಕರು, 12 ಭದ್ರತಾ ಪಡೆಗಳ ಸಿಬ್ಬಂದಿ ಹುತಾತ್ಮ ಮತ್ತು 29 ಉಗ್ರಗಾಮಿಗಳು ಸೇರಿದಂತೆ 51 ಸಾವುಗಳೊಂದಿಗೆ 29 ಭಯೋತ್ಪಾದಕ ದಾಳಿಯ ಘಟನೆಗಳು ವರದಿಯಾಗಿದ್ದವು.
ಇದಕ್ಕೆ ವ್ಯತಿರಿಕ್ತವಾಗಿ, 2024ರ ಮೊದಲಾರ್ಧದಲ್ಲಿ 22 ಘಟನೆಗಳು ನಡೆದಿದ್ದು, ಹೆಚ್ಚಿನ ಪ್ರಮಾಣದ ನಾಗರಿಕ ಸಾವು - ನೋವುಗಳು ವರದಿಯಾಗಿವೆ. 17 ನಾಗರಿಕರು ಸಾವು, ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ ಹಾಗೂ 18 ಉಗ್ರರನ್ನು ಒಳಗೊಂಡ ಒಟ್ಟು ಸಾವಿನ ಸಂಖ್ಯೆ 37 ಆಗಿದೆ. 2023ರಲ್ಲಿ 29 ರಿಂದ 2024ರಲ್ಲಿ 22ಕ್ಕೆ ಒಟ್ಟಾರೆ ಘಟನೆಗಳ ಕುಸಿತವು ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕೆಲವು ಸುಧಾರಣೆಗಳು ಆಗಿವೆ. ಆದರೆ, ಹೆಚ್ಚಿದ ನಾಗರಿಕರ ಸಾವಿನ ಸಂಖ್ಯೆ, ಅದರಲ್ಲೂ ನಿರ್ದಿಷ್ಟವಾಗಿ ಜೂನ್‌ನಲ್ಲಿ ತೀವ್ರ ಏರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಜೂನ್ ಅಂಕಿ - ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ನಾಗರಿಕ ಸಾವು - ನೋವುಗಳಿಂದ ಉಂಟಾಗುವ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು, ಈ ತಿಂಗಳಲ್ಲಿ ಘಟನೆಗಳ ಹೆಚ್ಚಳವು ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಮತ್ತು ಉಗ್ರಗಾಮಿ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಹೊಸ ಕ್ರಮಗಳನ್ನು ಕೈಗೊಂಡಿದ್ದಾರೆ. "ಕಳೆದ ತಿಂಗಳು ಲೋಕಸಭೆ ಚುನಾವಣೆ ಮತ್ತು ನಡೆಯುತ್ತಿರುವ 2024ರ ಅಮರನಾಥ ಯಾತ್ರೆ ಬಹು ಹಂತದ ಭದ್ರತಾ ವ್ಯವಸ್ಥೆಗಳು ಅಗತ್ಯವಾಗಿದೆ. ಜೊತೆಗೆ, ಹೈಟೆಕ್ ತಂತ್ರಜ್ಞಾನದ ಸಹಾಯಗಳನ್ನು ಬಳಸಲಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ಜೂನ್‌ನಲ್ಲಿ ಎಂಟು ಉಗ್ರರು ಮತ್ತು ಒಂಬತ್ತು ನಾಗರಿಕರು ಸೇರಿದಂತೆ 18 ಸಾವುನೋವುಗಳ ವರದಿಯಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಭದ್ರತಾ ಪಡೆಗಳ ಜಂಟಿ ಪ್ರಯತ್ನದಿಂದ ಭಯೋತ್ಪಾದಕ ಘಟನೆಗಳು ಮತ್ತು ಸಾವು - ನೋವುಗಳಲ್ಲಿ ಕುಸಿತವಾಗಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಯೋತ್ಪಾದಕ ಕೃತ್ಯಗಳನ್ನು ಎದುರಿಸಲು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಇಸ್ರೇಲ್ ಮತ್ತು ಜರ್ಮನಿಯಿಂದ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ'' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
2020ರ ಮೊದಲಾರ್ಧದಲ್ಲಿ 72 ಭಯೋತ್ಪಾದಕ ಘಟನೆಗಳು ಮತ್ತು 178 ಸಾವಿನ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 51 ಘಟನೆಗಳು ಮತ್ತು 100 ಸಾವುಗಳು ಸಂಭವಿಸಿದ್ದವು. ಆದರೆ, 2022 ರಲ್ಲಿ 97 ಘಟನೆಗಳು ಹಾಗೂ 169 ಸಾವಿನ ಪ್ರಕರಣಗಳು ವರದಿಯಾಗಿದ್ದವು. 2023ರ ಮೊದಲಾರ್ಧದಲ್ಲಿ 29 ಘಟನೆಗಳು, 51 ಸಾವುಗಳು ಸಂಭವಿಸಿದ್ದವು. 2024ರಲ್ಲಿ ಇಲ್ಲಿಯವರೆಗೆ 22 ಘಟನೆಗಳು ನಡೆದಿದ್ದು, 37 ಸಾವುಗಳು ವರದಿಯಾಗಿವೆ'' ಎಂದು ಅವರು ಮಾಹಿತಿ ನೀಡಿದ್ದಾರೆ.
ವರ್ಷವಾರು ಭಯೋತ್ಪಾದಕ ಘಟನೆಗಳು, ಸಾವಿನ ಪ್ರಕರಣಗಳ ಕುರಿತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಾಹಿತಿ:
ತಿಂಗಳು | ಘಟನೆಗಳಲ್ಲಿ ಮೃತಪಟ್ಟರು | ನಾಗರಿಕರು | ಭದ್ರತಾ ಸಿಬ್ಬಂದಿ | ಉಗ್ರಗಾಮಿಗಳು | ಅಪರಿಚಿತರು | ಒಟ್ಟು ಸಾವುಗಳು |
January | 1 | 0 | 0 | 1 | 0 | 1 |
February | 2 | 2 | 0 | 0 | 0 | 2 |
March | 1 | 2 | 0 | 0 | 0 | 2 |
April | 6 | 3 | 0 | 4 | 0 | 7 |
May | 5 | 1 | 1 | 5 | 0 | 7 |
June | 7 | 9 | 1 | 8 | 0 | 18 |
Total | 22 | 17 | 2 | 18 | 0 | 37 |
ವರ್ಷ | ಘಟನೆಗಳಲ್ಲಿ ಮೃತಪಟ್ಟರು | ನಾಗರಿಕರು | ಭದ್ರತಾ ಸಿಬ್ಬಂದಿ | ಉಗ್ರಗಾಮಿಗಳು | ಅಪರಿಚಿತರು | ಒಟ್ಟು ಸಾವುಗಳು |
2020 | 72 | 13 | 31 | 134 | 0 | 178 |
2021 | 51 | 12 | 16 | 72 | 0 | 100 |
2022 | 97 | 20 | 19 | 130 | 0 | 169 |
2023 | 29 | 9 | 12 | 29 | 1 | 51 |
2024 | 22 | 17 | 2 | 18 | 0 | 37 |
Total | 271 | 71 | 80 | 383 | 1 | 535 |
ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನಗಳಡಿ ಯುಪಿಯಲ್ಲಿ ಮೊದಲ ಪ್ರಕರಣ ದಾಖಲು - New Criminal Law