ETV Bharat / bharat

ಜಪಾನ್​ನಲ್ಲಿ ಐಟಿ ಇಂಜಿನಿಯರ್​ಗಳ ಕೊರತೆ, ಭಾರತೀಯ ಪ್ರತಿಭೆಗಳ ಮೇಲೆ ಕಣ್ಣು - Japan hiring indians - JAPAN HIRING INDIANS

ಜಪಾನ್​​ ಐಟಿ ಇಂಜಿನಿಯರಿಂಗ್​​ ಕೊರತೆ ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದ ಇಂಜಿನಿಯರ್​​ಗಳಿಗೆ ದೇಶದಲ್ಲಿ ಅವಕಾಶ ಸೃಷ್ಟಿಸಲಾಗುವುದು ಎಂದಿದ್ದಾರೆ.

japan-hiring-indians-because-their-facing-it-engineer-shortage
ಜೆಇಟಿಆರ್​ಇಒ ಪ್ರಧಾನ ನಿರ್ದೇಶಕ ತೊಶಿರೊ ಮಿಜುಟನಿ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 26, 2024, 12:57 PM IST

ಹೈದರಾಬಾದ್​: ಐಐಟಿ ಹೈದರಾಬಾದ್​ನ ಜಪಾನ್​ ಕೆರಿಯರ್​ ಡೇ -2024ರಲ್ಲಿ ಆಚರಣೆ ಮಾಡಲಾಗಿದ್ದು, ಪ್ರತಿಷ್ಟಿತ ಜಪಾನಿ ಕಂಪನಿಗಳು ಭಾಗಿಯಾಗಿದ್ದು, ಐಐಟಿ ಎಚ್​ನ ವಿದ್ಯಾರ್ಥಿಗಳಿಗೆ ಅಲ್ಲಿಯೇ ಇಂಟರ್ನ್​ಶಿಪ್​ ಅವಕಾಶ ಒದಗಿಸಲಾಗಿದೆ.

ಐಐಟಿಎಚ್​ನಲ್ಲಿ 2018ರಿಂದ ಜಪಾನ್​ ವಿದೇಶಿ ವ್ಯಾಪಾರ ಸಂಘಟನೆಯಿಂದ (ಜೆಇಟಿಆರ್​ಒ) ಪ್ರತಿ ವರ್ಷ ಈ ದಿನಾಚರಣೆ ನಡೆಸಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಆಚರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ವೃತ್ತಿಗೆ ಅವಕಾಶವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ 18 ಜಪಾನಿ ಕಂಪನಿಗಳು ಪ್ರತಿನಿಧಿಗಳು ಭಾಗಿಯಾಗಿದ್ದವು. ಈ ವೇಳೆ, ಜಪಾನಿನ ಕಂಪನಿಗಳು ತಮ್ಮ ಸಂಸ್ಥೆಗಳಿಗೆ ಸೇರುವುದರಿಂದ ಆಗಲಿರುವ ಪ್ರಯೋಜನ ಏನು ಎಂಬ ಕುರಿತು ಆಳವಾಗಿ ವಿವರಣೆ ಮಾಡಿದವು. ಅಲ್ಲದೇ, 9 ಕಂಪನಿಗಳು ಇಂಟರ್ನ್​ಶಿಪ್​ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಮುಖಾಮುಖಿ ಸಂದರ್ಶನ ನಡೆಸಿದವು.

ಜೆಇಟಿಆರ್​ಇಒ ಪ್ರಧಾನ ನಿರ್ದೇಶಕ (ಬೆಂಗಳೂರು) ತೊಶಿರೊ ಮಿಜುಟನಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗಿಯಾದ ಕಂಪನಿಗಳಲ್ಲಿ ಎಂಟು ಮಲ್ಟಿನ್ಯಾಷನಲ್​ ಕಾರ್ಪೊರೇಷನ್ಸ್​​, ಐದು ಮೈಕ್ರೋ ಮತ್ತು ಮಧ್ಯಮ ಎಂಟರ್​ಪ್ರೈಸೆಸ್​ ಮತ್ತು ಐದು ಸಣ್ಣ ಕಂಪನಿಗಳಾಗಿವೆ. ಜಪಾನ್​ ಐಟಿ ಇಂಜಿನಿಯರಿಂಗ್​​ ಕೊರತೆ ಎದುರಿಸುತ್ತಿದ್ದು, ಈ ಹಿನ್ನಲೆ ಭಾರತದ ಇಂಜಿನಿಯರಿಂಗ್​ಗಳಿಗೆ ಅವಕಾಶ ಸೃಷ್ಟಿಸಲಾಗುವುದು ಎಂದಿದ್ದಾರೆ. ತಮ್ಮ ಸಂಸ್ಥೆಗಳಲ್ಲಿ ಐಐಟಿ ಹೈದರಾಬಾದ್​ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ತುದಿಗಾಲಲ್ಲಿ ಇದ್ದೇವೆ. ಕೌಶಲ್ಯ ಮತ್ತು ಜ್ಞಾನವೂ ಹೊಸ ಅವಿಷ್ಕಾರಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದೇವೆ.

ಐಐಟಿ ಹೈದರಾಬಾದ್​ನ ನಿರ್ದೇಶಕ ಪ್ರೊ ಬಿಎಸ್​ ಮೂರ್ತಿ ಮಾತನಾಡಿ. ಐಐಟಿಎಚ್​ ಮತ್ತು ಜಪಾನ್​ ನಡುವಿನ ಬಲವಾದ ಬಂಧದ ಕುರಿತು ಒತ್ತು ಹೇಳುತ್ತದೆ. ಜಪಾನ್​ ದಿನ 2018ರಿಂದ ವಾರ್ಷಿಕ ಸಮಾರಂಭವಾಗಿ ಆಚರಿಸಲಾಗುತ್ತಿದೆ. ಪ್ರಮುಖ ಜಪಾನಿ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆ ತಂದಿದೆ. ಇದು ಐಐಟಿಎಚ್​ನ ವಿದ್ಯಾರ್ಥಿಗಳಿಗೆ ಮೌಲ್ಯಯುತ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.

ಜಾಗತಿಕ ಸ್ಪರ್ಧೆಗಾಗಿ ಉತ್ಪಾದನೆ ಮತ್ತು ತಂತ್ರಜ್ಞಾನ ಉತ್ತಮಗೊಳಿಸಲು ಭಾರತದ ಪ್ರಮುಖ ಪ್ರತಿಭೆಗಳನ್ನು ನೇಮಕಾತಿ ಮಾಡಲು ಕಳೆದ ವರ್ಷ 20 ಜಪಾನ್​ ಸಂಸ್ಥೆಗಳು ಮುಂದಾಗಿದ್ದವು.

ಇದನ್ನೂ ಓದಿ: ತುಮಕೂರು ಬಳಿ ವಾಹನ ಬಿಡಿಭಾಗ ತಯಾರಿಸುವ ಘಟಕ ಸ್ಥಾಪನೆಗೆ ಜಪಾನಿನ ಕಂಪನಿಯಿಂದ ಸಹಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.