ETV Bharat / bharat

370ನೇ ವಿಧಿ ಮರುಸ್ಥಾಪನೆ ಕೋರಿ ಜಮ್ಮು & ಕಾಶ್ಮೀರ ವಿಧಾನಸಭೆ ನಿರ್ಣಯ ಅಂಗೀಕಾರ - ARTICLE 370

ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕೆಂದು ಕೋರಿ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಜಮ್ಮು & ಕಾಶ್ಮೀರ ವಿಧಾನಸಭೆ ಕಲಾಪ
ಜಮ್ಮು & ಕಾಶ್ಮೀರ ವಿಧಾನಸಭೆ ಕಲಾಪ (ETV Bharat)
author img

By ETV Bharat Karnataka Team

Published : Nov 6, 2024, 2:02 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಬುಧವಾರ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದೆ.

370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವಂತೆ ಕೋರಿ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಇಂದು ಸದನದಲ್ಲಿ ನಿರ್ಣಯ ಮಂಡಿಸಿದರು. ರಾಜ್ಯಕ್ಕೆ ವಿಶೇಷ ಸಾಂವಿಧಾನಿಕ ಅಧಿಕಾರಗಳನ್ನು ಪುನಃಸ್ಥಾಪಿಸಲು ಕರೆ ನೀಡುವ ನಿರ್ಣಯವನ್ನು ಬಿಜೆಪಿ ಶಾಸಕರ ವಿರೋಧದ ಮಧ್ಯೆ ಬಹುಮತದೊಂದಿಗೆ ಅಂಗೀಕರಿಸಲಾಯಿತು.

ಸದನದಲ್ಲಿ ಸರ್ಕಾರದ ಪರವಾಗಿ ಮಾತನಾಡಿದ ಚೌಧರಿ, ನಿರ್ಣಯವನ್ನು ಸಮರ್ಥಿಸಿಕೊಂಡು ಅದನ್ನು ಗಟ್ಟಿಯಾಗಿ ಓದಿದರು.

ನಿರ್ಣಯ: "ಈ ಶಾಸಕಾಂಗವು ಜಮ್ಮು ಮತ್ತು ಕಾಶ್ಮೀರದ ಜನರ ಗುರುತು, ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸುವ ವಿಶೇಷ ಸ್ಥಾನಮಾನ ಮತ್ತು ಸಾಂವಿಧಾನಿಕ ಖಾತರಿಗಳ ಮಹತ್ವವನ್ನು ಪುನರುಚ್ಚರಿಸುತ್ತದೆ ಮತ್ತು ಅವುಗಳನ್ನು ಏಕಪಕ್ಷೀಯವಾಗಿ ತೆಗೆದುಹಾಕಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ. ವಿಶೇಷ ಸ್ಥಾನಮಾನ, ಸಾಂವಿಧಾನಿಕ ಖಾತರಿ ಮತ್ತು ನಿಬಂಧನೆಗಳನ್ನು ಪುನಃಸ್ಥಾಪಿಸಲು ಸಾಂವಿಧಾನಿಕ ಕಾರ್ಯವಿಧಾನಗಳನ್ನು ರೂಪಿಸಲು ಜಮ್ಮು ಮತ್ತು ಕಾಶ್ಮೀರದ ಜನರ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಲು ಈ ಅಸೆಂಬ್ಲಿ ಭಾರತ ಸರ್ಕಾರಕ್ಕೆ ಕರೆ ನೀಡುತ್ತದೆ. ಪುನಃಸ್ಥಾಪನೆಯ ಯಾವುದೇ ಪ್ರಕ್ರಿಯೆಯು ರಾಷ್ಟ್ರೀಯ ಏಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ರಕ್ಷಿಸುತ್ತದೆ ಎಂದು ಈ ಅಸೆಂಬ್ಲಿ ಒತ್ತಿ ಹೇಳುತ್ತದೆ".

ಚೌಧರಿ ನಿರ್ಣಯವನ್ನು ಮಂಡಿಸಿದ ಕೂಡಲೇ ಪ್ರತಿಪಕ್ಷ ನಾಯಕ ಶರ್ಮಾ ಅದನ್ನು ವಿರೋಧಿಸಿದರು. ಸಂಸತ್ತು ಈಗಾಗಲೇ 370ನೇ ವಿಧಿಯನ್ನು ರದ್ದುಪಡಿಸಿದೆ ಮತ್ತು ಅದನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಯಿತು.

ಆರೋಗ್ಯ ಸಚಿವ ಸಕೀನಾ ಇಟೂ ಸೇರಿದಂತೆ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಕೂಡ ನಿರ್ಣಯಕ್ಕೆ ಬೆಂಬಲ ನೀಡಿದರು. ಇದಲ್ಲದೆ, ಸ್ವತಂತ್ರ ಶಾಸಕರಾದ ಶೇಖ್ ಖುರ್ಷಿದ್ ಮತ್ತು ಶಬೀರ್ ಕುಲ್ಲೆ, ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಮುಖ್ಯಸ್ಥ ಸಜಾದ್ ಲೋನ್ ಮತ್ತು ಮೂವರು ಪಿಡಿಪಿ ಶಾಸಕರು ಕೂಡ ನಿರ್ಣಯವನ್ನು ಬೆಂಬಲಿಸಿದ್ದರಿಂದ ಸದನದಲ್ಲಿ ಸರ್ಕಾರದ ಸ್ಥಾನ ಮತ್ತಷ್ಟು ಬಲವಾಗಿದೆ.

ನಿರ್ಣಯಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿರುವ ಮಧ್ಯದಲ್ಲಿಯೂ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಶಾಸಕರು ಜೋರಾಗಿ ಕೂಗಾಡುತ್ತ ಆಕ್ಷೇಪ ಎತ್ತುತ್ತಲೇ ಇದ್ದರು. ಕೊನೆಗೆ ಸ್ಪೀಕರ್ ಅಬ್ದುರ್ ರಹೀಮ್ ರಾಥರ್ ನಿರ್ಣಯವನ್ನು ಮತಕ್ಕೆ ಹಾಕಿದರು. ನಂತರ ನಿರ್ಣಯವು ಬಹುಮತದಿಂದ ಅಂಗೀಕಾರವಾಯಿತು. ಆದಾಗ್ಯೂ, ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರೆಸಿದ್ದರಿಂದ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.

ಇದನ್ನೂ ಓದಿ : ಎಲ್​ಎಂವಿ ಲೈಸೆನ್ಸ್​ ಹೊಂದಿರುವವರು ಸಾರಿಗೆ ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.