ETV Bharat / bharat

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ - ಬಿಜೆಪಿ ನಡುವಿನ ಸ್ಪರ್ಧೆಗೆ ಬಸೋಲಿ ಸಜ್ಜು - JAMMU AND KASHMIR ELECTIONS

author img

By ETV Bharat Karnataka Team

Published : 2 hours ago

ಏಳು ಅಭ್ಯರ್ಥಿಗಳು ಆರಂಭದಲ್ಲಿ ಅಖಾಡಕ್ಕೆ ಇಳಿದಿದ್ದು, ಎರಡು ನಾಮಪತ್ರಗಳು ತಿರಸ್ಕಾರವಾಗುವ ಸಾಧ್ಯತೆಯಿದೆ. ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ರಫೀಕ್ ಭಟ್ ತಮ್ಮ ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದಾರೆ. ಹಾಗಾಗಿ ಈಗ ಒಟ್ಟು ನಾಲ್ಕು ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಹೆಚ್ಚಾಗಿದೆ.

JAMMU AND KASHMIR ASSEMBLY ELECTION
ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ (ETV Bharat)

ಶ್ರೀನಗರ (ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬಸೋಲಿ ವಿಧಾನ ಸಭಾ ಕ್ಷೇತ್ರ ಚುನಾವಣಾ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕಥುವಾ ಜಿಲ್ಲೆಯಲ್ಲಿರುವ ಈ ಕ್ಷೇತ್ರವು ಶ್ರೀಮಂತ ಚುನಾವಣಾ ಇತಿಹಾಸ ಹೊಂದಿದೆ. ವಿಶೇಷವಾಗಿ ಚೌಧರಿ ಲಾಲ್​ ಸಿಂಗ್​ 2014ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸಿದ್ದರು.

ಚೌಧರಿ ಲಾಲ್ ಸಿಂಗ್, ಅನುಭವಿ ರಾಜಕಾರಣಿ, ಬಸೋಲಿ ಮತದಾರರಿಗೆ ಹೊಸ ವ್ಯಕ್ತಿಯೇನಲ್ಲ. ಬಿಜೆಪಿಯಿಂದ ಪ್ರತಿನಿಧಿಸುವ ಮೊದಲು, ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. 1996 ರಲ್ಲಿ ಅಖಿಲ ಭಾರತ ಇಂದಿರಾ ಕಾಂಗ್ರೆಸ್ (ತಿವಾರಿ) ನಿಂದ ಮತ್ತು 2002ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದರು. ಈಗ ಪಕ್ಷ ಬದಲಿಸಿರುವ ಅವರು ಮತ್ತೆ ಕಾಂಗ್ರೆಸ್​ನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರ ರಾಜಕೀಯ ಪ್ರಯಾಣ ಏರಿಳಿತಗಳನ್ನು ಕಂಡಿದೆ, ಲೋಕಸಭೆ ಚುನಾವಣೆಯಲ್ಲಿ ಉಧಮ್‌ಪುರ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಇತ್ತೀಚಿನ ಪ್ರಯತ್ನವೂ ಸೇರಿದಂತೆ, ಅದು ಅವರಿಗೆ ಯಶಸ್ಸನ್ನು ನೀಡಲಿಲ್ಲ.

2024ರ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಸಮೀಪಿಸುತ್ತಿರುವ ಹೊತ್ತಲ್ಲಿ, ಬಸೋಲಿ ಕ್ಷೇತ್ರಕ್ಕೆ ಚೌಧರಿ ಲಾಲ್ ಸಿಂಗ್ ಅವರು ಮತ್ತೆ ಮರಳಿರುವುದು, ಮತದಾರರಿಗೆ ನಿರ್ಣಾಯಕ ಘಟ್ಟವನ್ನು ಪ್ರತಿನಿಧಿಸುತ್ತದೆ. ಈ ಹಿಂದೆ 2004 ಮತ್ತು 2009 ರಲ್ಲಿ ಕಾಂಗ್ರೆಸ್ ಜನಾದೇಶದ ಅಡಿಯಲ್ಲಿ ಉಧಮ್‌ಪುರದ ಸಂಸದರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರಿಗೆ ಅನುಭವ ಜೊತೆಗೆ ಗೆಲುವಿನ ಇತಿಹಾಸವಿದೆ. ಸ್ಥಾನವನ್ನು ಮರಳಿ ಪಡೆಯುವ ಅವರ ಗುರಿಯು ಈ ಚುನಾವಣಾ ಸ್ಪರ್ಧೆಯ ಸುತ್ತ ಬೆಳೆಯುತ್ತಿರುವ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.

ಮತ್ತೊಂದೆಡೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಚುನಾವಣಾ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ಉದ್ಯಮಿ ದರ್ಶನ್ ಸಿಂಗ್ ಅವರನ್ನು ನಾಮ ನಿರ್ದೇಶನ ಮಾಡಿದೆ. ಲಾಲ್ ಸಿಂಗ್ ಮತ್ತು ದರ್ಶನ್ ಸಿಂಗ್ ಇಬ್ಬರೂ ಒಂದೇ ರಜಪೂತ ಸಮುದಾಯದಿಂದ ಬಂದವರು. ಇದು ಸ್ಪರ್ಧೆಯ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಚುನಾವಣೆಯಲ್ಲಿ ಇದು ಮತದಾರರ ಗ್ರಹಿಕೆಗಳು ಮತ್ತು ಜನಾಂಗದ ಒಟ್ಟಾರೆ ಡೈನಾಮಿಕ್ಸ್‌ನ ಮೇಲೆ ಪ್ರಭಾವ ಬೀರಬಹುದು.

ಕ್ಷೇತ್ರದಿಂದ ನಾಲ್ಕು ಸ್ಪರ್ಧಿಗಳು ಕಣಕ್ಕೆ: ಏಳು ಅಭ್ಯರ್ಥಿಗಳು ಆರಂಭದಲ್ಲಿ ಅಖಾಡಕ್ಕೆ ಇಳಿದಿದ್ದು, ಎರಡು ನಾಮಪತ್ರಗಳು ತಿರಸ್ಕಾರವಾಗುವ ಸಾಧ್ಯತೆಯಿದೆ. ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ರಫೀಕ್ ಬಟ್ ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಹಾಗಾಗಿ ಈಗ ಒಟ್ಟು ನಾಲ್ಕು ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಗಟ್ಟಿಯಾಗಿದೆ. ಅದರಲ್ಲೂ ಹಿರಿಯ ಕಾಂಗ್ರೆಸ್ ನಾಯಕ ಚೌಧರಿ ಲಾಲ್ ಸಿಂಗ್ ಮತ್ತು ಬಿಜೆಪಿಯ ದರ್ಶನ್ ಕುಮಾರ್ ನಡುವಿನ ಸ್ಪರ್ಧೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.

ಯೋಗಿಂದರ್ ಸಿಂಗ್ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಪಂಕಜ್ ಕುಮಾರ್ ಬಹುಜನ ಸಮಾಜ ಪಕ್ಷದಿಂದ (ಬಿಎಸ್‌ಪಿ) ಪ್ರತಿನಿಧಿಸುತ್ತಿದ್ದಾರೆ.

ಬಸೋಲಿಯ ಚುನಾವಣಾ ಇತಿಹಾಸ: ದಶಕಗಳಿಂದ ತನ್ನ ಪ್ರಾತಿನಿಧ್ಯ ರೂಪಿಸಿದ ರಾಜಕೀಯ ಪೈಪೋಟಿಗಳು ಮತ್ತು ಪಕ್ಷದ ಬದಲಾವಣೆಗಳಿಂದಾಗಿ ಬಸೋಲಿ ವಿಧಾನಸಭಾ ಕ್ಷೇತ್ರ ಶ್ರೀಮಂತ ಚುನಾವಣಾ ಇತಿಹಾಸ ಹೊಂದಿದೆ. ಈ ಕ್ಷೇತ್ರವು ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ಮೊದಲು ಕಾಂಗ್ರೆಸ್‌ನ ಮಂಗತ್ ರಾಮ್ ಶರ್ಮಾ ಅವರು 1977 ಮತ್ತು 1983 ಎರಡರಲ್ಲೂ ಈ ಕ್ಷೆತ್ರದಿಂದ ಗೆಲುವು ಸಾಧಿಸಿದರು. ಬಸೋಲಿಯನ್ನು ಪಕ್ಷದ ಭದ್ರಕೋಟೆಯನ್ನಾಗಿ ಮಾಡಿದರು. 1987ರಲ್ಲಿ ಕಾಂಗ್ರೆಸ್‌ನ ಜಗದೀಶ್ ರಾಜ್ ಸಪೋಲಿಯಾ ಅವರು ಈ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ಈ ಪ್ರವೃತ್ತಿ ಮುಂದುವರೆದಿತ್ತು. ಈ ಪ್ರದೇಶದಲ್ಲಿ ಪಕ್ಷದ ಪ್ರಭಾವ ಬಲವಾಗಿದೆ.

1996 ರಲ್ಲಿ ಅಖಿಲ ಭಾರತ ಇಂದಿರಾ ಕಾಂಗ್ರೆಸ್ (ತಿವಾರಿ) ಬ್ಯಾನರ್ ಅಡಿ ಚೌಧರಿ ಲಾಲ್ ಸಿಂಗ್ ವಿಜಯಶಾಲಿಯಾದಾಗ ರಾಜಕೀಯ ದೃಶ್ಯವೇ ಬದಲಾಯಿತು. ನಂತರ ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗಿದ ನಂತರ 2002 ರಲ್ಲಿ ಮತ್ತೊಂದು ಗೆಲುವಿಗೆ ಕಾರಣವಾಯಿತು. ಆದಾಗ್ಯೂ, 2008 ರಲ್ಲಿ, ಸಪೋಲಿಯಾ, ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾದ ಸಪೋಲಿಯಾ ಅವರು ಆ ಕ್ಷೇತ್ರವನ್ನು ಮರಳಿ ಪಡೆದರು. ಚೌಧರಿ ಲಾಲ್ ಸಿಂಗ್, ಹಿಂದಿನ ಸೋಲುಗಳಿಂದ ಹಿಂಜರಿಯಲಿಲ್ಲ. 2014 ರಲ್ಲಿ ಗಮನಾರ್ಹವಾದ ಮತಗಳ ಮೂಲಕ ರೀಎಂಟ್ರಿ ಕೊಟ್ಟರು. ಮತ್ತೊಮ್ಮೆ ಬಿಜೆಪಿಗೆ ಈ ಕ್ಷೇತ್ರವನ್ನು ಭದ್ರಪಡಿಸಿದರು.

ಮೂರನೇ ಹಂತದ ಚುನಾವಣೆಯಲ್ಲಿ ಬಸೋಲಿಯಲ್ಲಿ ಅ.1 ರಂದು ಮತದಾನ ನಡೆಯಲಿದೆ. ಸೆಪ್ಟೆಂಬರ್ 18 ಮತ್ತು 25 ರಂದು ನಡೆಸಲಾದ ಮೊದಲ ಎರಡು ಹಂತಗಳಲ್ಲಿ ಕ್ರಮವಾಗಿ 61.38% ಮತ್ತು 57.31% ರಷ್ಟು ಮತದಾನವಾಗಿದೆ. ಎಲ್ಲ ಮೂರು ಹಂತಗಳ ಮತಗಳನ್ನು ಅಕ್ಟೋಬರ್ 8 ರಂದು ಎಣಿಕೆ ಮಾಡಲು ನಿರ್ಧರಿಸಲಾಗಿದ್ದು, ಫಲಿತಾಂಶಗಳು ಬಸೋಲಿಯ ರಾಜಕೀಯ ಕಥೆಯ ಮುಂದಿನ ಅಧ್ಯಾಯವನ್ನು ನಿರ್ಧರಿಸುತ್ತದೆ.

13 ಜಿಲ್ಲೆಗಳಾದ್ಯಂತ ಒಟ್ಟು 50 ಕ್ಷೇತ್ರಗಳಿಗೆ ಈಗಾಗಲೇ ಮತದಾನ ನಡೆದಿದ್ದು, ದಶಕದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಕೊನೆಯ ಚುನಾವಣೆಯು 2014ರಲ್ಲಿ ನಡೆದಿತ್ತು.

ಇದನ್ನೂ ಓದಿ: J&K ವಿಧಾನಸಭೆ ಚುನಾವಣೆ: 2ನೇ ಹಂತದಲ್ಲೂ ಭರ್ಜರಿ ಮತದಾನ: ವೈಷ್ಣೋ ದೇವಿ ಕ್ಷೇತ್ರದಲ್ಲಿ ಶೇ 75ರಷ್ಟು ವೋಟಿಂಗ್​ - voter turnout of 54 per cent

ETV Bharat Logo

Copyright © 2024 Ushodaya Enterprises Pvt. Ltd., All Rights Reserved.