ETV Bharat / bharat

ಎರಡನೇ ಅವಧಿಗೆ ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಚಿವ ಜೈಶಂಕರ್​ - Jaishankar assumed charge

JAISHANKAR ASSUMED CHARGE :ಸುಬ್ರಹ್ಮಣ್ಯಂ ಜೈಶಂಕರ್​ ಅವರು ಮತ್ತೊಮ್ಮೆ ಭಾರತದ ವಿದೇಶಾಂಗ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

External Affairs Minister
ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ (PTI photo)
author img

By ETV Bharat Karnataka Team

Published : Jun 11, 2024, 12:53 PM IST

ನವದೆಹಲಿ: ರಾಜತಾಂತ್ರಿಕ ನಿಪುಣ, ರಾಜಕಾರಣಿ ಸುಬ್ರಹ್ಮಣ್ಯಂ ಜೈಶಂಕರ್​ ಅವರು ಸತತ ಎರಡನೇ ಅವಧಿಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ನೂತನ ಸಚಿವರಿಗೆ ಸೋಮವಾರ ಖಾತೆಗಳನ್ನು ಹಂಚಿಕೆ ಮಾಡಲಾಯಿತು. ಅದರಲ್ಲಿ ಎಸ್​. ಜೈಶಂಕರ್​ ಸೇರಿ ಹಿರಿಯ ಬಿಜೆಪಿ ನಾಯಕರಾದ ರಾಜನಾಥ್​ ಸಿಂಗ್​, ಅಮಿತ್​ ಶಾ, ನಿತಿನ್​ ಗಡ್ಕರಿ ಹಾಗೂ ನಿರ್ಮಲಾ ಸೀತರಾಮನ್ ಹಿಂದಿನ ಸರ್ಕಾರದಲ್ಲಿ ನಿರ್ವಹಿಸಿದ ತಮ್ಮ ಸಚಿವ ಸ್ಥಾನಗಳನ್ನೇ ಉಳಿಸಿಕೊಂಡಿದ್ದಾರೆ. ಈ ಮೂಲಕ ಉತ್ತಮ ವಿದೇಶಾಂಗ ನೀತಿಗಾಗಿ 69 ವರ್ಷದ ರಾಜತಾಂತ್ರಿಕ ನಿಪುಣ ಜೈಶಂಕರ್​ ಅವರ ಮೇಲೆ ಪ್ರಧಾನಿ ಮೋದಿ ಮತ್ತೊಮ್ಮೆ ನಂಬಿಕೆಯ ಹಸ್ತ ಚಾಚಿದ್ದಾರೆ.

ಅಧಿಕಾರ ವಹಿಸಿಕೊಂಡ ಕೂಡಲೇ ಜೈಶಂಕರ್​ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. "ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ, ಹಾಗೂ ಪ್ರಮುಖ ರಾಷ್ಟ್ರಗಳಿಗೆ ರಾಯಭಾರಿಯಾಗಿ ಶ್ರೀಮಂತ ರಾಜತಾಂತ್ರಿಕ ಹಿನ್ನೆಲೆ ಹೊಂದಿರುವ ಜೈಶಂಕರ್​ ಅವರು ತಮ್ಮ ಸ್ಥಾನಕ್ಕೆ ಉತ್ತಮ ಗೌರವವನ್ನು ತರುತ್ತಾರೆ. ಹಾಗೂ ಉತ್ತಮ ವಿದೇಶಾಂಗ ನೀತಿಯನ್ನು ರೂಪಿಸುತ್ತಾರೆ. 2019 ರಿಂದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ, ಜೈಶಂಕರ್ ಅವರು ಜಾಗತಿಕ ಮಟ್ಟದಲ್ಲಿ ಸಂಕೀರ್ಣ ಸಮಸ್ಯೆಗಳ ಶ್ರೇಣಿಯಲ್ಲಿ ಭಾರತದ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ತಮ್ಮ ಸಾಮರ್ಥ್ಯವನ್ನು ವಿಶ್ವಾಸದಿಂದ ಪ್ರದರ್ಶಿಸುತ್ತಾ ಬಂದಿದ್ದಾರೆ.

ಉಕ್ರೇನ್‌ ಯುದ್ಧದ ಸಮಯದಲ್ಲಿ ಮಾಸ್ಕೋದಿಂದ ಕಚ್ಚಾ ತೈಲ ಖರೀದಿಯ ಬಗ್ಗೆ ಭಾರತದ ಮೇಲೆ ಪಾಶ್ಚಿಮಾತ್ಯರ ಟೀಕೆಗಳನ್ನು ಮಂದಗೊಳಿಸುವುದರಿಂದ ಹಿಡಿದು ಚೀನಾವನ್ನು ಎದುರಿಸಲು ದೃಢವಾದ ನೀತಿಯನ್ನು ರೂಪಿಸುವವರೆಗೆ, ಜೈಶಂಕರ್ ಅವರು ಹಿಂದಿನ ಮೋದಿ ಸರ್ಕಾರದ ಪ್ರಮುಖ ಸಚಿವರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ವಿಶೇಷವಾಗಿ ಭಾರತ ಜಿ-20 ಅಧ್ಯಕ್ಷತೆ ವಹಿಸಿದ್ದಾಗ, ವಿದೇಶಾಂಗ ನೀತಿಯ ವಿಷಯಗಳನ್ನು ದೇಶೀಯ ಚರ್ಚೆಗೆ ತರುವಲ್ಲಿ ಅವರು ನಿರ್ವಹಿಸಿದ ರೀತಿಯಿಂದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಪ್ರಸ್ತುತ, ಅವರು ಗುಜರಾತ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಜೈಶಂಕರ್ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ (2015-18), ಯುನೈಟೆಡ್ ಸ್ಟೇಟ್ಸ್ (2013-15), ಚೀನಾ (2009-2013) ಮತ್ತು ಜೆಕ್ ರಿಪಬ್ಲಿಕ್ (2000-2004) ಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸಿಂಗಾಪುರಕ್ಕೆ ಭಾರತದ ಹೈಕಮಿಷನರ್ ಆಗಿದ್ದರು (2007 - 2009). ಜೈಶಂಕರ್ ಅವರು ಮಾಸ್ಕೋ, ಕೊಲಂಬೊ, ಬುಡಾಪೆಸ್ಟ್ ಮತ್ತು ಟೋಕಿಯೊದಲ್ಲಿನ ರಾಯಭಾರ ಕಚೇರಿಗಳಲ್ಲಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಧ್ಯಕ್ಷರ ಸಚಿವಾಲಯದಲ್ಲಿ ಇತರ ರಾಜತಾಂತ್ರಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಿಕ್ಕಿಂ ಸಿಎಂ ಆಗಿ ಸತತ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಪ್ರೇಮ್ ಸಿಂಗ್ ತಮಾಂಗ್ - Prem Singh Tamang

ETV Bharat Logo

Copyright © 2024 Ushodaya Enterprises Pvt. Ltd., All Rights Reserved.