ಜಬಲ್ಪುರ್,ಮಧ್ಯಪ್ರದೇಶ: ರಾಕ್ಷಸ ರಾವಣನ ಮೇಲೆ ಅತಿಯಾದ ನಂಬಿಕೆ ಹೊಂದಿರುವ ಜಬಲ್ಪುರ್ನ ಟೈಲರ್ ಸಂತೋಷ್ ನಾಮದೇವ್ ಇದೀಗ ಲಂಕೇಶ್ ಅಥವಾ ಲಂಕಾದ ರಾಜ ಎಂಬ ಉಪನಾಮವನ್ನು ಪಡೆದುಕೊಂಡಿದ್ದಾರೆ. ರಾವಣ ತನ್ನ ಗುರು ಮತ್ತು ಕುಲದೇವತೆ ಎಂದು ನಾಮ್ದೇವ್ ನಂಬಿದ್ದಾರೆ. ಅಲ್ಲದೇ ಆತನ ಬುದ್ಧಿವಂತಿಕೆ ಮತ್ತು ಶಕ್ತಿಯಂತಹ ಗುಣಗಳೇ ಆತನ ಶಕ್ತಿ ಅಂತಾರೆ ನಾಮದೇವ್.
ನಾನು ಅವರನ್ನು ಗುರು ಎಂದು ಭಾವಿಸಿದ್ದೇನೆ ಎಂದು ಮಾತನಾಡುವ ನಾಮ್ದೇವ್, ಶ್ರೀರಾಮನು ರಾವಣನನ್ನು ಗೌರವಿಸಿದರೆ, ಲಕ್ಷಣನೂ ಅವರಿಂದ ಸಾಕಷ್ಟು ಕಲಿತುಕೊಂಡಿದ್ದಾರೆ ಅಂತಾರೆ. 1975ರಿಂದ ನಾನು ರಾವಣನ ಆರಾಧನೆ ಮಾಡುತ್ತಿದ್ದೇನೆ. ಕಳೆದ 22 ವರ್ಷದ ಹಿಂದೆ ನನ್ನ ಮನೆಯಲ್ಲಿ ರಾವಣನ ಮೂರ್ತಿಯನ್ನು ಸ್ಥಾಪಿಸಿದ್ದು, ಪ್ರತಿನಿತ್ಯ ಪೂಜೆ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಈ ನಾಮದೇವ್.
ನಾಮದೇವ್ ಅವರ ಇಡೀ ಕುಟುಂಬವೇ ರಾವಣನ ಆರಾಧನೆ ಮಾಡುತ್ತೆ: ನಾಮ್ದೇವ್ ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ರಾವಣನ ಪರಂಪರೆಗೆ ಬದ್ಧವಾಗಿದ್ದಾರೆ. ನಾಮ್ ದೇವ್ ಅವರ ಮಕ್ಕಳಿಗೆ ರಾವಣನ ಕುಲದ ಹೆಸರುಗಳನ್ನೇ ಇಟ್ಟಿದ್ದಾರೆ. ಅವರ ಮಗ ಅಕ್ಷಯ್ ಕುಮಾರ್ ನಾಮ್ದೇವ್ ಮಾತನಾಡಿ, ಕುಟುಂಬದಲ್ಲಿ ಈ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ. ರಾವಣನು ಬುದ್ಧಿವಂತ ಮತ್ತು ಉತ್ತಮ ವಿದ್ಯಾಭ್ಯಾಸವನ್ನು ಪಡೆದವನಾಗಿದ್ದು, ಆತ ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂದರು.
ನೆರೆಹೊರೆಯವರಲ್ಲೂ ಆಸಕ್ತಿ ಕೆರಳಿಸಿದ ನಾಮದೇವ ರಾವಣದ ಭಕ್ತಿ: ನಾಮ್ದೇವ್ರ ಈ ಭಕ್ತಿ ಆತನ ಸ್ನೇಹಿತರು ಮತ್ತು ನೆರೆಹೊರೆಯವರ ಮೇಲೂ ಪ್ರಭಾವ ಬೀರಿದೆ. ಕೌನ್ಸಿಲರ್ ದೀಪಕ್ ಜೈನ್ ಮಾತನಾಡಿ. ರಾವಣನಿಗೆ ದೋಷಗಳಿವೆ ಎಂದು ನಾನು ನಂಬುವುದಿಲ್ಲ. ಲಂಕೇಶ್ ಅವರು ರಾವಣನ ಪಾತ್ರದ ಕುರಿತು ಮಾತನಾಡುತ್ತಾರೆ. ಜೈ ಲಂಕೇಶ್ ಹೆಸರಿನ ಹಲವಾರು ಅಂಗಡಿಗಳನ್ನು ನಿರ್ವಹಿಸುತ್ತಾರೆ.
ಸ್ಥಳೀಯ ನಿವಾಸಿ ಧೃವ ನೆಮ್ ಮಾತನಾಡಿ, ಲಂಕೇಶ್ ಕೇವಲ ರಾವಣ ಮತ್ತು ಶಿವನ ಪೂಜೆ ಮಾಡುತ್ತಾರೆ. ರಾವಣನನ್ನು ಪೂಜೆ ಮಾಡುವ ಮೂಲಕ ದಿನ ಪ್ರಾರಂಭ ಮಾಡಿ, ಪೂಜೆಯಿಂದಲೇ ದಿನ ಕಳೆಯುತ್ತಾರೆ.
ನವರಾತ್ರಿ ವೇಳೆಯಲ್ಲಿ ಲಂಕೇಶ್ ತನ್ನ ಅನುಯಾಯಿಗಳ ರಾವಣನಿಗೆ ಭಕ್ತಿ ತೋರಿಸುವ ಶೋಭಾ ಯಾತ್ರೆಯನ್ನು ಅಂತ್ಯಗೊಳಿಸುವ ಆಚರಣೆ ನಡೆಸುತ್ತಿದ್ದು, ಇದಕ್ಕೆ ಸಮುದಾಯಸ್ತರ ಬೆಂಬಲವೂ ಸಿಕ್ಕಿದೆ.
ಇದನ್ನೂ ಓದಿ: ನವರಾತ್ರಿಯ ಒಂಬತ್ತನೇ ದಿನದ ಸಂಭ್ರಮ: ದೇಶದ ವಿವಿಧ ದೇವಾಲಯಗಳಲ್ಲಿ ಬೆಳಗಿದ ಆರತಿ