ETV Bharat / bharat

ಕಾಂಗ್ರೆಸ್ ​- ಇಂಡಿಯಾ ಕೂಟಕ್ಕೆ ಶಕ್ತಿ ಬಂದರೆ, ದೇಶ ದುರ್ಬಲವಾಗುತ್ತೆ: ಪ್ರಧಾನಿ ಮೋದಿ - DESH MAJBOOR HO JAEGA

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ANI)
author img

By ANI

Published : Nov 9, 2024, 3:46 PM IST

ಅಕೋಲಾ (ಮಹಾರಾಷ್ಟ್ರ) : ದೇಶದ ಸಂವಿಧಾನ, ನ್ಯಾಯ ವ್ಯವಸ್ಥೆ ಮತ್ತು ದೇಶದ ಆಶಯಗಳ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್​ ಮತ್ತು ಅದರ ಇಂಡಿಯಾ ಬಣಕ್ಕೆ ಶಕ್ತಿ ಬಂದಲ್ಲಿ ದೇಶದ ಬಲವು ಕುಗ್ಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್​ಗೆ ದೇಶದ ಬಗ್ಗೆ ಚಿಂತನೆಯಿಲ್ಲ. ಅದು ಜಾತಿ ರಾಜಕಾರಣದಲ್ಲಿ ತೊಡಗಿದೆ. ದೇಶದಲ್ಲಿ ಅಶಾಂತಿ ನೆಲೆಸಿರಬೇಕು ಎಂಬುದೇ ಆ ಪಕ್ಷದ ಧ್ಯೇಯವಾಗಿದೆ. ಹೀಗಾಗಿ ಅದು ಮತ್ತೆ ಚಿಗುರೊಡೆಯಬಾರದು ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಅವರು, ಈ ದೇಶಕ್ಕೆ ಅಂಬೇಡ್ಕರ್​ ಅವರ ಸಂವಿಧಾನವೇ ಅಂತಿಮ. ಅದರ ಆಶಯಗಳನ್ನು ಕಾಂಗ್ರೆಸ್​ ಬೆಂಬಲಿಸುವುದಿಲ್ಲ. ಸಮಾಜದಲ್ಲಿ ಕಂದಕ ಸೃಷ್ಟಿಸುವುದರಿಂದ ತನ್ನನ್ನು ತಾನು ಉಳಿಸಿಕೊಳ್ಳಲು ಅದು ಪ್ರಯತ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾವೆಲ್ಲಾ ಒಂದಾಗಿದ್ದರೆ ಮಾತ್ರ ಸುರಕ್ಷಿತ: ಜಾತಿಗಳ ಮಧ್ಯೆ ಕಿಡಿ ಹೊತ್ತಿಸಿ, ಸಂಘರ್ಷ ಸೃಷ್ಟಿ ಮಾಡುವುದೇ ಕಾಂಗ್ರೆಸ್​​ನ ಚಾಳಿ. ಅದು ಎಂದಿಗೂ ನಾವೆಲ್ಲರೂ ಒಂದಾಗಿರಲು ಬಿಡುವುದಿಲ್ಲ. ಕಾರಣ, ಇಬ್ಭಾಗವೇ ಕಾಂಗ್ರೆಸ್​ನ ಶಕ್ತಿ. ನಾವೆಲ್ಲರೂ ಜಾತಿ - ಮತಗಳನ್ನು ಬಿಟ್ಟು ಒಂದಾಗಿದ್ದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

"ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿದೆ. ದೇಶವು ಹೆಚ್ಚು ದುರ್ಬಲವಾದಷ್ಟು, ಅದು ಹೆಚ್ಚು ಬಲಗೊಳ್ಳುತ್ತದೆ. 'ಜಬ್ ಕಾಂಗ್ರೆಸ್ ಮಜ್ಬೂತ್ ಹೋಗಿ, ದೇಶ್ ಮಜ್ಬೂರ್ ಹೋ ಜಾಯೇಗಾ'. ಆ ಪಕ್ಷವು ವಿವಿಧ ಜಾತಿಗಳ ನಡುವೆ ಒಡಕು ಸೃಷ್ಟಿಸುತ್ತದೆ. ಅದು ನಮ್ಮವರನ್ನು ಎಂದಿಗೂ ಒಗ್ಗೂಡಲು ಬಿಡುವುದಿಲ್ಲ. ಎಸ್‌ಸಿಗಳ ಹಕ್ಕುಗಳನ್ನು ಅದು ಕಸಿದುಕೊಳ್ಳುತ್ತದೆ. ಇದು ಆ ಪಕ್ಷದ ಪಿತೂರಿ ಎಂದರು.

ಕರ್ನಾಟಕದಲ್ಲಿ 'ಮದ್ಯ' ಲೂಟಿ: ಕಾಂಗ್ರೆಸ್ ಎಲ್ಲಿ ಸರ್ಕಾರ ರಚಿಸುತ್ತದೆಯೋ, ಆ ರಾಜ್ಯವು 'ಕುಟುಂಬ'ವೊಂದರ ಎಟಿಎಂ ಆಗಿ ಕೆಲಸ ಮಾಡುತ್ತದೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಇದಕ್ಕೆ ಉದಾಹರಣೆ. ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕದಲ್ಲಿ 700 ಕೋಟಿ ರೂಪಾಯಿ ಅಕ್ರಮ ನಡೆಸಿದ್ದಾರೆ. ಒಂದು ವೇಳೆ ಆ ಪಕ್ಷ ಮಹಾರಾಷ್ಟ್ರದಲ್ಲಿ ಗೆದ್ದರೆ, ಎಷ್ಟು ಲೂಟಿ ಮಾಡಬಹುದು ಯೋಚಿಸಿ ಎಂದು ಹೇಳಿದರು.

ಇದನ್ನೂ ಓದಿ: ವಯನಾಡು ಪುನರ್ವಸತಿಗೆ ಕೇಂದ್ರದ ನೆರವಿನ ಕೊರತೆಯಾಗಿದೆ; ಕೇರಳ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.