ETV Bharat / bharat

ಕೇಂದ್ರದ ಎನ್​ಡಿಎ ಸರ್ಕಾರಕ್ಕೆ ಅಲ್ಪಾಯುಷ್ಯ, ಶೀಘ್ರ ಪತನವಾಗಲಿದೆ: ಅಖಿಲೇಶ್​ ಯಾದವ್​ - Martyrs Day rally - MARTYRS DAY RALLY

ತೃಣಮೂಲ ಕಾಂಗ್ರೆಸ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಭಾಗಿಯಾಗಿ ಇಂಡಿಯಾ ಕೂಟದ ಬಲ ಪ್ರದರ್ಶನ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಮಮತಾ ಮತ್ತು ಅಖಿಲೇಶ್​ ಗುಡುಗಿದರು.

ಅಖಿಲೇಶ್​ ಯಾದವ್​
ಅಖಿಲೇಶ್​ ಯಾದವ್​ (ETV Bharat)
author img

By ETV Bharat Karnataka Team

Published : Jul 21, 2024, 5:06 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ): ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಾತ್ಕಾಲಿಕವಾಗಿದ್ದು, ಅದು ಅಲ್ಪಾವಧಿಯಲ್ಲೇ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​​ ಯಾದವ್​​ ಭವಿಷ್ಯ ನುಡಿದರು.

ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್​ ಭಾನುವಾರ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಮುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಅಧಿಕಾರದಲ್ಲಿ ಇರುವವರು, ದೇಶವನ್ನು ವಿಭಜಿಸುತ್ತಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಬಂಗಾಳದ ಜನರು ಒಗ್ಗಟ್ಟಿನಿಂದ ಹೋರಾಡಿ ಬಿಜೆಪಿಯನ್ನು ಸೋಲಿಸಿದ್ದಾರೆ. ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದೆ ಎಂದರು.

ಇದು ಅಲ್ಪಾಯುಷ್ಯ ಸರ್ಕಾರವಾಗಿದೆ. ಬಹುಬೇಗನೆ ಸರ್ಕಾರ ಪತನವಾಗಲಿದೆ. ದೇಶದ ಜನರು ಎಚ್ಚೆತ್ತುಕೊಂಡಾಗ, ವಿಭಜಕ ಮತ್ತು ಕೋಮುವಾದಿ ಶಕ್ತಿಗಳನ್ನು ಸೋಲಿಸಬಹುದು. ಬಿಜೆಪಿಗೆ ತಕ್ಕ ಉತ್ತರ ನೀಡಬಹುದು ಎಂದು ತೃಣಮೂಲ ರ್ಯಾಲಿಯಲ್ಲಿ ಅಖಿಲೇಶ್ ಯಾದವ್​ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಬಿಜೆಪಿಯು ತನ್ನ ಇಚ್ಛೆಯಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಚುನಾವಣಾ ಆಯೋಗವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದೆ. ಇದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಈ ಎಲ್ಲ ದುರಾಡಳಿತಕ್ಕೆ ಒಂದು ದಿನ ಅಂತ್ಯ ಇರಲಿದೆ ಎಂದು ಟೀಕಿಸಿದರು.

ರ್ಯಾಲಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿ, ರಾಷ್ಟ್ರದಲ್ಲಿ ಬಂಗಾಳವು ಪ್ರಮುಖ ರಾಜ್ಯವಾಗಬೇಕೆಂದು ನಾನು ಬಯಸುತ್ತೇನೆ. ಅದು ಇಂದಿನಿಂದ ಪ್ರಾರಂಭವಾಗಿದೆ. ಈ ಜಾಥದಲ್ಲಿ ಪಾಲ್ಗೊಳ್ಳಲು ನಮ್ಮ ಆಹ್ವಾನಕ್ಕೆ ಸ್ಪಂದಿಸಿದ್ದಕ್ಕಾಗಿ ನಾನು ಅಖಿಲೇಶ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನಮ್ಮ ನಡುವಿನ ಏಕತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಎನ್‌ಡಿಎ ಒಕ್ಕೂಟವು ಕೇವಲ ಶೇಕಡಾ 46 ರಷ್ಟು ಮತಗಳನ್ನು ಪಡೆದಿದ್ದರೆ, ಇಂಡಿಯಾ ಮೈತ್ರಿ ಪಕ್ಷಗಳು ಶೇಕಡಾ 51 ರಷ್ಟು ಮತಗಳನ್ನು ಪಡೆದಿವೆ. ಬಿಜೆಪಿಯು ಹಲವು ರಾಜ್ಯಗಳಲ್ಲಿ ಸೋಲು ಕಂಡಿದೆ. ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷವು ಅದ್ಭುತ ಫಲಿತಾಂಶ ಪಡೆದಿದೆ. ಆ ರಾಜ್ಯದಿಂದ ಬಿಜೆಪಿ ತೊರೆಯಬೇಕು. ಅಲ್ಲಿನ ಸಿಎಂ ರಾಜೀನಾಮೆ ನೀಡಬೇಕು. ಆದರೆ, ಅವರಿಗೆ ನಾಚಿಕೆ ಇಲ್ಲ' ಎಂದು ಟೀಕಿಸಿದರು.

ಕೆಲವು ಪಕ್ಷಗಳು ಬಲವಂತದಿಂದ ಅಥವಾ ದುರಾಸೆಯಿಂದ ಬಿಜೆಪಿಯೊಂದಿಗೆ ಕೈಜೋಡಿಸಿವೆ. ಈ ರಾಜಿಯ ಬೆಲೆ ಅವರಿಗೆ ಶೀಘ್ರದಲ್ಲೇ ಅರ್ಥವಾಗುತ್ತದೆ. ತೃಣಮೂಲ ಕಾಂಗ್ರೆಸ್ ಎಂದಿಗೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ನಾವು ಋಣಾತ್ಮಕ ರಾಜಕೀಯ ಮಾಡುವುದಿಲ್ಲ. ದೇಶ, ಸಂವಿಧಾನ ಉಳಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ ಎಂದರು.

ಇದನ್ನೂ ಓದಿ: ನಾಳಿನ ಟಿಎಂಸಿ ಕಾರ್ಯಕ್ರಮದಲ್ಲಿ ಅಖಿಲೇಶ್​ ಯಾದವ್​ ಭಾಗಿ: ಇಂಡಿಯಾ ಕೂಟದ ಬಲ ಪ್ರದರ್ಶನ - INDIA alliance rally

ETV Bharat Logo

Copyright © 2024 Ushodaya Enterprises Pvt. Ltd., All Rights Reserved.