ನವದೆಹಲಿ: ಅಂತಾರಾಷ್ಟ್ರೀಯ ಯುವ ದಿನವನ್ನು ಜಾಗತಿಕವಾಗಿ ಆಗಸ್ಟ್ 12ರಂದು ಆಚರಿಸಲಾಗುವುದು. ಈ ದಿನದ ಮುಖ್ಯ ಉದ್ದೇಶ ಭವಿಷ್ಯದ ನಿರ್ಮಾತೃಗಳಾಗಿರುವ ಇವರ ಸಮಸ್ಯೆ, ಮತ್ತು ಯುವಜನರ ಕೊಡುಗೆಗಳ ಕುರಿತು ಜಾಗೃತಿ ಮೂಡಿಸುವುದಾಗಿದೆ.
ವಿಶ್ವಸಂಸ್ಥೆ ಜಾಲತಾಣದ ಪ್ರಕಾರ, ಅಂತಾರಾಷ್ಟ್ರೀಯ ಯುವ ದಿನದಂದು ಯುವ ಜನತೆ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತರುವುದು. ಜಾಗತಿಕ ಮಟ್ಟದಲ್ಲಿ ಯುವಕರ ಸಾಮರ್ಥ್ಯವನ್ನು ಆಚರಿಸುವುದು.
Young people are not just the future.
— United Nations (@UN) August 11, 2024
They are the present, and their voices are crucial in shaping a safer, more inclusive world for all.
On Monday’s #YouthDay, learn more from @UNFPA: https://t.co/7c56AAV5uH pic.twitter.com/fP4UOWPWUM
ಅಂತಾರಾಷ್ಟ್ರೀಯ ಯುವ ದಿನದ ಕುರಿತು ವಿಶ್ವಸಂಸ್ಥೆ ಹೇಳಿಕೆ: ಡಿಜಿಟಲ್ ಅಳವಡಿಕೆ ಮತ್ತು ನಾವೀನ್ಯತೆಯಲ್ಲಿ ಯುವಜನತೆ ಪ್ರಮುಖವಾಗಿದೆ. 2022ರಲ್ಲಿ 15 ರಿಂದ 24 ವರ್ಷ ವಯಸ್ಸಿನ ಮುಕ್ಕಾಲು ಭಾಗದಷ್ಟು ಜನರು ಇಂಟರ್ನೆಟ್ ಅನ್ನು ಬಳಕೆ ಮಾಡುತ್ತಿದ್ದಾರೆ. ಡಿಜಿಟಲ್ ಜಗತ್ತಿನಲ್ಲಿ ಇತರ ವಯೋಮಾನದವರಿಗಿಂತ ಯುವಜನತೆ ದರ ಹೆಚ್ಚಿದೆ. ಯುವಕರು ಹೆಚ್ಚಾಗಿ ಡಿಜಿಟಲ್ ಸ್ಥಳೀಯರು ಎಂದು ಗುರುತಿಸಲಾಗಿದೆ. ತಂತ್ರಜ್ಞಾನದ ಬದಲಾವಣೆ ಮತ್ತು ಪರಿಹಾರಗಳಲ್ಲಿ ಇವರು ಪ್ರಮುಖವಾಗಿದ್ದು. ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಡಿಜಿಟಲ್ ಆವಿಷ್ಕಾರದಲ್ಲಿ ಯುವಜನರ ಪಾತ್ರ ಅತ್ಯಗತ್ಯ.
ಇತಿಹಾಸ: 1991ರಲ್ಲಿ ವಿಯೆನ್ನಾದದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯುವ ದಿನದ ಕುರಿತು ಪ್ರಸ್ತಾಪ ಸಲ್ಲಿಸಲಾಯಿತು. ಯುವ ಸಂಘಟನೆಗಳ ಸಹಭಾಗಿತ್ವದಲ್ಲಿ ವಿಶ್ವಸಂಸ್ಥೆ ಇದಕ್ಕಾಗಿ ವಿಶೇಷವಾಗಿ ನಿಧಿ ಸಂಗ್ರಹಣೆ ಮತ್ತು ಪ್ರಚಾರ ನಡೆಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಯುವ ದಿನದ ಕುರಿತು ಶಿಫಾರಸು ಮಾಡಿದರು. 1998ರಲ್ಲಿ ವಿಶ್ವ ಸಂಸ್ಥೆಯ ವಿಶ್ವ ಸಮ್ಮೇಳನದ ಮೊದಲ ಅಧಿವೇಶನದಿಂದ ಆಗಸ್ಟ್ 12 ಅನ್ನು ಅಂತಾರಾಷ್ಟ್ರೀಯ ಯುವ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.
ಈ ಅಧಿವೇಶನದಲ್ಲಿ ಯುವಜನರಿಗಾಗಿ ಕ್ರಿಯಾಶೀಲತೆಯ ವಿಶ್ವ ಕಾರ್ಯಕ್ರಮದ ಉತ್ತಮ ಜಾಗೃತಿಯನ್ನು ಉತ್ತೇಜಿಸುವ ಚಟುವಟಿಕೆ ಕುರಿತ ಜಾಗೃತಿಯನ್ನು 1996ರ ಸಾಮಾನ್ಯ ಸಭೆಯಲ್ಲಿ ಅಳವಡಿಸಿಕೊಳ್ಳಲಾಯಿತು.
ಯುವ ಜನತೆ ಕೇವಲ ಭವಿಷ್ಯವಲ್ಲ, ಅವರು ಪ್ರಸ್ತುತ ಕೂಡ: ಅಂತಾರಾಷ್ಟ್ರೀಯ ಯುವ ದಿನದ ಹಿನ್ನೆಲೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಯುಎನ್ಎಫ್ಪಿಎ, ಯುವ ಜನತೆ ಕೇವಲ ಭವಿಷ್ಯವಲ್ಲ. ಅವರು ಪ್ರಸ್ತುತ, ಎಲ್ಲರಿಗೂ ಸುರಕ್ಷಿತವಾದ, ಹೆಚ್ಚು ಅಂತರ್ಗತ ಜಗತ್ತನ್ನು ರೂಪಿಸುವಲ್ಲಿ ಅವರ ಧ್ವನಿಗಳು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಜಗತ್ತಿನಲ್ಲಿ ಜನಿಸಿದ ಯುವಜನತೆ ಶಿಕ್ಷಣ, ಉದ್ಯೋಗಗಳು ಮತ್ತು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಕುರಿತು ಗುಣಮಟ್ಟದ ಮಾಹಿತಿಗಳನ್ನು ತಂತ್ರಜ್ಞಾನದ ಮೂಲಕ ಪಡೆಯುತ್ತಿದ್ದಾರೆ. ಇದೇ ವೇಳೆ ತಂತ್ರಜ್ಞಾನ ಅವರ ಮೇಲೆ ಹಾನಿಯನ್ನು ಮಾಡುತ್ತಿದೆ. ಹದಿಹರೆಯದ ಯುವಜನತೆಯಲ್ಲಿ ಲಿಂಗಾಧಾರಿತ ಹಿಂಸಾಚಾರದ ಅಪಾಯ ಹೆಚ್ಚುತ್ತಿದೆ. ಇಂದು ಅಂತಾರಾಷ್ಟ್ರೀಯ ಯುವ ದಿನವನ್ನು ಡಿಜಿಟಲ್ ಮತ್ತು ಭೌತಿಕ ಜಗತ್ತನ್ನು ಹೆಚ್ಚು ಸಮಾನ, ನ್ಯಾಯಯುತ, ಶಾಂತಿಯುತ ಮತ್ತು ಸುರಕ್ಷಿತವಾಗಿಸುವ ಶಕ್ತಿಯನ್ನು ರೂಪಿಸಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವ ಆನೆ ದಿನ : ಏನಿದರ ಇತಿಹಾಸ, ಮಹತ್ವ - ಹೇಗಿದೆ ಗೊತ್ತೆ ಗಜಪಡೆಗಳ ಬದುಕು?