ಜೈಪುರ: ಸಂವಹನಕ್ಕಾಗಿ ಭಾಷೆ ಅತಿ ಮುಖ್ಯ. ಶ್ರವಣ ದೋಷ ಉಳ್ಳವರು, ಮಾತು ಬರದವರು ಮಾತನಾಡುವ ಸಂಕೇತ ಭಾಷೆ ಕೂಡ ಮುಖ್ಯವೇ. ಈ ಸಂಕೇತ ಭಾಷೆಯ ಅಭಿವೃದ್ಧಿ ಮತ್ತು ಸಂರಕ್ಷಣೆಯನ್ನು ಬೆಂಬಲಿಸುವ ಉದ್ದೇಶದಿಂದಲೇ ಸೆಪ್ಟೆಂಬರ್ 23 ಅನ್ನು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನು ಆಚರಿಸಲಾಗುತ್ತದೆ. ಇಂತಹದ್ದೊಂದು ದಿನಕ್ಕೆ ತನ್ನದೇಯಾದ ಇತಿಹಾಸ ಹಾಗೂ ಮಹತ್ವ ಇದೆಯಾದರೂ ಈ ವಿಶೇಷ ದಿನದಂದು, ಶ್ರವಣ ದೋಷ ಉಳ್ಳವರ ಸಮಸ್ಯೆಗಳು, ಅವರ ಅಳಲು, ಅಸಮಾನತೆ, ಭಾಷೆಯ ಏಳ್ಗೆ ಮತ್ತು ಸಂಕೇತ ಭಾಷೆಯ ಕುರಿತು ಹಲವೆಡೆ ಚರ್ಚಿಸಲಾಗುತ್ತದೆ.
ಇಂದಿಗೂ ಸಹ, ಅಗತ್ಯ ದೈನಂದಿನ ಕೆಲಸಗಳಿಗೆ ಸಂಕೇತ ಭಾಷಾ ವ್ಯಾಖ್ಯಾನಕಾರರ ಕೊರತೆಯಿಂದಾಗಿ, ಕಿವುಡರು ಸಾಮಾನ್ಯ ಸಂವಹನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ನೀಡಲು, ನೂಪುರ್ ಎಂಬ ಸಂಸ್ಥೆಯು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಸಾಫ್ಟ್ವೇರ್ವೊಂದನ್ನು ಸಿದ್ಧಪಡಿಸಿದ್ದು, ಅದರ ಉಚಿತ ಇಂಟರ್ಪ್ರಿಟರ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೊಲೀಸರ ಸಹಕಾರದೊಂದಿಗೆ ನೂಪುರ್ ಸಂಸ್ಥೆ ಕಿವುಡರಿಗೆ ಈ ಕ್ಯೂಆರ್ ಕೋಡ್ ಮೂಲಕ ಇಂತಹದ್ದೊಂದು ಅನುಕೂಲ ಮಾಡಿಕೊಡುತ್ತಿದೆ.
ಬರೆಯಲು ಕಲಿಸಬೇಕು: ಈಟಿವಿ ಭಾರತದ ಜೊತೆ ಮಾತನಾಡಿದ ನೂಪುರ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಂಜ್ಞಾ ಭಾಷಾ ತಜ್ಞ ಮನೋಜ್ ಭಾರದ್ವಾಜ್, ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಕಿವುಡರಿಗಾಗಿ ಹಲವು ಬಗೆಯ ತಂತ್ರಜ್ಞಾನ ಬಂದಿದ್ದರೂ ಈ ಮಕ್ಕಳು ಸಮಸ್ಯೆ ಅನುಭವಿಸುತ್ತಿರುವುದು ತಪ್ಪಿಲ್ಲ. ಆಳುವ ಸರ್ಕಾರಗಳ ನಿರ್ಲಕ್ಷ್ಯ, ಅವ್ಯವಹಾರ, ಭ್ರಷ್ಟಾಚಾರ ಈ ಮಕ್ಕಳೊಂದಿಗೆ ಆಟವಾಡುತ್ತಿರುವ ಆತಂಕಕಾರಿಯಾಗಿದೆ. ಪ್ರಾಥಮಿಕ ಶಿಕ್ಷಣದ ಸಮಯದಲ್ಲಿ ಈ ಮಕ್ಕಳಿಗೆ ಸಂಕೇತ ಭಾಷೆಯ ಜ್ಞಾನವನ್ನು ನೀಡಲಾಗುತ್ತದೆ. ಆದರೆ, ಅವರಿಗೆ ಹೇಗೆ ಬರೆಯಬೇಕೆಂದು ಕಲಿಸಿಕೊಡಲಾಗುತ್ತಿಲ್ಲ. ಹಲವೆಡೆ ಸಂಜ್ಞಾ ಭಾಷೆಯನ್ನು ವಿವರಿಸಲು ಜನರೇ ಇಲ್ಲ, ಈ ಪರಿಸ್ಥಿತಿಯಲ್ಲಿ ಅನೇಕ ಕಿವುಡರು ತಮ್ಮ ಭಾವನೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೆ ತೊಂದರೆಗೊಳಗಾಗುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಅವರಿಗೆ ಬರವಣಿಗೆ ಕಲಿಸಿದ್ದರೆ ಈ ಸಮಸ್ಯೆಯಿಂದ ಹೊರಬರಬಹುದಿತ್ತು. ಆದರೆ, ಅದಾವುದು ಆಗಿಲ್ಲ. ಶ್ರವಣ ದೋಷ ಉಳ್ಳವರು ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದಕ್ಕೆ ಬರವಣಿಗೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಕೆಲಸವಾಗುಬೇಕಿದೆ ಎಂದರು.
ಇಂಟರ್ಪ್ರಿಟರ್ ಪಡೆಯುವುದು ದೊಡ್ಡ ಸಮಸ್ಯೆಯಾಗಿದೆ: ಸಾಮಾನ್ಯವಾಗಿ ಕಿವುಡರು ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಸಂವಹನ ನಡೆಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸತತ ಪ್ರಯತ್ನಗಳ ನಡುವೆಯೂ ರಾಜಸ್ಥಾನದಲ್ಲಿ ಜನಸಾಮಾನ್ಯರಿಗೆ ಸಂಕೇತ ಭಾಷೆ ಲಭ್ಯವಾಗದ ಕಾರಣ ಈ ಸಮಸ್ಯೆ ಉದ್ಭವಿಸುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಸಂಜ್ಞಾ ಭಾಷೆಯ ಮೂಲಕ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಸರ್ಕಾರದ ಮಟ್ಟದಲ್ಲಿ ಹಲವಾರು ಪ್ರಯತ್ನಗಳು ನಡೆದಿವೆ. ಆದರೆ, ಸಾಮಾನ್ಯ ಜನರನ್ನು ಬಿಟ್ಟರೆ, ಸಂಕೇತ ಭಾಷೆಯ ಮಾಹಿತಿಯು ಸರ್ಕಾರಿ ವ್ಯವಸ್ಥೆಗೆ ತಲುಪಿಲ್ಲ. ಇಂದಿಗೂ, ವಿಶೇಷವಾಗಿ ತುರ್ತು ಸೇವೆಗಳಲ್ಲಿ, ಕಿವುಡರಿಗೆ ತಮ್ಮ ಸಮಸ್ಯೆಗಳನ್ನು ವಿವರಿಸಲು ಇಂಟರ್ಪ್ರಿಟರ್ಗಳ (ವ್ಯಾಖ್ಯಾನಕಾರ) ಅಗತ್ಯವಿದೆ. ಅವುಗಳು ಸುಲಭವಾಗಿ ಲಭ್ಯವಿಲ್ಲ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ನೂಪುರ್ ಸಂಸ್ಥೆಯು ಅಂತಹ ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸಿದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ಕಿವುಡ ಅಭ್ಯರ್ಥಿಗಳು ವಿಡಿಯೊ ಕರೆ ಮೂಲಕ ಇಂಟರ್ಪ್ರಿಟರ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಕಿವುಡರ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಸಂವಹನಕ್ಕಾಗಿ ಇಲ್ಲಿಯವರೆಗೆ ಇಂಟರ್ಪ್ರಿಟರ್ ಮಾಡಲು ತೊಂದರೆ ಅನುಭವಿಸಲಾಗುತ್ತಿತ್ತು. ಆದರೆ, ಸದ್ಯ ಈ QR ಕೋಡ್ ಸ್ಕ್ಯಾನ್ ಮಾಡುವ ಇಂಟರ್ಪ್ರಿಟರ್ ಅನ್ನು ಸುಲಭವಾಗಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುತ್ತಿಲ್ಲ, ಅಲ್ಲದೇ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ ಎನ್ನುತ್ತಾರೆ ಮನೋಜ್ ಭಾರದ್ವಾಜ್.
ಇದು ಹೇಗೆ ಕೆಲಸ ಮಾಡುತ್ತದೆ: ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಕಿವುಡ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆಯಾದರೂ ಕೆಲವು ಕಿವುಡರು ಸೈಬರ್ ವಂಚನೆಗೆ ಬಲಿಯಾಗುತ್ತಿರುವುದು ತಪ್ಪಿಲ್ಲ. ಇದಕ್ಕಾಗಿ ವಿಭಿನ್ನ ರೀತಿಯ ನೈಜ ಅಪರಾಧಗಳ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಸೈಬರ್ ಕಳ್ಳರು ಹೇಗೆಲ್ಲ ಅಪರಾಧಗಳನ್ನು ಎಸಗುತ್ತಾರೆ ಅನ್ನೋದನ್ನು ಅವರ ದಾರಿಯಲ್ಲೇ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರ ಅಡಿ, ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡದೇ ಮತ್ತು ಯಾವುದೇ ಶುಲ್ಕವನ್ನು ಪಾವತಿಸದೆ, ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಿಡಿಯೊ ಕರೆಯನ್ನು ಸಂಪರ್ಕಿಸಲಾಗುತ್ತದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಲಿಂಕ್ ಅನ್ನು ರಚಿಸಲಾಗುತ್ತದೆ. ನೀವು ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಸಂಸ್ಥೆಯು ಒದಗಿಸಿದ ಸಂಕೇತ ಭಾಷಾ ತಜ್ಞರಿಗೆ ವಿಡಿಯೊ ಕರೆಯನ್ನು ಮಾಡಲಾಗುತ್ತದೆ. ಆಗ ಶ್ರವಣ ದೋಷ ಉಳ್ಳವರು ಕೈ ಸನ್ನೆ, ಸಂಕೇತ ಮೂಲಕ ಸಂವಹನ ಮಾಡಬಹುದಾಗಿದೆ ಎನ್ನುತ್ತಾರೆ ಭಾಷಾ ತಜ್ಞ ಮನೋಜ್ ಭಾರದ್ವಾಜ್.
ಈಟಿವಿ ಭಾರತದ ಜೊತೆಗೆ ಮಾತನಾಡುತ್ತಾ, ಮನೋಜ್ ಭಾರದ್ವಾಜ್ ಅವರು QR ಕೋಟ್ ಬಳಸಿಕೊಂಡು ಲೈವ್ ಡೆಮೊ ನೀಡಿದರು. ಇದರಲ್ಲಿ ಶ್ರವಣ ದೋಷ ಉಳ್ಳವ ವ್ಯಕ್ತಿಯೊಬ್ಬರು ಈ ತಂತ್ರಜ್ಞಾನದ ಮೂಲಕ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಕಳೆದ 7 ವರ್ಷಗಳಿಂದ ಸರಿಯಾದ ಮೌಲ್ಯಮಾಪನ ಆಗದ ಹಿನ್ನೆಲೆ ಕಿವುಡ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗಿಲ್ಲ. ಕೆಲವೊಮ್ಮೆ ಶೇ.40 ಹಾಗೂ ಕೆಲವೊಮ್ಮೆ ಶೇ.100 ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದಾಗಿ ಸರ್ಕಾರ ಯಾವುದೇ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಕೇತ ಭಾಷೆಯಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪತ್ರಿಕಾಗೋಷ್ಠಿ - International Day of Sign Languages