ETV Bharat / bharat

ಉದ್ಯಮಿಗಳಿಂದ ಬಜೆಟ್​​ಗೆ ಮೆಚ್ಚುಗೆ; ಆರ್ಥಿಕಗೆ ಬೆಳವಣಿಗೆ ಮತ್ತು ಸುಧಾರಣೆಗೆ ಒತ್ತು ಎಂದು ಗುಣಗಾನ - union budget 2024 25 - UNION BUDGET 2024 25

ಭವಿಷ್ಯದ ಆರ್ಥಿಕ ಬೆಳವಣಿಗೆ ಸಮಗ್ರ ಪ್ರಸ್ತಾವ ಮತ್ತು ಸುಲಭ ಉದ್ಯಮ ಹಾಗೂ ಸಾಂಸ್ಥಿಕ ಸುಧಾರಣೆಗೆ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಈ ಬಗ್ಗೆ ಉದ್ಯಮ ಒಲಯ ಹರ್ಷ ವ್ಯಕ್ತಪಡಿಸಿದೆ.

industry-hails-budget-2024-25-as-a-game-changer-for-economic-growth-and-reforms
ನಿರ್ಮಲಾ ಸೀತಾರಾಮನ್​ (ಐಎಎನ್​ಎಸ್​)
author img

By ANI

Published : Jul 23, 2024, 5:09 PM IST

ನವದೆಹಲಿ: ನಿರ್ಮಲಾ ಸೀತಾರಾಮನ್​ ಮಂಡಿಸಿದ 2024-25ರ ಬಜೆಟ್​ಗೆ ಉದ್ಯಮಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಭವಿಷ್ಯದ ಆರ್ಥಿಕ ಬೆಳವಣಿಗೆ ಸಮಗ್ರ ಪ್ರಸ್ತಾವ ಮತ್ತು ಸುಲಭ ಉದ್ಯಮ ಹಾಗೂ ಸಾಂಸ್ಥಿಕ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದಿದ್ದಾರೆ.

Industry hails Budget 2024-25 as a game-changer for economic growth and reforms
ಉದ್ಯಮಿಗಳಿಂದ ಬಜೆಟ್​​ಗೆ ಮೆಚ್ಚುಗೆ; ಆರ್ಥಿಕಗೆ ಬೆಳವಣಿಗೆ ಮತ್ತು ಸುಧಾರಣೆಗೆ ಒತ್ತು ಎಂದು ಗುಣಗಾನ (ETV Bharat)

ಬಜೆಟ್​ ಕುರಿತು ಪ್ರತಿಕ್ರಿಯಿಸಿರುವ ಕಾನ್ಫೆಡರೇಷನ್​ ಆಫ್​ ಇಂಡಿಯನ್​ ಇಂಡಸ್ಟ್ರಿ ಅಧ್ಯಕ್ಷ ಸಂಜೀವ್​ ಪುರಿ, ಬಜೆಟ್​ನಲ್ಲಿ ಎಲ್ಲ ಬಹು ವಲಯದ ವಿಶಾಲ ಶ್ರೇಣಿಯ ಹೂಡಿಕೆಗೆ ಒತ್ತು ನೀಡಲಾಗಿದೆ. ಉದ್ಯಮದ ಪ್ರಕ್ರಿಯೆ ಹಾಗೂ ಶಾಸನ ಕಾರ್ಯಗಳನ್ನು ಸರಳೀಕರಣಗೊಳಿಸಲು ಬಜೆಟ್​​​ ಒತ್ತು ನೀಡಿದೆ. ಕೃಷಿ ಮತ್ತು ಉತ್ಪಾದನೆಯಿಂದ ಇ- ಸೇವೆಗಳವರೆಗೆ ಹಲವಾರು ಕ್ಷೇತ್ರಗಳಿಗೆ ಸಾಕಷ್ಟು ಹೂಡಿಕೆಗಳನ್ನು ತಂದಿದೆ. ವ್ಯವಹಾರವನ್ನು ಸರಳೀಕರಣಗೊಳಿಸಲು ಹೆಚ್ಚಿನ ಗಮನವನ್ನು ನೀಡಲಾಗಿದೆ. ಉದ್ಯಮದ ಸರಳೀಕರಣ ಮತ್ತು ರಾಜ್ಯ ಮಟ್ಟದಲ್ಲಿ ಸುಧಾರಣೆ ತರಲು ಬಲ ತಂದಿದೆ ಎಂದಿದ್ದಾರೆ.

ಭೂಮಿಯ ಡಿಜೀಟಲಿಕರಣ ಕುರಿತು ಅವರು ಮಾತನಾಡಿದ್ದು, ಭೂ ಆಧಾರ್​​ ಕೇವಲ ಮನೆ ಅಭಿವೃದ್ಧಿಗೆ ಮಾತ್ರವಲ್ಲ, ಉತ್ಪಾದನೆಯೂ ಪ್ರಮುಖವಾಗಿದೆ. ಈ ರೀತಿಯ ಡಿಜಟಲೀಕರಣ ಮಾಡುವುದರಿಂದ ದಾವೆ ತಕರಾರುಗಳ ರಗಳೆ ತಪ್ಪಲಿದೆ ಎಂದು ಸಿಬಿಆರ್​ಇ ಫಾರ್​ ಇಂಡಿಯಾದ ಮುಖ್ಯಸ್ಥ ಅನ್ಶುಮನ್​ ಮ್ಯಾಗಜೈನ್​ ತಿಳಿಸಿದರು. ನಮ್ಮ ದೃಷ್ಟಿಯಲ್ಲಿ ಗಮನಿಸುವುದಾದರೆ ಭೂ ವಿವಾದದ ದಾವೆಗಳು ಹೆಚ್ಚಿನ ಮೌಲ್ಯ ಹೊಂದಿದೆ. ಇದು ಹೂಡಿಕೆಗಳಿಗೆ ಉತ್ತೇಜನ ನೀಡುತ್ತದೆ. ಇದು ಸರ್ಕಾರಕ್ಕೆ ತೆರಿಗೆ ಹಣದ ಸಂಗ್ರಹ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ನರೆಡ್ಕೊ ಮತ್ತು ಹಿರಾನಂದನಿ ಅಧ್ಯಕ್ಷ ನಿರಂಜನ್​ ಹಿರಾನಂದನಿ ಮಾತನಾಡಿ, ಉದ್ಯೋಗ ಕೇಂದ್ರಿತ ವಲಯಗಳ ಗುರಿಯನ್ನು ಹೊಂದಿರುವ ಹಣಕಾಸಿನ ಪ್ರೋತ್ಸಾಹ ಮತ್ತು ರಚನಾತ್ಮಕ ಸುಧಾರಣೆಗಳ ಮೇಲೆ ಬಜೆಟ್‌ನ ಗಮನ ನೀಡಲಾಗಿದೆ. ಖಾಸಗಿ ವಲಯದ ಇಂಟರ್ನ್‌ಶಿಪ್, ವೇತನ ಬೆಂಬಲ ಮತ್ತು ಸಿಎಸ್‌ಆರ್ ಅನುದಾನಿತ ತರಬೇತಿಯ ಮೂಲಕ ಯುವಕರ ಉದ್ಯೋಗಾವಕಾಶಕ್ಕೆ ಸರ್ಕಾರ ಒತ್ತು ನೀಡಿದೆ. ಪಿಎಂಎವೈ ನಗರ ಯೋಜನೆಯಡಿ 10 ಲಕ್ಷ ಕೋಟಿ ರೂ.ಗಳ ಹಂಚಿಕೆ, 3 ಕೋಟಿ ಮನೆಗಳ ಗುರಿಯನ್ನು ಗಮನದಲ್ಲಿಟ್ಟುಕೊಂಡು ಪಿಪಿಪಿ ಮಾದರಿಯ ಮೂಲಕ ಕೈಗಾರಿಕಾ ಪಾರ್ಕ್‌ಗಳಲ್ಲಿ ವಸತಿ ನಿಲಯಗಳ ಮೂಲಕ ಬಾಡಿಗೆ ವಸತಿ ಮತ್ತು 12 ಹೊಸ ಕೈಗಾರಿಕಾ ಉದ್ಯಾನಗಳ ಮಂಜೂರಾತಿಯು ನಗರಾಭಿವೃದ್ಧಿಗೆ ದೃಷ್ಟಿಯನ್ನು ತಿಳಿಸಿದೆ ಎಂದರು.

ಸೌರ ಮತ್ತು ನವೀಕರಿಸಬಹುದಾದ ಶಕ್ತಿ, ನೀರು ಮತ್ತು ಘನತ್ಯಾಜ್ಯ ನಿರ್ವಹಣೆಯ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸುವುದು ಹವಾಮಾನ ಸ್ಥಿತಿಸ್ಥಾಪಕ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಗುರಿಯೊಂದಿಗೆ ಹೊಂದಾಣಿಕೆಯಾಗಲಿದೆ. ರಾಜ್ಯ ಸರ್ಕಾರಗಳಿಗೆ ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಅಭಿವೃದ್ಧಿ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಉತ್ತೇಜಿಸಲು ಒತ್ತು ನೀಡುವುದು ನಿರ್ಣಾಯಕ ಹೆಜ್ಜೆಯಾಗಿದೆ. ಇದು ನಗರ ವಸತಿ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ಕೈಗೆಟುಕುವ ವಸತಿಗಳನ್ನು ಪ್ರವೇಶ ವಿಸ್ತರಣೆ ನಡೆಸಲಿದೆ. ಅಭಿವೃದ್ಧಿ ವೆಚ್ಚಗಳನ್ನು ಉತ್ತಮಗೊಳಿಸುವಿಕೆ ಬೇಡಿಕೆಯ ರೇಖೆಯನ್ನು ಉತ್ತೇಜಿಸುತ್ತದೆ ಎಂದರು.

ನೈಟ್​ ಫ್ರಾಂಕ್​ ಇಂಡಿಯಾ ಮ್ಯಾನೇಜಿಂಗ್​ ಡೈರೆಕ್ಟರ್​ ಮತ್ತು ಮುಖ್ಯಸ್ಥ ಶಿಶಿರ್​ ಬೈಜಲ್​ ಮಾತನಾಡಿ, ಸರ್ಕಾರ ಮೂಲಭೂತ ಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬದ್ಧ ಎಂಬುದನ್ನು ತೋರಿಸಿದೆ. ಇಂದಿನ ನಿರ್ಮಲಾ ಸೀತಾರಾಮನ್​ ಬಜೆಟ್​ ಅನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರದ 2024-25ರ ಬಜೆಟ್​​​​ ದೀರ್ಘಕಾಲದ ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಬಲಗೊಳಿಸುತ್ತದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿ ಗುರುತಿಸಲಾದ 12 ಕೈಗಾರಿಕಾ ಪಾರ್ಕ್ ಯೋಜನೆಗಳು ರಿಯಲ್ ಎಸ್ಟೇಟ್ ಅಭಿವೃದ್ಧಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಬೃಹತ್ ಉದ್ಯಮಗಳಾಗಿವೆ ಎಂದರು.

ಇದನ್ನೂ ಓದಿ: ಕೇಂದ್ರ ಬಜೆಟ್​: ಜಿಎಸ್​ಟಿ ತೆರಿಗೆ ಸರಳೀಕರಣ, ಉಳಿದ ಕ್ಷೇತ್ರಗಳಿಗೆ ವಿಸ್ತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.