ETV Bharat / bharat

ವಿಶ್ವದ ಅತ್ಯುತ್ತಮ ಶಾಲೆ ಪ್ರಶಸ್ತಿ ಗೆದ್ದ ದೆಹಲಿ: ಮಧುರೈ, ಮಧ್ಯಪ್ರದೇಶದ ಶಾಲೆಗಳಿಗೂ ಅವಾರ್ಡ್​​​

ಪ್ರತಿ ವರ್ಷ ವಿಶ್ವದ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ಆಕ್ಸೆಂಚರ್, ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಲೆಮನ್ ಫೌಂಡೇಶನ್ ಸಹಯೋಗದೊಂದಿಗೆ ಲಂಡನ್ ಮೂಲದ ಸಂಸ್ಥೆಯಾದ ಟಿ4 ಶಿಕ್ಷಣ ನೀಡುತ್ತಿದೆ.

indias three school got World's Best School Prizes 2024
ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಶಾಲಾ ಸಿಬ್ಬಂದಿ (ಈಟಿವಿ ಭಾರತ್​)
author img

By ETV Bharat Karnataka Team

Published : 3 hours ago

ನವದೆಹಲಿ: ದೆಹಲಿ, ಮಧ್ಯಪ್ರದೇಶ ಮತ್ತು ತಮಿಳುನಾಡಿನ ಮೂರು ಶಾಲೆಗಳು ವಿಶ್ವದ ಅತ್ಯುತ್ತಮ ಶಾಲಾ 2024 ಪ್ರಶಸ್ತಿ ಪಡೆದಿದೆ. ದೆಹಲಿಯ ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್, ರತ್ಲಾಮ್‌ನ ವಿನೋಬಾ ಭಾವೆ ಸಿಎಮ್ ರೈಸ್ ಸ್ಕೂಲ್​ ಮತ್ತು ಮಧುರೈನ ಕಲ್ವಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ಗೆ ಈ ಪ್ರಸಸ್ತಿ ಸಂದಾಯವಾಗಿದೆ.

ಪ್ರತಿ ವರ್ಷ ವಿಶ್ವದ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ಆಕ್ಸೆಂಚರ್, ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಲೆಮನ್ ಫೌಂಡೇಶನ್ ಸಹಯೋಗದೊಂದಿಗೆ ಲಂಡನ್ ಮೂಲದ ಸಂಸ್ಥೆಯಾದ ಟಿ4 ಶಿಕ್ಷಣ ನೀಡುತ್ತಿದೆ.

ಮಧ್ಯಪ್ರದೇಶದ ಈ ಶಾಲೆಗೆ ಬಹುಮಾನ: ಮಧ್ಯಪ್ರದೇಶದ ರತ್ಲಾಮ್​ನ ವಿನೋಬಾ ಭಾವೆ ಸಿಎಮ್ ರೈಸ್ ಸ್ಕೂಲ್ ಅನ್ನು ರಾಜ್ಯದಿಂದ ನಡೆಸಲಾಗುತ್ತಿದ್ದು, ನಾವೀನ್ಯತೆ ವಿಭಾಗದಲ್ಲಿ ಬಹುಮಾನ ಗೆದ್ದಿದೆ. ಕಿಂಡರ್​ಗಾರ್ಟನ್​​ನಿಂದ ಮಾಧ್ಯಮಿಕ ಶಿಕ್ಷಣದ ವರಿಗೆ ಇಲ್ಲಿ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಪ್ರಶಸ್ತಿ ಗೆದ್ದ ಶಾಲೆ ಕುರಿತು ಮಾತನಾಡಿದ ಆಕ್ಸೆಂಚರ್​ನ ಜಾಗತಿಕ ಕಾರ್ಪೊರೇಟ್​ ಪೌರತ್ವದ ವ್ಯವಸ್ಥಾಪಕ ನಿರ್ದೇಶಕ ಜಿಲ್​ ಹೆಂಟ್ಲಿ , ನಿಮ್ಮ ನಾವೀನ್ಯತೆ ಜಗತ್ತಿನೆಲ್ಲೆಡೆ ಅಸಂಖ್ಯ ಜನರನ್ನು ಪ್ರೇರೇಪಿಸುತ್ತದೆ. ನಮ್ಮ ಗ್ರಹವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ತೆಗೆದುಕೊಂಡಿರುವ ಕ್ರಮ ಅಮೋಘವಾಗಿದೆ ಎಂದು ಬಣ್ಣಿಸಿದ್ದಾರೆ.

ಪ್ರಶಸ್ತಿ ಪಡೆದ ಶಾಲೆಗೆ ಅಭಿನಂದನೆ ಸಲ್ಲಿಸಿದ ಮಧ್ಯಪ್ರದೇಶ ಸಿಎಂ: ಪ್ರಶಸ್ತಿ ಗೆದ್ದ ಶಾಲೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ಮತ್ತು ಶಿಕ್ಷಣ ಸಚಿವ ರಾವ್ ಉದಯ್ ಪ್ರತಾಪ್ ಸಿಂಗ್ ಅಭಿನಂದಿಸಿದ್ದು, ಶಾಲೆಯ ಸಿಬ್ಬಂದಿ ಮತ್ತು ಪೋಷಕರು, ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.

ಟಿ4 ಶಿಕ್ಷಣ ಸಂಸ್ಥಾಪಕ ವಿಕಾಸ್​​ ಪೋಟಾ ಕೂಡ ಪ್ರಶಸ್ತಿಗೆದ್ದ ಶಾಲೆಗಳಿಗೆ ಅಭಿನಂದಿಸಿದ್ದಾರೆ. ಭಾರತದ ಒಂದಲ್ಲ, ಮೂರು ಶಾಲೆಗಳು ಈ ಪ್ರಶಸ್ತಿ ಗಳಿಸಿರುವುದು ದೇಶದ ಸಂಸ್ಥೆಗಳ ನಿಜವಾದ ಜಗತ್ತಿನ ಅತ್ಯುತ್ತಮ ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದನ್ನು ತೋರಿಸಿದೆ ಎಂದು ತಿಳಿಸಿದರು.

ಪ್ರಶಸ್ತಿ ಪಡೆದ ಶಾಲೆಗಳಿಗೆ ಇಷ್ಟು ಮೊತ್ತದ ಬಹುಮಾನ: ವಿಜೇತ ಶಾಲೆಗಳು ತಲಾ 10,000 ಡಾಲರ್​ ಬಹುಮಾನ ಪಡೆಯುತ್ತವೆ. ಕಲ್ವಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕೂಡ ಟಿ4 ಎಜುಕೇಶನ್‌ನ ಬೆಸ್ಟ್ ಸ್ಕೂಲ್ ಟು ವರ್ಕ್ ಪ್ರೋಗ್ರಾಂನಲ್ಲಿ ಸದಸ್ಯತ್ವ ಪಡೆಯಲಿದೆ.

ಜಗತ್ತಿನ ಉತ್ತಮ ಶಾಲೆ ಪ್ರಶಸ್ತಿಗೆದ್ದ ಎಲ್ಲ ವಿಜೇತರು ಮತ್ತು ಅಂತಿಮ ಸ್ಪರ್ಧಿಗಳನ್ನು ಇದೇ ನವೆಂಬರ್​ 23-24ರಂದು ದುಬೈನಲ್ಲಿ ನಡೆಯುವ ವಿಶ್ವ ಶಾಲೆಗಳ ಶೃಂಗಸಭೆಗೆ ಆಹ್ವಾನಿಸಲಾಗುವುದು.

ಇದನ್ನೂ ಓದಿ: ಕೇರಳದಲ್ಲಿ ₹75 ಕೋಟಿ ಮೌಲ್ಯದ 104 ಕೆ.ಜಿ ಅಕ್ರಮ ಚಿನ್ನ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.