ETV Bharat / bharat

ಸೆಮಿಕಂಡಕ್ಟರ್ಸ್​, ನಿರ್ಣಾಯಕ ಖನಿಜಗಳ ಮೇಲೆ ಸಹಕಾರ ಹೆಚ್ಚಿಸಲು ಭಾರತ - ಅಮೆರಿಕ ಮಧ್ಯೆ ಒಪ್ಪಂದ - India US Agreement - INDIA US AGREEMENT

ನವದೆಹಲಿಯಲ್ಲಿ ಸೋಮವಾರ ನಡೆದ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ನೇತೃತ್ವದ ಭಾರತ- ಅಮೆರಿಕ ಉಪಕ್ರಮದ ಸಭೆಯಲ್ಲಿ ಸೆಮಿಕಂಡಕ್ಟರ್ಸ್​, ನಿರ್ಣಾಯಕ ಖನಿಜಗಳ ಮೇಲೆ ಸಹಕಾರ ಹೆಚ್ಚಿಸಲು ಭಾರತ- ಅಮೆರಿಕ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ.

America India Fact Sheet  America  India  semiconductors
ಸೆಮಿಕಂಡಕ್ಟರ್ಸ್​, ನಿರ್ಣಾಯಕ ಖನಿಜಗಳ ಮೇಲೆ ಸಹಕಾರ ಹೆಚ್ಚಿಸಲು ಭಾರತ- ಅಮೆರಿಕ ಮಧ್ಯೆ ಒಪ್ಪಂದ (ANI)
author img

By ETV Bharat Karnataka Team

Published : Jun 18, 2024, 7:43 AM IST

ನವದೆಹಲಿ: ಪೂರೈಕೆ ಸರಪಳಿ, ಅರೆವಾಹಕಗಳು ಮತ್ತು ನಿರ್ಣಾಯಕ ಖನಿಜಗಳ ಮೇಲೆ ನಿಕಟ ಒಪ್ಪಂದ ಮತ್ತು ಸಹಕಾರಕ್ಕೆ ಭಾರತ ಮತ್ತು ಅಮೆರಿಕ ಪರಸ್ಪರ ಗ್ರಿನ್​ ಸಿಗ್ನಲ್​​ ನೀಡಿವೆ. ನವದೆಹಲಿಯಲ್ಲಿ ನಡೆದ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ನೇತೃತ್ವದ ಭಾರತ - ಅಮೆರಿಕ ಉಪಕ್ರಮದ ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅಮೆರಿಕ ಕೌಂಟರ್ ಜೇಕ್ ಸುಲ್ಲಿವನ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಯುದ್ಧ ಸಾಮಗ್ರಿಗಳಿಗಾಗಿ ಅರೆವಾಹಕ ವಿನ್ಯಾಸ ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಸಹ - ಅಭಿವೃದ್ಧಿಪಡಿಸಲು ಭಾರತ ಮತ್ತು ಅಮೆರಿಕ ಸೋಮವಾರ ಹೊಸ ಕಾರ್ಯತಂತ್ರದ ಅರೆವಾಹಕ (ಸೆಮಿಕಂಡಕ್ಟರ್) ಪಾಲುದಾರಿಕೆಯನ್ನು ಪ್ರಾರಂಭಿಸಿವೆ.

ಅಮೆರಿಕ ಮತ್ತು ಭಾರತವು ಫ್ಯಾಕ್ಟ್ ಶೀಟ್: "ಜನರಲ್ ಅಟಾಮಿಕ್ಸ್ ಮತ್ತು 3rdiTech ನಡುವೆ ಹೊಸ ಸ್ಟ್ರಾಟೆಜಿಕ್ ಸೆಮಿಕಂಡಕ್ಟರ್ ಪಾಲುದಾರಿಕೆಯನ್ನು ಪ್ರಾರಂಭಿಸುವುದು, ಅರೆವಾಹಕ ವಿನ್ಯಾಸ ಮತ್ತು ಯುದ್ಧಸಾಮಗ್ರಿ ಮತ್ತು ಇತರ ರಾಷ್ಟ್ರೀಯ ಭದ್ರತೆ - ಕೇಂದ್ರಿತ ಎಲೆಕ್ಟ್ರಾನಿಕ್ಸ್ ಪ್ಲಾಟ್‌ಫಾರ್ಮ್‌ಗಳ ತಯಾರಿಕೆಯನ್ನು ಸಹ - ಅಭಿವೃದ್ಧಿಪಡಿಸಲಾಗುವುದು" ಎಂದು ಅಮೆರಿಕ ಮತ್ತು ಭಾರತವು ಫ್ಯಾಕ್ಟ್ ಶೀಟ್ ಹೊರಡಿಸಿವೆ.

ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಈಗಾಗಲೇ ಅಮೆರಿಕ, ಜಪಾನ್ ಮತ್ತು ಚೀನಾ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ. ಈ ಮಧ್ಯೆ, ಅಮೆರಿಕ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ​​​​ಮತ್ತು ಇಂಡಿಯಾ ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್ ಅಸೋಸಿಯೇಷನ್ ​​ನಡುವಿನ ಪಾಲುದಾರಿಕೆಯು ಉದ್ಯಮದ ಅವಕಾಶಗಳನ್ನು ಗುರುತಿಸುತ್ತದೆ ಮತ್ತು ದೀರ್ಘಾವಧಿಯ ಕಾರ್ಯತಂತ್ರದ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ.

ಸೆಮಿಕಂಡಕ್ಟರ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನ: ಭಾರತದಲ್ಲಿನ ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತೀಯ ಮತ್ತು ಅಮೆರಿಕ ಹೂಡಿಕೆದಾರರೊಂದಿಗಿನ ಈ ಒಪ್ಪಂದವು ಭಾರತದ ದೃಢವಾದ ಸೆಮಿಕಂಡಕ್ಟರ್ ಮತ್ತು ಮಾಹಿತಿ ಸಂವಹನ ತಂತ್ರಜ್ಞಾನಕ್ಕೆ ಪೂರಕ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಿದೆ. ಭಾರತವು ಕಳೆದ ಮಾರ್ಚ್‌ನಲ್ಲಿ ಮೂರು ಸೆಮಿಕಂಡಕ್ಟರ್ ಸ್ಥಾವರ ಪ್ರಸ್ತಾವನೆಗಳನ್ನು ಅನುಮೋದಿಸಿತು. ಇದು ಭಾರತದ ಅರೆವಾಹಕ ಉತ್ಪಾದನೆಗೆ ಪೂರಕ ವಾತಾವರಣ ಸೃಷ್ಟಿಸುವ ಗುರಿ ಹೊಂದಿದೆ. ಯೋಜನೆಗಳು 1.26 ಲಕ್ಷ ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯನ್ನು ಒಳಗೊಂಡಿದೆ. ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯಕ್ಕೆ ಗಣನೀಯ ಕೊಡುಗೆ ನೀಡುವ ನಿರೀಕ್ಷೆಯಿದೆ.

ಮೂರು ಸೆಮಿಕಂಡಕ್ಟರ್ ಘಟಕಗಳು: ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ (PSMC) ಗುಜರಾತ್‌ನ ಧೋಲೆರಾದಲ್ಲಿ ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಪ್ಲಾಂಟ್ (ಫ್ಯಾಬ್) ಅನ್ನು ಸ್ಥಾಪಿಸುತ್ತದೆ. ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್ (TSAT) ಅಸ್ಸಾಂನ ಮೊರಿಗಾಂವ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತದೆ. CG Power, Renesas Electronics Corp., ಜಪಾನ್, ಮತ್ತು Stars Microelectronics, Thailand ಸಹಭಾಗಿತ್ವದಲ್ಲಿ, ಗುಜರಾತ್‌ನ ಸನಂದ್‌ನಲ್ಲಿ ಅರೆವಾಹಕ ಘಟಕವನ್ನು ಸ್ಥಾಪಿಸಲಾಗುತ್ತದೆ.

ನಿರ್ಣಾಯಕ ಖನಿಜಗಳ ವಿಶ್ವಾಸಾರ್ಹ ಪೂರೈಕೆ: ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಇತರ ಪ್ರಮುಖ ಕೈಗಾರಿಕೆಗಳಿಗೆ ಅಗತ್ಯವಾದ ನಿರ್ಣಾಯಕ ಖನಿಜಗಳ ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮತ್ತು ಭಾರತವು ಒಟ್ಟಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ. ಮಿನರಲ್ ಸೆಕ್ಯುರಿಟಿ ಪಾಲುದಾರಿಕೆಯಲ್ಲಿ ಭಾರತದ ಪ್ರಮುಖ ಪಾತ್ರವನ್ನು ಉತ್ತೇಜಿಸುವುದು, ದಕ್ಷಿಣ ಅಮೆರಿಕಾದಲ್ಲಿ ಲಿಥಿಯಂ ಸಂಪನ್ಮೂಲ ಯೋಜನೆಯಲ್ಲಿ ಸಹ-ಹೂಡಿಕೆ ಸೇರಿದಂತೆ ನಿರ್ಣಾಯಕ ಖನಿಜ ಪೂರೈಕೆ ಸರಪಳಿಗಳನ್ನು ಜವಾಬ್ದಾರಿಯುತವಾಗಿ ಮತ್ತು ಸಮರ್ಥನೀಯವಾಗಿ ವೈವಿಧ್ಯಗೊಳಿಸಲು ನಿರ್ಧರಿಸಲಾಗಿದೆ" ಎಂದು ಫ್ಯಾಕ್ಟ್ ಶೀಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಸಂಸತ್ ಭವನದಲ್ಲಿ ಆಸ್ಟ್ರೇಲಿಯ ಪಿಎಂ ಭೇಟಿ ಮಾಡಿದ ಚೀನಾ ಪ್ರಧಾನಿ - Chinese PM Australian PM meeting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.