ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಪ್ರತಿಪಕ್ಷಗಳು ಆಡಳಿತವಿರುವ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದಲ್ಲಿ 'I.N.D.I.A' ಮೈತ್ರಿಕೂಟದ ಸಂಸದರು ಇಂದು ಪ್ರತಿಭಟನೆ ನಡೆಸಿದರು. ಸಂಸತ್ತಿನ ಮಕರ ದ್ವಾರದ ಬಳಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಡಪಕ್ಷಗಳ ಹಲವು ನಾಯಕರು ಪಾಲ್ಗೊಂಡರು.
VIDEO | " there was injustice in the budget. we are fighting to get justice," says congress president mallikarjun kharge (@kharge) as he arrives in Parliament.
— Press Trust of India (@PTI_News) July 24, 2024
Opposition MPs led by the Congress are protesting inside Parliament premises claiming discrimination in Union Budget… pic.twitter.com/aDRjbN1eRb
ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ''ಇದು ಜನವಿರೋಧಿ ಬಜೆಟ್. ಯಾರಿಗೂ ನ್ಯಾಯ ಸಿಕ್ಕಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿದ್ದಾರೆ, ಆದರೆ ವಿಶೇಷ ಸ್ಥಾನಮಾನ ನೀಡಿಲ್ಲ. ಇದೊಂದು ಮೋಸದ ಬಜೆಟ್. ಇದರಿಂದ ಜನತೆಗೆ ಅನ್ಯಾಯವಾಗಿದೆ'' ಎಂದು ದೂರಿದರು. ಇದೇ ವೇಳೆ, ಇತರ ಸಂಸದರು 'ನಮಗೆ ಭಾರತದ ಬಜೆಟ್ ಬೇಕು. ಎನ್‌ಡಿಎ ಬಜೆಟ್ ಅಲ್ಲ. ಬಜೆಟ್‌ನಲ್ಲಿ ಎನ್‌ಡಿಎಯು ಭಾರತಕ್ಕೆ ದ್ರೋಹ ಬಗೆದಿದೆ' ಎಂಬ ಭಿತ್ತಿಫಲಕಗಳ ಹಿಡಿದು ಘೋಷಣೆ ಕೂಗಿದರು.
VIDEO | Opposition MPs stage protest outside Parliament against Union Budget 2024, which was tabled yesterday.
— Press Trust of India (@PTI_News) July 24, 2024
(Full video available on PTI Videos - https://t.co/n147TvqRQz) pic.twitter.com/myjeWSaokK
ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ, ಸಂಸದ ಕೆ. ಸಿ. ವೇಣುಗೋಪಾಲ್, ''ನಿನ್ನೆಯ ಬಜೆಟ್ ಮೂಲಕ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಎಲ್ಲ ತತ್ವಗಳನ್ನು ಉಲ್ಲಂಘಿಸಿದೆ. ಸರ್ಕಾರವನ್ನು ರಕ್ಷಿಸಿಕೊಳ್ಳುವುದೇ ಈ ಬಜೆಟ್‌ನ ಉದ್ದೇಶವಾಗಿದೆ. ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹಣ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಕೇವಲ ಎರಡು ರಾಜ್ಯಗಳಿಗೆ ಇಷ್ಟು ಸೊಪ್ಪು ಹಾಕಿರುವುದು ಸರಿಯಲ್ಲ. ಇತರ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ಆಂದೋಲನ ನಡೆಸುತ್ತಿದ್ದೇವೆ. ಬಜೆಟ್ ಬಗ್ಗೆ ಜನ ಕೂಡ ರೊಚ್ಚಿಗೆದ್ದಿದ್ದಾರೆ'' ಎಂದರು.
ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ''ಬಜೆಟ್‌ನಲ್ಲಿ ಯುವಕರಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡಲಾಗಿದೆ'' ಎಂದು ವಾಗ್ದಾಳಿ ನಡೆಸಿದರು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ''ನಮ್ಮ ರಾಜ್ಯ ಉತ್ತರ ಪ್ರದೇಶಕ್ಕೆ ತಾರತಮ್ಯ ಮಾಡಲಾಗಿದೆ. ಅಲ್ಲದೇ, ಯುವಕರ ಉದ್ಯೋಗಗಳನ್ನು ಕಿತ್ತುಕೊಂಡು, ಈಗ ಅವರಿಗೆ ಶಿಷ್ಯವೇತನ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ'' ಎಂದು ಟೀಕಿಸಿದರು.
VIDEO | #Congress MP Sonia Gandhi and Samajwadi Party MP Jaya Bachchan were seen interacting with each other during protest by INDIA bloc MPs over 'discrimination' against opposition-ruled states in Union Budget, earlier today inside the Parliament premises.#Budget2024
— Press Trust of India (@PTI_News) July 24, 2024
(Full… pic.twitter.com/h8ZmMsYf1R
ಮಂಗಳವಾರ ಸಂಜೆ, ಲೋಕಸಭೆ, ರಾಜ್ಯಸಭೆಯ ಆಯಾ ಪಕ್ಷಗಳ ಸಂಸದೀಯ ನಾಯಕರು ಖರ್ಗೆ ನಿವಾಸದಲ್ಲಿ ಸಭೆ ಸೇರಿ ಬಜೆಟ್ ವಿರುದ್ಧ ಪ್ರತಿಭಟನೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ, ಬಜೆಟ್ನಲ್ಲಿನ ಅನ್ಯಾಯವನ್ನು ಖಂಡಿಸಿ, ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದ ಸಿಎಂ ಹಾಗೂ ತಮಿಳುನಾಡು ಸಿಎಂ ಜುಲೈ 27ರಂದು ನಿಗದಿಯಾಗಿರುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ 4.1 ಕೋಟಿ ಉದ್ಯೋಗ ಸೃಷ್ಟಿಗೆ ಕೇಂದ್ರ ಬಜೆಟ್ ಒತ್ತು