ETV Bharat / bharat

ವಯನಾಡೋ, ರಾಯ್ ಬರೇಲಿಯೋ ಎಂಬ ಸಂದಿಗ್ಧತೆ: ರಾಹುಲ್​ ಗಾಂಧಿ ಹೇಳಿದ್ದೇನು? - Rahul Gandhi - RAHUL GANDHI

ನಾನು ವಯನಾಡ್ ಸಂಸದನಾಗಿ ಮುಂದುವರೆಯಬೇಕೋ ಅಥವಾ ರಾಯ್ ಬರೇಲಿಯ ಸಂಸದನಾಗಿ ಇರಬೇಕೋ ಎಂಬ ಸಂದಿಗ್ಧತೆ ನನ್ನ ಮುಂದೆ ಇದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

Rahul Gandhi Holds Roadshow In Malappuram.
ಮಲ್ಲಾಪುರಂನಲ್ಲಿ ರಾಹುಲ್​ ಗಾಂಧಿ ರೋಡ್ ಶೋ​ ನಡೆಸಿದರು. (IANS)
author img

By ANI

Published : Jun 12, 2024, 8:22 PM IST

ವಯನಾಡ್(ಕೇರಳ): 2024ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್​ ಬರೇಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಗೆಲುವು ಸಾಧಿಸಿದ್ದಾರೆ. ಈಗ ಯಾವ ಕ್ಷೇತ್ರದ ಸಂಸದರಾಗಿ ಅವರು ಮುಂದುವರೆಯುತ್ತಾರೆ, ಯಾವ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ಎರಡೂ ರಾಜ್ಯಗಳಿಗೆ ರಾಹುಲ್​ ಭೇಟಿ ನೀಡಿ, ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದರ ನಡುವೆ ವಯನಾಡ್ ಕ್ಷೇತ್ರವನ್ನೇ ಅವರು ಬಿಟ್ಟುಕೊಡಲಿದ್ದಾರೆ ಎಂಬ ಸುಳಿವು ಪಕ್ಷದ ಮುಖಂಡರು ಕೊಟ್ಟಿದ್ದರೆ, ಈ ವಿಷಯದಲ್ಲಿ ತಾವು ಇನ್ನೂ ಉಭಯ ಸಂಕಟದಲ್ಲಿ ಇರುವುದಾಗಿ ಖುದ್ದಾಗಿ ಸಂಸದ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಮಂಗಳವಾರ ರಾಯ್​ಬರೇಲಿ ಕ್ಷೇತ್ರಕ್ಕೆ ತೆರಳಿದ್ದ ರಾಹುಲ್​ ಗಾಂಧಿ, ಇಂದು ಕೇರಳದ ಮಲ್ಲಾಪುರಂಗೆ ಭೇಟಿ ನೀಡಿದರು. ಕಾಂಗ್ರೆಸ್​ ಹಾಗೂ ಯುಡಿಎಫ್​ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಈ ವೇಳೆ, ಬೃಹತ್​ ರೋಡ್ ಶೋ​ ನಡೆಸಿ, ಸಾರ್ವಜನಿಕ ಸಭೆಯಲ್ಲೂ ಅವರು ಪಾಲ್ಗೊಂಡು ಮಾತನಾಡಿದರು.

ಲೋಕಸಭೆಗೆ ಎರಡನೇ ಅವಧಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ವಯನಾಡ್ ಜನತೆಗೆ ಧನ್ಯವಾದ ಅರ್ಪಿಸಿದ ರಾಹುಲ್​, ''ನಾನು ಆದಷ್ಟ ಬೇಗ ನಿಮ್ಮನ್ನು ನೋಡಲು ಎದುರು ನೋಡುತ್ತಿದ್ದೆ. ನಾನು ವಯನಾಡ್ ಸಂಸದನಾಗಿ ಮುಂದುವರೆಯಬೇಕೋ ಅಥವಾ ರಾಯ್ ಬರೇಲಿಯ ಸಂಸದನಾಗಿ ಇರಬೇಕೋ ಎಂಬ ಸಂದಿಗ್ಧತೆ ನನ್ನ ಮುಂದೆ ಇದೆ. ಆದರೆ, ನಾನು ನಿಮಗೆ ಹೇಳುವುದೇನೆಂದರೆ, ನನ್ನ ನಿರ್ಧಾರದಿಂದ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳಿಗೆ ಜನತೆ ಸಂತೋಷ ಪಡಬೇಕು'' ಎಂದು ಮನವಿ ಮಾಡಿದರು.

ಭಾರತದ ಬಡ ಜನರೇ ನನ್ನ ದೇವರು - ರಾಹುಲ್​: ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ ಅವರು ತಾವು ಜೈವಿಕನಾಗಿ ಜನಿಸಿಲ್ಲ ಮತ್ತು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ದೇವರಿಂದಲೇ ನಾನು ಭೂಮಿಗೆ ಬಂದಿರುವುದು ಎಂದು ಹೇಳಿದ್ದರು. ಪ್ರಧಾನಿ ಹೇಳುವ ರೀತಿಯಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ದೇವರಿಂದ ನಾನು ಯಾವುದೇ ನಿರ್ದೇಶನ ಸ್ವೀಕರಿಸುವುದಿಲ್ಲ. ಮೋದಿ ಅವರು ಅದಾನಿ ಮತ್ತು ಅಂಬಾನಿಯ ಪರವಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ'' ಎಂದು ಟೀಕಿಸಿದರು.

''ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿ ಅವರಿಗೆ ಹಸ್ತಾಂತರಿಸಲು ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೋದ್ಯಮಿಗೆ ಸಹಾಯ ಮಾಡಲು 'ಅಗ್ನಿವೀರ್' ಯೋಜನೆ ಜಾರಿ ಮಾಡಲು ಸಹ ದೇವರೇ ಪ್ರಧಾನಿ ಅವರಿಗೆ ನಿರ್ದೇಶನ ನೀಡಿದ್ದೀರಾ?. ದುರದೃಷ್ಟವಶಾತ್, ಅವರಂತೆ ನಾನು ಆ ಸುಖಭೋಗವನ್ನು ಹೊಂದಿಲ್ಲ. ಏಕೆಂದರೆ, ನಾನು ಮನುಷ್ಯ. ದೇವರು ನನಗೆ ಆದೇಶಿಸುವುದಿಲ್ಲ. ನನ್ನ ದೇವರೆಂದರೆ, ಭಾರತದ ಬಡ ಜನರು ಹಾಗೂ ವಯನಾಡಿನ ಜನತೆ. ನಾನು ಜನರೊಂದಿಗೆ ಮಾತನಾಡುತ್ತೇನೆ. ನಾನು ಏನು ಮಾಡಬೇಕೆಂಬುವುದು ಸಹ ಆ ಜನತೆಯೇ ನನಗೆ ಹೇಳುತ್ತಾರೆ" ಎಂದು ರಾಹುಲ್​ ಹೇಳಿದರು.

ಮುಂದುವರೆದು, ''2024ರ ಲೋಕಸಭಾ ಚುನಾವಣೆಯು ಸಂವಿಧಾನದ ರಕ್ಷಣೆಗಾಗಿ ನಡೆದ ಹೋರಾಟವಾಗಿತ್ತು. ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಮತ್ತು ವಿನಯದಿಂದ ಅಹಂಕಾರವನ್ನು ಸೋಲಿಸಲಾಗಿದೆ. ಒಂದು ಕಡೆ ಲಕ್ಷಾಂತರ ಭಾರತೀಯರು ತಮ್ಮ ವಿಭಿನ್ನ ಸಂಪ್ರದಾಯಗಳು, ಭಾಷೆಗಳು, ಸಂಸ್ಕೃತಿಗಳು ಮತ್ತು ಇತಿಹಾಸಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಮತ್ತು ಅದೇ ತಮ್ಮ ಭವಿಷ್ಯ ಎಂದು ನಂಬುತ್ತಾರೆ. ಮತ್ತೊಂದೆಡೆ, ಮೋದಿ ಮತ್ತು ಅಮಿತ್ ಶಾ ಅವರು ಜನತೆ ಯಾವ ಭಾಷೆ ಮಾತನಾಡಬೇಕು ಮತ್ತು ಯಾವ ಸಂಪ್ರದಾಯ ಅನುಸರಿಸಬೇಕು ಎಂದು ತಾವೇ ನಿರ್ಧರಿಸಬೇಕೆಂದು ಬಯಸುತ್ತಾರೆ. ಇಬ್ಬರಿಗೂ ಮೂಲಭೂತವಾಗಿಯೇ ತಪ್ಪು ತಿಳುವಳಿಕೆ ಇದೆ'' ಎಂದು ಕಿಡಿಕಾರಿದರು.

''ಮೋದಿ, ಅಮಿತ್ ಶಾ ತಾವು ರಾಜಕೀಯ ಅಧಿಕಾರ, ಹೊಂದಿರುವುದರಿಂದ ತಮಗೆ ಬೇಕಾಗಿರುವುದನ್ನು ಜನರಿಗೆ ನಿರ್ದೇಶಿಸಬಹುದು ಎಂದು ಭಾವಿಸಿದ್ದರು. ಆದರೆ, ಕೇರಳ, ಉತ್ತರ ಪ್ರದೇಶ ಮತ್ತು ಇತರ ಎಲ್ಲ ರಾಜ್ಯಗಳ ಜನರು ನಮಗೆ ಬೇಕಾದುದನ್ನು ನೀವು ನಿರ್ದೇಶಿಸಲು ಸಾಧ್ಯವಿಲ್ಲ. ನಮಗೆ ಸಂವಿಧಾನವೇ ನಮ್ಮ ಧ್ವನಿ, ಸಂವಿಧಾನವನ್ನು ಮುಟ್ಟಬೇಡಿ ಎಂದು ಪ್ರಧಾನಿಗೆ ಜನತೆ ತೋರಿಸಿದ್ದಾರೆ. ವಾರಣಾಸಿಯಲ್ಲಿ ಖುದ್ದು ಪ್ರಧಾನಿ ಸೋಲಿನಿಂದ ಪಾರಾಗಿದ್ದು, ಅಯೋಧ್ಯೆಯ ಜನರು ಸಹ ನಾವು ದ್ವೇಷ ಮತ್ತು ಹಿಂಸಾಚಾರ ಇಷ್ಟಪಡುವುದಿಲ್ಲ ಎಂಬ ಸಂದೇಶ ಬಿಜೆಪಿಗೆ ನೀಡಿದ್ದಾರೆ. ಆದ್ದರಿಂದ, ಪ್ರಧಾನಿ ಮೋದಿ ಈಗ ತಮ್ಮ ವರ್ತನೆ ಬದಲಾಯಿಸಬೇಕಾಗಿದೆ'' ಎಂದೂ ಸಲಹೆ ನೀಡಿದರು.

ಎಲ್ಲರೂ ರಾಹುಲ್​ಗೆ ಬೆಂಬಲಿಸಬೇಕು-ಸುಧಾಕರನ್: ಇದೇ ಸಭೆಯಲ್ಲಿ ಕೇರಳ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಕೆ.ಸುಧಾಕರನ್ ಮಾತನಾಡಿ, ''ರಾಷ್ಟ್ರವನ್ನು ಮುನ್ನಡೆಸಬೇಕಾಗಿರುವ ರಾಹುಲ್ ಗಾಂಧಿ ಅವರು ವಯನಾಡ್​ ಕ್ಷೇತ್ರದಲ್ಲಿ ಉಳಿಯುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾವು ದುಃಖಿಸಬೇಕಾಗಿಲ್ಲ. ಪ್ರತಿಯೊಬ್ಬರೂ ಅದನ್ನು ಅರ್ಥಮಾಡಿಕೊಳ್ಳಬೇಕು. ಅವರಿಗೆ ತಮ್ಮ ಎಲ್ಲ ಬೆಂಬಲವನ್ನು ನೀಡಬೇಕು'' ಎಂದು ಹೇಳಿದರು.

ಈ ಮೂಲಕ ವಯನಾಡ್​ ಕ್ಷೇತ್ರಕ್ಕೆ ರಾಹುಲ್​ ರಾಜೀನಾಮೆ ನೀಡಲಿದ್ದಾರೆ ಎಂಬ ಸುಳಿವು ನೀಡಿದರು. 2019ರ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಅಮೇಥಿ ಹಾಗೂ ವಯನಾಡ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆಗ ಅಮೇಥಿಯಲ್ಲಿ ಸೋತಿದ್ದ ಅವರ ಕೈಯನ್ನು ವಯನಾಡ್​ ಹಿಡಿದಿತ್ತು.

ಇದನ್ನೂ ಓದಿ: ಪಾಕಿಸ್ತಾನ ಭಾರತದೊಂದಿಗೆ ಶಾಂತಿ ಬಯಸುತ್ತಿದೆ, ಅವರಿಗೆ ನಾವು ಬಾಗಿಲು ತೆರೆಯೋಣ: ಫಾರೂಕ್ ಅಬ್ದುಲ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.