ETV Bharat / bharat

ಸಿಎಎ ಬಿಜೆಪಿಯ ಚುನಾವಣಾ ಗಿಮಿಕ್, ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಅವಕಾಶ ನೀಡಲ್ಲ: ಮಮತಾ ಬ್ಯಾನರ್ಜಿ - Citizenship Amendment Act

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಹೊಸ ನಿಯಮಗಳ ಅಡಿ ಅರ್ಜಿ ಸಲ್ಲಿಸುವವರನ್ನು ತಕ್ಷಣಕ್ಕೆ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದರು.

I will not allow CAA-NRC in West Bengal: CM Mamata Banerjee
ಸಿಎಎ ಬಿಜೆಪಿಯ ಚುನಾವಣಾ ಗಿಮಿಕ್, ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಅವಕಾಶ ನೀಡಲ್ಲ: ಮಮತಾ ಬ್ಯಾನರ್ಜಿ
author img

By ETV Bharat Karnataka Team

Published : Mar 12, 2024, 4:40 PM IST

ಹಬ್ರಾ (ಪಶ್ಚಿಮ ಬಂಗಾಳ): ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಅಧಿಸೂಚನೆ ಹೊರಡಿಸಿರುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಅಲ್ಲದೇ, ಹೊಸ ನಿಯಮಗಳ ಅಡಿ ಅರ್ಜಿ ಸಲ್ಲಿಸುವವರನ್ನು ತಕ್ಷಣಕ್ಕೆ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಸಿಎಎ ಅಥವಾ ಎನ್‌ಆರ್‌ಸಿಯನ್ನು ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

2019ರಲ್ಲಿ ಅಂಗೀಕರಿಸಲಾಗಿದ್ದ ಸಿಎಎ ಕಾಯ್ದೆಯನ್ನು ಕೇಂದ್ರ ಸರ್ಕಾರ ಸೋಮವಾರದಿಂದ ಜಾರಿ ಮಾಡಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ತೊಂದರೆಗೆ ಒಳಗಾದ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವ ಒದಗಿಸುತ್ತದೆ.

ಇಂದು ಉತ್ತರ 24 ಪರಗಣದ ಬನಿಪುರದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಟಿಎಂಸಿ ನಾಯಕಿಯಾದ ಮಮತಾ ಬ್ಯಾನರ್ಜಿ ಮಾತನಾಡಿ, ನಾನು ಕಳೆದ ರಾತ್ರಿ ನಿಯಮಗಳನ್ನು ಅಧ್ಯಯನ ಮಾಡಿದ್ದೇನೆ. ಕಾನೂನು ಸಲಹೆಯನ್ನೂ ಪಡೆದುಕೊಂಡಿದ್ದೇನೆ. ಇದು ಬಿಜೆಪಿಯಿಂದ ಒಂದು ಅಪಾಯಕಾರಿ ಬಲೆಯಾಗಿದೆ. ಸಿಎಎ ನೇರವಾಗಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್​ಆರ್​ಸಿ)ಯೊಂದಿಗೆ ಸಂಬಂಧ ಹೊಂದಿದೆ. ಈ ಸಿಎಎ ಮತ್ತು ಅದರ ನಿಯಮಗಳು ಮಾನ್ಯ ನಾಗರಿಕರನ್ನು ಅಕ್ರಮ ವಲಸಿಗರನ್ನಾಗಿ ಮಾಡುತ್ತವೆ. ಇದು ಧಾರ್ಮಿಕ ನೆಲೆಗಟ್ಟಿನಲ್ಲಿ ತಾರತಮ್ಯ ಮಾಡುತ್ತದೆ. ಸಂವಿಧಾನದ ಮೂಲ ತತ್ವಗಳ ಮೇಲೆ ನೇರ ದಾಳಿಯಾಗಿದೆ ಎಂದು ದೂರಿದರು.

ಒಮ್ಮೆ ನೀವು ಸಿಎಎ ನಿಯಮಗಳ ಅಡಿ ಅರ್ಜಿ ಸಲ್ಲಿಸಿದ ನಂತರ ಅವರು ನಿಮ್ಮನ್ನು ಬಂಧನ ಶಿಬಿರಗಳಿಗೆ ಕಳುಹಿಸುತ್ತಾರೆ. ಈ ನಿಯಮದಡಿ ಅರ್ಜಿ ಸಲ್ಲಿಸುವವರ ಆಸ್ತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಇದುವರೆಗೆ ಖರೀದಿಸಿದ ಆಸ್ತಿಗಳ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಹೊಸ ನಿಯಮದ ಅಡಿ ಅನ್ವಯಿಸುವ ಯಾರೊಬ್ಬರ ಜಾತಿಗಳ ಪ್ರಕಾರ ಮೀಸಲಾತಿ ಸ್ಥಿತಿ ಬಗ್ಗೆಯೂ ನಿಖರತೆ ಇಲ್ಲ. ಒಮ್ಮೆ ಅರ್ಜಿ ಸಲ್ಲಿಸಿದರೆ, ಅವನು ಅಥವಾ ಅವಳು ಈ ದೇಶದ ಪ್ರಜೆಯಾಗುವುದನ್ನು ತಡೆಯುತ್ತದೆ. ಅಂತಹವರನ್ನು ಅಕ್ರಮ ವಲಸಿಗರು ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಆ ವ್ಯಕ್ತಿಯ ಎಸ್​ಸಿ, ಎಸ್​ಟಿ ಅಥವಾ ಹಿಂದುಳಿದ ವರ್ಗದ ಸ್ಥಾನಮಾನಕ್ಕೆ ಇದುವರೆಗೆ ಅರ್ಹನಾಗಿದ್ದರೆ, ಅದರ ಸ್ಥಿತಿ ಏನಾಗಿರುತ್ತದೆ?, ಈ ಸಿಎಎ ಅಸಂವಿಧಾನಿಕವಾಗಿದ್ದು, 14ನೇ ವಿಧಿಗೆ ವಿರುದ್ಧವಾಗಿದೆ. ಇದು ಭಾರತದ ಜಾತ್ಯತೀತ ರಚನೆಗೆ ಸವಾಲುವೊಡ್ಡುತ್ತದೆ. ನೀವು ಯಾವುದೇ ಅರ್ಜಿ ಮೂಲಕ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಹ ಸಾಧ್ಯವಿಲ್ಲ. ಬಂಗಾಳದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ನಾನು ಬಿಡುವುದಿಲ್ಲ ಎಂದು ಮಮತಾ ಹೇಳಿದರು.

ಬಿಜೆಪಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಸಿಎಂ ಮಮತಾ, 2019ರಲ್ಲಿ ಅಸ್ಸೋಂನಲ್ಲಿ ಚುನಾವಣೆಗೆ ಮುಂಚೆಯೇ ಇದನ್ನು ಮಾಡಿದ್ದಾರೆ. ಎನ್‌ಆರ್‌ಸಿ ಹೆಸರಿನಲ್ಲಿ 19 ಲಕ್ಷ ಜನರಲ್ಲಿ 13 ಲಕ್ಷ ಬಂಗಾಳಿ ನಿವಾಸಿಗಳನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಈಗ ಚುನಾವಣೆಗೂ ಮುನ್ನ ಮತ್ತೆ ಮಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಇಡೀ ಈಶಾನ್ಯ ಭಾಗ ಆತಂಕದಲ್ಲಿದೆ. ಇದರಲ್ಲಿ ಅಫ್ಘಾನಿಸ್ತಾನವನ್ನು ಸೇರಲಾಗಿದೆ. ಮ್ಯಾನ್ಮಾರ್ ಅಥವಾ ಶ್ರೀಲಂಕಾವನ್ನು ಯಾಕೆ ಸೇರಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಜನರ ಬದುಕನ್ನ ಅತಂತ್ರಗೊಳಿಸಿದೆ- ಮಮತಾ: ಕೇವಲ ಎರಡರಿಂದ ಮೂರು ಸ್ಥಾನಗಳಿಗಾಗಿ ಬಿಜೆಪಿ ಇಂತಹ ಕೀಳುಮಟ್ಟಕ್ಕೆ ಇಳಿದು ಎಷ್ಟೋ ಜನರ ಬದುಕು ಮತ್ತು ಭವಿಷ್ಯವನ್ನು ಅತಂತ್ರಗೊಳಿಸುತ್ತಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ವೋಟರ್ ಕಾರ್ಡ್ ಹೊಂದಿರುವವರು, ಅವರ ಹೆಸರಿನಲ್ಲಿ ಜಮೀನು ಹೊಂದಿರುವವರು, ಎಲ್ಲವನ್ನೂ ಅಕ್ರಮ ಎಂದು ಕರೆಯುತ್ತಾರೆ. ಏಕೆಂದರೆ, ನೀವು ಸಿಎಎ ನಿಯಮಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕ್ಷಣದಲ್ಲಿ ನೀವು ತಕ್ಷಣವೇ ವಿದೇಶಿಯಾಗಿ ಬದಲಾಗುತ್ತೀರಿ. ಆ ಎಲ್ಲ ಮಾನ್ಯ ದಾಖಲೆಗಳ ಭವಿಷ್ಯ ಏನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದರು.

ಇದು ಬಿಜೆಪಿಯ ಮತ್ತೊಂದು ಜುಮ್ಲಾ (ಸುಳ್ಳು). ಅವರ ಉದ್ದೇಶಗಳು ತುಂಬಾ ಪಾರದರ್ಶಕವಾಗಿದ್ದರೆ, ಆಧಾರ್ ಕಾರ್ಡ್‌ಗಳನ್ನು ಏಕೆ ನಿಷ್ಕ್ರಿಯಗೊಳಿಸಲಾಗುತ್ತದೆ?, ಸಿಎಎ ನಿಯಮಗಳ ಅಡಿಯಲ್ಲಿ ಅರ್ಜಿ ಸಲ್ಲಿಸಲು, ನೀವು ನಿಮ್ಮ ಪೋಷಕರ ಜನ್ಮ ಪ್ರಮಾಣಪತ್ರಗಳನ್ನು ಒದಗಿಸಬೇಕು. ನಿಮ್ಮಲ್ಲಿ ಎಷ್ಟು ಮಂದಿಗೆ ಆ ದಾಖಲೆಗಳಿವೆ?. ಕನಿಷ್ಠ ನನ್ನ ಬಳಿಯೂ ಇಲ್ಲ. ಅವರು (ಬಿಜೆಪಿಯವರು) ಸುಳ್ಳುಗಳನ್ನು ಹೇಳುತ್ತಿದ್ದಾರೆ. ಚುನಾವಣೆಗೆ ಮುನ್ನ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಸಿಎಎ ಅಥವಾ ಎನ್‌ಆರ್‌ಸಿಯನ್ನು ಜಾರಿಗೆ ಬಿಡುವುದಿಲ್ಲ ಎಂದು ಒತ್ತಿ ಹೇಳಿದ ಮಮತಾ, ಜನತೆ ಗೊಂದಲಕ್ಕೊಳಗಾಗಲು ಅಥವಾ ಭಯಪಡಲು ಯಾವುದೇ ಅವಕಾಶವಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವೆಲ್ಲರೂ ಈ ದೇಶದ ಪ್ರಜೆಗಳು. ಅವಕಾಶ ಸಿಕ್ಕರೆ ಈ ಕಾಯ್ದೆಯನ್ನು ರದ್ದುಪಡಿಸುತ್ತೇವೆ. ಇದಕ್ಕಾಗಿ ನನ್ನ ಪ್ರಾಣವನ್ನೂ ತ್ಯಾಗ ಮಾಡಲು ನಾನು ಸಿದ್ಧ. ಆದರೆ, ನಾನು ನಮ್ಮ ರಾಜ್ಯದಲ್ಲಿ ಸಿಎಎ ಅಥವಾ ಎನ್‌ಆರ್‌ಸಿಗೆ ಅನುಮತಿಸುವುದಿಲ್ಲ ಎಂದು ಹೇಳಿದರು.

ಇದೇ ವೇಳೆ, ಮಣಿಪುರದಲ್ಲಿ ದೌರ್ಜನ್ಯ ಮತ್ತು ಚಿತ್ರಹಿಂಸೆಗಾಳಗಾದ ಮಹಿಳೆಯರ ಬಗ್ಗೆ ಬಿಜೆಪಿಯವರು ಯೋಚಿಸಲೇ ಇಲ್ಲ. ಕಳೆದ ಬಾರಿ ರಾಜ್ಯದಲ್ಲಿ 18 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದೀರಿ. ಆದರೆ, ರಾಜ್ಯದ ನಿಜವಾದ ಪಾಲಿನ ಹಣಕ್ಕೆ ಅಡ್ಡಗಾಲು ಹಾಕುವುದನ್ನು ಬಿಟ್ಟರೆ, ಅವರು ಇದುವರೆಗೂ ರಾಜ್ಯಕ್ಕೆ ಏನು ಮಾಡಿದ್ದಾರೆ?. ಆದರೆ, ನಾನು ಬಂಗಾಳವನ್ನು ಸ್ವಾವಲಂಬಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ. ನಮ್ಮ ಸರ್ಕಾರವು ಇಂದಿನಿಂದ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಉದ್ಯೋಗ ನೀಡಲು ಕರ್ಮಶ್ರೀ ಯೋಜನೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಎ ಜಾರಿ: ಕೇಂದ್ರದ ನಿರ್ಧಾರಕ್ಕೆ ಪರ- ವಿರೋಧ; ಹೀಗಿದೆ ರಾಜಕೀಯ ನಾಯಕರ ಪ್ರತಿಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.